ಮಹಾಕುಂಭಮೇಳದಿಂದ ಮತ್ತೊಂದು ಶಾಕಿಂಗ್ ಸುದ್ದಿ: ಕರ್ನಾಟಕ ಮೂಲದ ನಾಗಾಸಾಧು ದುರಂತ ಅಂತ್ಯ

author-image
admin
Updated On
ಮಹಾಕುಂಭಮೇಳದಿಂದ ಮತ್ತೊಂದು ಶಾಕಿಂಗ್ ಸುದ್ದಿ: ಕರ್ನಾಟಕ ಮೂಲದ ನಾಗಾಸಾಧು ದುರಂತ ಅಂತ್ಯ
Advertisment
  • ಪ್ರಯಾಗ್‌ರಾಜ್‌ ಮಹಾಕುಂಭಮೇಳದಲ್ಲಿ ಭೀಕರ ಕಾಲ್ತುಳಿತ
  • ರಾಜನಾಥ ಮಹಾರಾಜ್ ಸಾವಿನ ಬಗ್ಗೆ ಮಾಹಿತಿ ರವಾನೆ
  • ಪಾರ್ಥೀವ ಶರೀರವನ್ನು ಕಳಿಸುವಂತೆ ಸ್ವಾಮೀಜಿಗಳ ಮನವಿ

ಚಿತ್ರದುರ್ಗ: ವಿಶ್ವವಿಖ್ಯಾತ ಪ್ರಯಾಗ್‌ರಾಜ್‌ ಮಹಾಕುಂಭಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 30 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ 4 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಕರ್ನಾಟಕ ಮೂಲದ ನಾಗಾಸಾಧು ಸಾವನ್ನಪ್ಪಿರೋ ಸುದ್ದಿ ಬಂದಿದೆ. ಕಳೆದ 15 ದಿನಗಳ ಹಿಂದೆ ಮಹಾಕುಂಭಮೇಳಕ್ಕೆ ಹೋಗಿದ್ದ ಚಿತ್ರದುರ್ಗ ಮೂಲದ ರಾಜನಾಥ್ ಮಹಾರಾಜ್‌ ನಾಗಾಸಾಧು ಕಾಲ್ತುಳಿತದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

publive-image

ಚಿತ್ರದುರ್ಗದ ರಾಜನಾಥ್ ಮಹಾರಾಜ್‌ ನಾಗಾಸಾಧು ಸೇವಾಲಾಲ ಮಠದ ಆಶ್ರಯದಲ್ಲಿದ್ದರು. ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ತೆರಳಿದ್ದ ನಾಗಾಸಾಧು ಚಿತ್ರದುರ್ಗದ ಸೇವಾಲಾಲ್ ಮಹಾರಾಜರ ಗುರುಪೀಠ ಸಂಪರ್ಕದಲ್ಲಿದ್ದರು. ಸೇವಾಲಾಲ್ ಗುರುಪೀಠದ ರಾಜನಾಥ ಮಹಾರಾಜ್ ಅವರಿಗೆ 49 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ಕುಂಭ ಮೇಳದಲ್ಲಿ ಮತ್ತೊಂದು ಹುಡುಗಿ ವೈರಲ್.. ಈ ಗಗನಸಖಿಯ ಇಂಥ ನಿರ್ಧಾರಕ್ಕೆ ಅದೊಂದು ಕೆಟ್ಟ ಘಟನೆ..! 

ರಾಜನಾಥ್ ಮಹಾರಾಜ್ ಅವರು ಪ್ರಯಾಗರಾಜ್‌ನಲ್ಲಿ ಕಳೆದ 8 ವರ್ಗಗಳಿಂದ ನಾಗಾಸಾಧು ಆಗಿದ್ದರು. ಪ್ರಯಾಗ್‌ರಾಜ್‌ ಜಿಲ್ಲಾಡಳಿತ ಚಿತ್ರದುರ್ಗದ ಸೇವಾಲಾಲ ಮಠಕ್ಕೆ ಸಂಪರ್ಕ ಮಾಡಿದ್ದು, ರಾಜನಾಥ ಮಹಾರಾಜ್ ಸಾವಿನ ಬಗ್ಗೆ ಮಾಹಿತಿ ರವಾನೆ ಮಾಡಿದೆ. ಚಿತ್ರದುರ್ಗ ಸೇವಾಲಾಲ ಸ್ವಾಮೀಜಿ ರಾಜನಾಥ ಮಹಾರಾಜರ ಪಾರ್ಥೀವ ಶರೀರವನ್ನು ಕಳಿಸುವಂತೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment