ಕುಂಭಮೇಳ ಸುಂದರಿಯ ಲುಕ್ಕೇ ಅದಲು.. ಬದಲು; ವಧುವಿನ ಗೆಟಪ್​ನಲ್ಲಿ ಮೊನಾಲಿಸಾ; VIDEO

author-image
Veena Gangani
Updated On
ಕುಂಭಮೇಳ ಸುಂದರಿಯ ಲುಕ್ಕೇ ಅದಲು.. ಬದಲು; ವಧುವಿನ ಗೆಟಪ್​ನಲ್ಲಿ ಮೊನಾಲಿಸಾ; VIDEO
Advertisment
  • ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ
  • ಹೊಸ ಲುಕ್​ನಲ್ಲಿ ಗಾಜುಗಣ್ಣಿನ ಹುಡುಗಿ ಮೊನಾಲಿಸಾ
  • ಈಕೆಯ ಸೌಂದರ್ಯ, ಕಣ್ಣೋಟಕ್ಕೆ ಫಿದಾ ಆದ್ರೂ ನೆಟ್ಟಿಗರು

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ದಿನದಿಂ ದಿನಕ್ಕೆ ಮೊನಾಲಿಸಾ ಹೊಸ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!

publive-image

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್‌ ಒಬ್ಬರ ಕಣ್ಣಿಗೆ ಬಿದಿದ್ದರು ಈ ಮೊನಾಲಿಸಾ. ತಮ್ಮ ಬ್ಯೂಟಿಫುಲ್​ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್​ ಬ್ಯುಸಿಯಾಗಿದ್ದಾರೆ. ಅದರಲ್ಲೂ ಮೇಕಪ್​ ಆರ್ಟಿಸ್ಟ್ ಮೊನಾಲಿಸಾ ಬಿಡುತ್ತಿಲ್ಲ.

publive-image

ಹೊಸ ಹೊಸ ರೀತಿಯಲ್​ ಮೊನಾಲಿಸಾಗೆ ಮೈಕಪ್​ ಮಾಡಿ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಮೊನಾಲಿಸಾ ಅವರ ವೀಡಿಯೊವನ್ನು ಮೇಕ್ ಓವರ್ ಕಾವ್ಯ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಆ ವಿಡಿಯೋದಲ್ಲಿ ಮೇಕಪ್ ಕಲಾವಿದೆ ಬಬ್ಲಿ ಅಹಿರ್ವಾರ್ ಮೊನಾಲಿಸಾಳನ್ನು ವಧುವಿನಂತೆ ಅಲಂಕರಿಸಿದ್ದಾರೆ. ಆದರೆ ಕೆಂಪು ಉಡುಪನ್ನು ಧರಿಸಿದ ಮೊನಾಲಿಸಾ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾಳೆ. ಸದ್ಯ ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment