ಮಹಾಕುಂಭಮೇಳದಲ್ಲಿ ಒಬ್ಬ ಚಮತ್ಕಾರಿ ಬಾಬಾ; ಕಾಲಿನಿಂದ ಟಚ್‌ ಮಾಡಿದ್ರೆ ಸಾಕಂತೆ! ಏನಿವರ ಪವಾಡ?

author-image
admin
Updated On
ಮಹಾಕುಂಭಮೇಳದಲ್ಲಿ ಒಬ್ಬ ಚಮತ್ಕಾರಿ ಬಾಬಾ; ಕಾಲಿನಿಂದ ಟಚ್‌ ಮಾಡಿದ್ರೆ ಸಾಕಂತೆ! ಏನಿವರ ಪವಾಡ?
Advertisment
  • ಬಾಬಾ ಅರ್ಥತ್ರಾನ ಶಿಬಿರದ ಬಳಿ ಪ್ರತಿ ದಿನ ಸಾವಿರಾರು ಜನರು
  • ಪ್ರಯಾಗ್‌ರಾಜ್‌ನಲ್ಲಿ ಈಗ ಈ ಬಾಬಾ ಎಲ್ಲರ ಕೇಂದ್ರ ಬಿಂದು
  • ಮಹಾಕುಂಭಮೇಳ ಮುಕ್ತಾಯಕ್ಕೆ ಇನ್ನು 6 ದಿನಗಳು ಬಾಕಿ ಇದೆ

ಪ್ರಯಾಗ್‌ರಾಜ್‌ ಮಹಾಕುಂಭಮೇಳ ಇನ್ನೂ ಕೋಟಿ, ಕೋಟಿ ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ. ವಿಶ್ವ ವಿಖ್ಯಾತ ಈ ಮಹಾಕುಂಭಮೇಳ ಮುಕ್ತಾಯಕ್ಕೆ ಇನ್ನು 6 ದಿನಗಳು ಬಾಕಿ ಇದೆ. ಮಹಾಶಿವರಾತ್ರಿಯಂದು 144 ವರ್ಷದ ಮಹಾಕುಂಭಮೇಳಕ್ಕೆ ವಿದ್ಯುಕ್ತ ತೆರೆ ಬೀಳುತ್ತಿದೆ.

ಮಹಾಕುಂಭಮೇಳದಲ್ಲಿ ಒಬ್ಬ ಚಮತ್ಕಾರಿ ಬಾಬಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಈಗ ಈ ಬಾಬಾ ಎಲ್ಲರ ಕೇಂದ್ರ ಬಿಂದು ಆಗಿದ್ದು, ಇವರ ಶಿಬಿರದ ಮುಂದೆ ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದಾರೆ.
ಈ ಬಾಬಾ ಹೆಸರು ಅರ್ಥತ್ರಾನ. ಈ ಬಾಬಾನಿಂದ ಕ್ಯಾನ್ಸರ್ ಸೇರಿದಂತೆ ಎಲ್ಲಾ ಕಾಯಿಲೆಗಳು ವಾಸಿಯಾಗುತ್ತಂತೆ ಅನ್ನೋ ಮಾತು ಕೇಳಿ ಬಂದಿದೆ. ಬಾಬಾ ಅರ್ಥತ್ರಾನ ತನ್ನ ಕಾಲಿನಿಂದ ಜನರನ್ನು ಟಚ್ ಮಾಡ್ತಾರೆ. ಅದಾದ ಬಳಿಕ ಜನರ ರೋಗ, ಕಾಯಿಲೆಗಳು ಸಂಪೂರ್ಣ ವಾಸಿಯಾಗುತ್ತವೆ ಎಂದು ಭಕ್ತರು ನಂಬಿದ್ದಾರೆ.

ಇದನ್ನೂ ಓದಿ: ಅಮ್ಮನಿಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ಟ ಕುಂಭ ಮೇಳ ಸುಂದರಿ ಮೊನಾಲಿಸಾ; ಏನದು? 

ಮಹಾಕುಂಭಮೇಳದ ಸೆಕ್ಟರ್ 19ರಲ್ಲಿ ಬಾಬಾ ಅರ್ಥತ್ರಾನ ಶಿಬಿರ ತೆರೆದಿದ್ದು, ಪ್ರತಿ ದಿನ ಸಾವಿರಾರು ಜನರು ಜಮಾವಣೆ ಆಗುತ್ತಿದ್ದಾರೆ. ಕೊರೊನಾ ಕಾಲದಲ್ಲಿ ತಾನು ಕೊರೊನಾವನ್ನು ಗುಣಪಡಿಸುತ್ತೇನೆ ಎಂದು ಬಾಬಾ ಅರ್ಥತ್ರಾನ ಸಾಕಷ್ಟು ಸುದ್ದಿಯಾಗಿದ್ದರು.

publive-image

ಬಾಬಾ ಅರ್ಥತ್ರಾನ ಶಿವನ ಆಶೀರ್ವಾದದಿಂದ ಜನರ ರೋಗಗಳನ್ನು ನಿವಾರಣೆ ಮಾಡುತ್ತಿದ್ದೇನೆ. ದೇವರು ಶಕ್ತಿಶಾಲಿಯಾಗಿರುವುದನ್ನು ಕಲಿಸಿದ್ದಾನೆ. ದೇವರು ನನಗೆ ಈ ಶಕ್ತಿಯನ್ನು ಏಕೆ ಕೊಟ್ಟಿದ್ದಾನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಬಾಬಾ ಅರ್ಥತ್ರಾನ ಅವರ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment