/newsfirstlive-kannada/media/post_attachments/wp-content/uploads/2025/02/Maha_Kumbh_Mela.jpg)
144 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕುಂಭಮೇಳಕ್ಕೆ ಶಿವರಾತ್ರಿಯಂದು ತೆರೆ ಬಿದ್ದಿದೆ. ಜಗತ್ತಿನ ಮೂಲೆ ಮೂಲೆಯಿಂದ ಬಂದ ಕೋಟಿ ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿದ್ದಾರೆ. ಈ ನಡುವೆ ಮುಂದಿನ ಕುಂಭಮೇಳ ಎಲ್ಲಿ ನಡೆಯಲಿದೆ ಅನ್ನೋ ಅಪ್ಡೇಟ್ ಕೂಡ ಸಿಕ್ಕಿದೆ.
45 ದಿನಗಳು, 66 ಕೋಟಿ ಭಕ್ತರು, ತ್ರೀವೇಣಿ ಸಂಗಮದಲ್ಲಿ ಪುಣ್ಯಸ್ನಾನ. 144 ವರ್ಷಗಳ ಬಳಿಕ ಪ್ರಯಾಗ್ರಾಜ್ನಲ್ಲಿ ಐತಿಹಾಸಿಕ ವೈಭವ. ಜನವರಿ 13ರಂದು ಪ್ರಯಾಗ್ರಾಜ್ನಲ್ಲಿ ಆರಂಭಗೊಂಡಿದ್ದ ಈ ಮಹಾಕುಂಭಮೇಳ ಸತತ ಆರು ವಾರಗಳ ನಂತರ ಮಹಾಶಿವರಾತ್ರಿಯ ಅಮೃತಸ್ನಾನದೊಂದಿಗೆ ಸಂಪನ್ನಗೊಂಡಿದೆ.
66 ಕೋಟಿಗೂ ಅಧಿಕ ದೇಶ, ವಿದೇಶಿ ಭಕ್ತರಿಂದ ಪುಣ್ಯಸ್ನಾನ
ಈ ಬಾರಿ ಈ ಮಹಾ ಕುಂಭಮೇಳದಲ್ಲಿ ಸುಮಾರು 66ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದಾರೆ. 40 ಕೋಟಿ ಜನರ ಆಗಮನದ ನಿರೀಕ್ಷೆಯಿಟ್ಟಿದ್ದ ಉತ್ತರ ಪ್ರದೇಶ ಸರ್ಕಾರದ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಮಾಡಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಪ್ರಪಂಚದ ಮೂಲೆ ಮೂಲೆಯಿಂದ ಬಂದ ಕೋಟಿ ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಕೊನೆಯ ದಿನ 1 ಕೋಟಿ 53 ಲಕ್ಷ ಭಕ್ತರು ಗಂಗೆಯಲ್ಲಿ ಮಿಂದೆದ್ದಿದ್ದಾರೆ.
ಉತ್ತರಪ್ರದೇಶಕ್ಕೆ ಭರ್ಜರಿ ಆದಾಯ ತಂದ ಮಹಾಕುಂಭ
144 ವರ್ಷಗಳಿಗೊಮ್ಮೆ ನಡೆದ ಮಹಾಕುಂಭ ಮೇಳಾ ಉತ್ತರ ಪ್ರದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತಂದಿದೆ. 45 ದಿನಗಳ ಈ ಧಾರ್ಮಿಕ ಕಾರ್ಯಕ್ರಮದಿಂದ ಉತ್ತರ ಪ್ರದೇಶ ಸರ್ಕಾರಕ್ಕೆ 3 ಲಕ್ಷ ಕೋಟಿರೂ ಆದಾಯ ತಂದಿದೆ ಎಂದು ಅಂದಾಜಿಸಲಾಗಿದೆ. 10 ಕೋಟಿ ಜನರಿಗೆ ಉದ್ಯೋಗವೂ ನೀಡಿದೆ. ಇನ್ನು ಸಾಕಷ್ಟು ಸವಾಲುಗಳ ನಡುವೆಯೂ ಯಶಸ್ವಿಯಾಗಿ ಮಹಾಕುಂಭ ಮೇಳ ಅಂತ್ಯವಾಗದ್ದು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ. ಈ ಯಶಸ್ಸಿಗೆ ಕಾರಣರಾದ.. ಕುಂಭ ಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಮುಂದಿನ ‘ಪೂರ್ಣಕುಂಭಮೇಳ’ ನಡೆಯೋದು ಎಲ್ಲಿ..?
45 ದಿನಗಳ ಕಾಲ ನಡೆದ ಮಹಾಕುಂಭ ಮೇಳಕ್ಕೆ ತೆರೆ ಬಿದ್ದಿದೆ. ಇದಾದ ಬಳಿಕ ಮುಂದಿನ ಕುಂಭಮೇಳ ಎಲ್ಲಿ ನಡೆಯಲಿದೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ.
ಮುಂದಿನ ಕುಂಭ ಎಲ್ಲಿ..?
- 3 ವರ್ಷಕ್ಕೊಮ್ಮೆ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಕುಂಭಮೇಳ
- ಪ್ರಯಾಗ್ರಾಜ್, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕ್
- ಮುಂದಿನ ಪೂರ್ಣ ಕುಂಭಮೇಳ 2027ಕ್ಕೆ ನಾಸಿಕ್ನಲ್ಲಿ
- 12 ವರ್ಷಗಳ ಹಿಂದೆ ನಾಸಿಕ್ನಲ್ಲಿ ಪೂರ್ಣಕುಂಭ ನಡೆದಿತ್ತು
- ಮುಂದಿನ ಕುಂಭ ಗೋದಾವರಿ ನದಿ ತೀರದಲ್ಲಿ ನಡೆಯಲಿದೆ
ಇದನ್ನೂ ಓದಿ: ಗದ್ದೆಯಲ್ಲಿ 500 ಮುಖಬೆಲೆಯ ಕಂತೆ, ಕಂತೆ ನೋಟು ಸಿಕ್ಕ ರೈತನಿಗೆ ಬಿಗ್ ಶಾಕ್! ಏನಿದರ ಅಸಲಿಯತ್ತು?
ಇನ್ನು, ಈಗಾಗಲೇ ಮಹಾರಾಷ್ಟ್ರ ಸರ್ಕಾರ ಕುಂಭಮೇಳದ ಆಯೋಜನೆಗೆ ರೂಪುರೇಷೆಗಳನ್ನು ಹಾಕೋಕೆ ಶುರು ಮಾಡಿದೆ. ರಸ್ತೆಯ ಮೂಲಸೌಕರ್ಯದ ಅಭಿವೃದ್ಧಿಯ ಜೊತೆಗೆ ಟ್ರಾಫಿಕ್ ನಿರ್ವಹಣೆಯ ಬಗ್ಗೆ ಮತ್ತು ಸರಿಯಾದ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆಯಾಗ್ತಿದೆ ಅನ್ನೋ ಮಾಹಿತಿ ಇದೆ. ಅದೇನೆ ಇರಲಿ, 144 ವರ್ಷಕ್ಕೆೊಮ್ಮೆ ಆಚರಿಸುವ ಮಹಾ ಕುಂಭಮೇಳ ಈ ಪೀಳಿಗೆಗೆ ಸಿಕ್ಕಿರುವುದೇ ಪುಣ್ಯ. ಹೀಗಾಗಿ ವಿಶ್ವದ ಅತಿದೊಡ್ಡ ಧಾರ್ಮಿಕ ಆಚರಣೆಯನ್ನ ಕಣ್ಮುಂಬಿಕೊಂಡ ನಾವೆಲ್ಲಾರೂ ಪುಣ್ಯವಂತರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ