Maha Kumbh; ಕುಂಭ ಮೇಳ ದುರಂತ, ಬೆಳಗಾವಿಯಲ್ಲಿ ಶೋಕಸಾಗರ.. ಕಣ್ಣೀರಿಡುತ್ತ ಕೂತ ಕುಟುಂಬ

author-image
Bheemappa
Updated On
Maha Kumbh; ಕುಂಭ ಮೇಳ ದುರಂತ, ಬೆಳಗಾವಿಯಲ್ಲಿ ಶೋಕಸಾಗರ.. ಕಣ್ಣೀರಿಡುತ್ತ ಕೂತ ಕುಟುಂಬ
Advertisment
  • 60 ಯಾತ್ರಿಗಳು ಬಸ್​ ಮುಗಿಸಿಕೊಂಡು ಮಹಾಕುಂಭಕ್ಕೆ ಹೋಗಿದ್ದರು
  • ಈಗಾಗಲೇ ಪ್ರಯಾಗರಾಜ್​ನಿಂದ ದೆಹಲಿಗೆ ರವಾನೆ ಮಾಡಲಾಗಿದೆ
  • ಉಳಿದವರು ಸುರಕ್ಷಿತ ಎಂದು ವಿಡಿಯೋ ಬಿಡುಗಡೆ ಮಾಡಿ ಮಾಹಿತಿ

ಕುಂಭಮೇಳದಲ್ಲಿ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ-ಮಗಳು ಮಿಸ್ಸಿಂಗ್ ಎಂದು ಬೆಳಿಗ್ಗೆಯಿಂದಲೇ ಸುದ್ದಿಯಾಗಿತ್ತು. ಆದ್ರೆ ಸಂಜೆ ವೇಳೆ ಇಬ್ಬರೂ ಕಣ್ಮುಚ್ಚಿದ್ದಾರೆ ಎಂದು ತಿಳಿದು ಬಂದಿತ್ತು. ಈ ಬೆನ್ನಲ್ಲೇ ರಾಜ್ಯದ ಮತ್ತಿಬ್ಬರು ಜೀವ ಕಳೆದುಕೊಂಡಿದ್ದಾರೆ. ಕುಂಭಮೇಳದಲ್ಲಿ ಒಂದೇ ಜಿಲ್ಲೆಯ ನಾಲ್ವರು ಕಣ್ಮುಚ್ಚಿರುವುದು ಅವರ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಒಂದು, ಮತ್ತೊಂದು, ಇನ್ನೊಂದು ಅಂತಾ ಏರಿಕೆ ಆಗ್ತಾನೆ ಇದೆ. ಪ್ರಯಾಗ್​ರಾಜ್ ಮಹಾಕುಂಭಮೇಳದ ಕಾಲ್ತುಳಿದಲ್ಲಿ ನಡೆದ ದುರಂತ. ಅದರಲ್ಲಾದ ಸಾವಿನ ಸಂಖ್ಯೆಯಲ್ಲಿ ಏರಿಕೆ ಅನೇಕ ಜನರನ್ನ ಬೆಚ್ಚಿ ಬೀಳಿಸುತ್ತಿದೆ. ಈ ದುರಂತದಲ್ಲಿ ಕರ್ನಾಟಕದ ನಾಲ್ವರು ಭಕ್ತರು ಜೀವ ಕಳೆದುಕೊಂಡಿದ್ದಾರೆ.

publive-image

ದೆಹಲಿ ಮೂಲಕ ಇಂದು ಬೆಳಗಾವಿಗೆ ಮೃತದೇಹಗಳ ರವಾನೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮೌನಿ ಅಮಾವಾಸ್ಯೆ ಹಿನ್ನೆಲೆ ಪವಿತ್ರಾ ಸ್ನಾನಕ್ಕಾಗಿ ತಡರಾತ್ರಿ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಕರ್ನಾಟಕದಿಂದ ಹೋಗಿದ್ದ ಬೆಳಗಾವಿ ಮೂಲದ 60 ಯಾತ್ರಿಕರಲ್ಲಿ ನಾಲ್ವರು ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ, ಅವರ ಮಗಳು ಮೇಘಾ, ಶೆಟ್ಟಿಗಲ್ಲಿಯ ಅರುಣ್ ಕೋಪರ್ಡೆ ಹಾಗೂ ಮಹಾದೇವಿ ಇನ್ನಿಲ್ಲವಾಗಿದ್ದಾರೆ. ಸದ್ಯ ಈ ನಾಲ್ವರ ಮೃತದೇಹಗಳನ್ನು 2 ಆಂಬ್ಯುಲೆನ್ಸ್​ಗಳಿಗೆ ದೆಹಲಿಗೆ ರವಾನಿಸಲಾಗಿದೆ. ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿಗೆ ರವಾನಿಸಲಾಗುತ್ತಿದೆ.

56 ಜನ ಯಾತ್ರಾರ್ಥಿಗಳು ಮರಳಿ ಬೆಳಗಾವಿಯತ್ತ ಪ್ರಯಾಣ

ಸದ್ಯಕ್ಕೆ ಮಾಹಿತಿ ಸಿಕ್ಕಿರುವ ಪ್ರಕಾರ ಪ್ರಯಾಗ್​ರಾಜ್‌ಗೆ ಹೋಗಿದ್ದ ಬೆಳಗಾವಿಯ ಇನ್ನುಳಿದ 56 ಯಾತ್ರಾರ್ಥಿಗಳು ಸೇಫ್ ಆಗಿದ್ದಾರೆ. ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣಿಕರು ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ. ವಿಡಿಯೋ ಬಿಡುಗಡೆ ಮಾಡಿ ಉಳಿದವರು ಸುರಕ್ಷಿತರಾಗಿದ್ದಾರೆಂದು ಮಾಹಿತಿ ನೀಡಲಾಗಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.

‘ದೇವರ ಮನುಷ್ಯ’

ದೇವರ ಮನುಷ್ಯ ಅವರು. ಒಂದು ದಿನನೂ ಒಬ್ಬರಿಗೂ, ಸಣ್ಣ ಮಗುಗೂ ಕೆಟ್ಟದ್ದು ಬಯಸಿದವರು ಅಲ್ಲ.

ಮೇಘ, ಮೃತ ಅರುಣ್ ಸಂಬಂಧಿ

publive-image

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ ನಡೆಸಬೇಕು.. ಉದ್ಯೋಗಾಕಾಂಕ್ಷಿಗಳು ಏನೇನು ಮಾಡಬೇಕು?

ದುರಂತದಲ್ಲಿ ಬೆಳಗಾವಿಯ ನಾಲ್ವರು ಸೇರಿದಂತೆ ಹಲವರು ದುರಂತ ಅಂತ್ಯದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ ಎಂದು ಬೆಳಗಾವಿ ಸಂಸದ ಜಗದೀಶ್​ ಶೆಟ್ಟರ್​ ಸಂತಾಪ ಸೂಚಿಸಿದ್ದಾರೆ.

ಮೃತದೇಹಗಳನ್ನು ತರುವ ಕೆಲಸ ಏನೇನು ಆಗಬೇಕು ಅದೆಲ್ಲಾ ಕೆಲಸ ಆಗುತ್ತಿದೆ. ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಲಾಗುತ್ತಿದೆ. ಇದು ದುಃಖಕರವಾದ ಸಂಗತಿ. ಇದು ನಡೆಯಬಾರದಿತ್ತು. ಅನಿವಾರ್ಯವಾಗಿ ನಡೆದಿದೆ.

ಜಗದೀಶ್​ ಶೆಟ್ಟರ್, ಬೆಳಗಾವಿ ಸಂಸದ

ಮಹಾ ಕುಂಭಮೇಳದ ಮೂಲಕ ದೇವರ ದರ್ಶನಕ್ಕೆ ಹೋದವರು ದೇವರ ಪಾದ ಸೇರಿದ್ದಾರೆ. ಇನ್ನು ಕೆಲವು ನಾಪತ್ತೆ ಆಗಿದ್ದಾರೆ. ಮತ್ತೊಮ್ಮೆ ಇಂಥ ಅವಘಡ ಸಂಭವಿಸಿದಂತೆ ಉತ್ತರಪ್ರದೇಶ ಸರ್ಕಾರ ಎಚ್ಚರವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment