ಮಹಾಲಕ್ಷ್ಮಿ ಸಾವು ಹೇಗಾಯ್ತು.. ವೈಯಾಲಿಕಾವಲ್ ಪೊಲೀಸ್‌ ಕೈ ಸೇರಿದ ಮತ್ತೊಂದು ರಿಪೋರ್ಟ್‌!

author-image
admin
Updated On
ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲ್ಲೋದಕ್ಕೆ ಇದೇ ಮುಖ್ಯ ಕಾರಣ.. ಕೊನೆಗೂ ಆ ರಹಸ್ಯ ಬಯಲು!
Advertisment
  • ಮಹಾಲಕ್ಷ್ಮಿ ಮರಣೋತ್ತರ ರಿಪೋರ್ಟ್‌ ಸಾವಿನ ಸ್ಫೋಟಕ ಸತ್ಯ
  • ಒಬ್ಬನೇ ಮಹಾಲಕ್ಷ್ಮಿಯನ್ನು ಮುಕ್ತಿ ರಂಜನ್ ರಾಯ್ ಸಾಯಿಸಿದ್ದು ಹೇಗೆ?
  • ಮಹಾಲಕ್ಷ್ಮಿಯನ್ನು ಸಾಯಿಸಿದ ಆರೋಪಿ ಕೂಡ ಈಗ ಬದುಕಿಲ್ಲ

ಫ್ರಿಡ್ಜ್‌ನಲ್ಲಿ ಪೀಸ್‌, ಪೀಸ್‌ ಮಾಡಿದ್ದ ಮಹಾಲಕ್ಷ್ಮಿ ಸಾವಿನ ಕೇಸ್‌ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ವೈಯಾಲಿಕಾವಲ್ ಮನೆಯಲ್ಲಿ ನಡೆದಿದ್ದ ಭಯಾನಕ ಕೊಲೆ ಪೊಲೀಸರಿಗೆ ಸವಾಲಾಗಿತ್ತು. ಮಹಾಲಕ್ಷ್ಮಿ ಸಾವಿನ ಕೇಸ್‌ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮಹಾಲಕ್ಷ್ಮಿ ಅವರ ಮರಣೋತ್ತರ ಪರೀಕ್ಷೆಯ ಕಂಪ್ಲೀಟ್‌ ರಿಪೋರ್ಟ್ ಇದೀಗ ವೈಯಾಲಿಕಾವಲ್ ಪೊಲೀಸರ ಕೈ ಸೇರಿದೆ.

ಇದನ್ನೂ ಓದಿ: ಬುಲೆಟ್ ಕದ್ದು ಓಡುವಾಗ ಭೀಕರ ಅಪಘಾತ.. ಸಾರಿಗೆ ಬಸ್‌ಗೆ ಡಿಕ್ಕಿ; ಬೈಕ್ ಕಳ್ಳ ಸ್ಥಳದಲ್ಲೇ ಸಾವು 

ಮಹಾಲಕ್ಷ್ಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಮರಣೋತ್ತರ ರಿಪೋರ್ಟ್‌ ಸಾವಿನ ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟಿದೆ. ಆರೋಪಿ ಮುಕ್ತಿ ರಂಜನ್ ರಾಯ್, ಮಹಾಲಕ್ಷ್ಮಿ ಅವರನ್ನು ಮೊದಲು ಉಸಿರು ಗಟ್ಟಿಸಿ ಕೊ*ಲೆ ಮಾಡಿದ್ದಾನೆ. ಬಳಿಕ ದೇಹವನ್ನು ಪೀಸ್, ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿರೋದು ಪಕ್ಕಾ ಆಗಿದೆ.

publive-image

ಮರಣೋತ್ತರ ಪರೀಕ್ಷೆಯಲ್ಲಿ ಮಹಾಲಕ್ಷ್ಮಿಯನ್ನು ದಿಂಬಿನ ಸಹಾಯದಿಂದ ಉಸಿರು ಗಟ್ಟಿಸಿ ಸಾಯಿಸಿರೋದು ಎನ್ನಲಾಗಿದೆ. ಆದರೆ ಮೃತದೇಹವನ್ನು ಫ್ರೀಡ್ಜ್‌ನಲ್ಲಿ ಇಟ್ಟಿದ್ದರಿಂದ ಕೊಲೆಯ ನಿಖರವಾದ ದಿನಾಂಕ ಮತ್ತು ಸಮಯ ಗೊತ್ತಾಗಿಲ್ಲ. ಫ್ರಿಡ್ಜ್‌ನಲ್ಲಿ ಮೃತದೇಹ ಇಟ್ಟಿದ್ದರಿಂದ ಕೊಲೆಯಾದ ಸರಿಯಾದ ಸಮಯ ಹೇಳಲು ಸಾಧ್ಯವಾಗುತ್ತಿಲ್ಲ.

ಆರೋಪಿ ಸಾವಿನ ಬಳಿಕ ಕೇಸ್ ಏನಾಗುತ್ತೆ?
ಮಹಾಲಕ್ಷ್ಮಿ ಸಾವಿನ ಬಳಿಕ ಪೀಸ್, ಪೀಸ್ ಮಾಡಿದ ಆರೋಪಿ ಪರಾರಿಯಾಗಿದ್ದ. ಪೋಸ್ಟ್ ಮಾರ್ಟಂ ಹಾಗೂ ಪೊಲೀಸರ ತನಿಖಾ ವರದಿಯಲ್ಲಿ ಆರೋಪಿ ಮುಕ್ತಿ ರಂಜನ್ ರಾಯ್ ಒಬ್ಬನೇ ಕೊ*ಲೆ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.

ಮಹಾಲಕ್ಷ್ಮಿಯನ್ನು ಸಾಯಿಸಿದ ಆರೋಪಿ ಕೂಡ ಈಗ ಬದುಕಿಲ್ಲ. ಹೀಗಾಗಿ ಕೋರ್ಟ್‌ಗೆ ಅಬೇಟೆಡ್ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರ ತಯಾರಿ ನಡೆಸಿದ್ದಾರೆ. ಆರೋಪಿ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಅಬೇಟೆಡ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಆರೋಪಿ ಯಾರು ಅನ್ನೋದು ಗೊತ್ತಾಗಿದ್ದು, ಮೃತನಾಗಿರುತ್ತಾನೆ. ಹಾಗಾಗಿ ಕೇಸ್ ಅಂತ್ಯಗೊಳಿಸುವಂತೆ ಕೋರ್ಟ್‌ಗೆ ಪೊಲೀಸರು ಮನವಿ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment