/newsfirstlive-kannada/media/post_attachments/wp-content/uploads/2024/11/Tamilnadu-Mahalinga-Swamiji-1.jpg)
ತಮಿಳುನಾಡಿನ ಅಧೀನಂ ಮಠದ ಮಹಾಲಿಂಗ ಸ್ವಾಮೀಜಿ ಗೃಹಸ್ಥಾಶ್ರಮ ಪ್ರವೇಶಕ್ಕೆ ಮುಂದಾಗಿದ್ದು ಭಾರೀ ವಿವಾದಕ್ಕೆ ಗುರಿಯಾಗಿದೆ. ಮಹಾಲಿಂಗ ಸ್ವಾಮೀಜಿ ಕರ್ನಾಟಕದ ರಾಮನಗರ ಜಿಲ್ಲೆಯ ಹೇಮಾಶ್ರಿ ಎಂಬ ಮಹಿಳೆಯನ್ನು ಅಧಿಕೃತವಾಗಿ ವಿವಾಹವಾಗಿದ್ದಾರೆ. ದಿಢೀರನೇ ಬ್ರಹ್ಮಚರ್ಯ ತ್ಯಜಿಸಿ ಗೃಹಸ್ಥಾಶ್ರಮ ಪ್ರವೇಶಿಸುತ್ತಾ ಇರೋದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ‘ಸ್ವರ್ಗಕ್ಕೆ ಹೋಗಬೇಕಾದ್ರೆ ಸಂಸ್ಕೃತ ಕಲೀಬೇಕು’- ಸುಗುಣೇಂದ್ರ ತೀರ್ಥ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ
ಈ ಮಹಾಲಿಂಗ ಸ್ವಾಮೀಜಿ ತಂಜಾವೂರ್ ಜಿಲ್ಲೆಯಲ್ಲಿರುವ ಸೂರ್ಯನಾರ್ ಕೋವಿಲ್ ದೇವಾಲಯದ ಮಠಾಧೀಶರು. 54 ವರ್ಷದ ಮಹಾಲಿಂಗ ಸ್ವಾಮೀಜಿ ಅವರು 47 ವರ್ಷದ ಹೇಮಾಶ್ರೀ ಎಂಬ ಮಹಿಳೆಯ ಜೊತೆ ವಿವಾಹವಾಗಿದ್ದಾರೆ. ಕಳೆದ ಮಾರ್ಚ್ 10ರಂದು ಸ್ವಾಮೀಜಿ ಮದುವೆಯಾಗಿದ್ದು, ಅಕ್ಟೋಬರ್ 10ರಂದು ವಿವಾಹದ ನೊಂದಣಿ ಕೂಡ ಮಾಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/Tamilnadu-Mahalinga-Swamiji.jpg)
ತಮಿಳುನಾಡಿನಲ್ಲಿ ಶೈವ ಸಿದ್ಧಾಂತ, ಪರಂಪರೆಯ ಪ್ರಚಾರಕ್ಕಾಗಿ ಅಧೀನಂ ಮಠವನ್ನು ಆರಂಭಿಸಲಾಗಿತ್ತು. 2022ರಲ್ಲಿ ಸೂರ್ಯನಾರ್ ದೇವಾಲಯದ ಅಧೀನಂನ 28ನೇ ಪೀಠಾಧಿಪತಿಯಾಗಿ ಮಹಾಲಿಂಗ ಸ್ವಾಮೀಜಿ ಅಧಿಕಾರ ವಹಿಸಿಕೊಂಡಿದ್ದರು.
ಭಕ್ತರ ವಿರೋಧ ಯಾಕೆ?
ಕುಂಭಕೋಣಂನಲ್ಲಿರುವ ಸೂರ್ಯನಾರ್ ದೇವಾಲಯದ ಅಧೀನಂ ಪೀಠವು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಹೊಂದಿದೆ. ಇದೀಗ ಸ್ವಾಮೀಜಿ ಬ್ರಹ್ಮಚರ್ಯ ತ್ಯಜಿಸಿ ಗೃಹಸ್ಥಾಶ್ರಮ ಪ್ರವೇಶಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಭಕ್ತರು ಪೀಠಾಧಿಪತಿ ಸ್ಥಾನ ತ್ಯಜಿಸಿ ಗೃಹಸ್ಥನಾಗುವಂತೆ ಮಹಾಲಿಂಗ ಸ್ವಾಮೀಜಿಗೆ ಒತ್ತಾಯ ಮಾಡುತ್ತಿದ್ದಾರೆ.
ಮಠದ ಘನತೆ, ಗೌರವವನ್ನು ಕಾಪಾಡಲು ಮಹಾಲಿಂಗ ಸ್ವಾಮೀಜಿ ಪೀಠತ್ಯಾಗ ಮಾಡಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ಆದರೆ ಸ್ವಾಮೀಜಿಗಳು ಮದುವೆಯಾಗಬಾರೆಂದು ಯಾವುದೇ ನಿಯಮ ಇಲ್ಲ ಎಂದು ಮಹಾಲಿಂಗ ಸ್ವಾಮೀಜಿ ಹೇಳುತ್ತಿದ್ದಾರೆ.
ಶೈವ ಸಿದ್ಧಾಂತ, ಧರ್ಮವನ್ನು ಪ್ರಚಾರ ಮಾಡುವುದು ನಮ್ಮ ಪ್ರಾಥಮಿಕ ಕರ್ತವ್ಯ. ವಿವಾಹಿತರು, ಸಂಸಾರ ಜೀವನ ತ್ಯಜಿಸಿ ಪೀಠಾಧಿಪತಿ ಆಗಬಹುದು. ಆದರೆ ಪೀಠಾಧಿಪತಿ ಆಗಿರುವವರು ಮದುವೆ ಆಗುವಂತಿಲ್ಲ ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. ಈ ವಿಷಯವಾಗಿ ಮಹಾಲಿಂಗ ಸ್ವಾಮೀಜಿ ಹಾಗೂ ಜನರ ನಡುವೆ ಗಲಾಟೆಯೂ ನಡೆದಿದೆ.
ಇದನ್ನೂ ಓದಿ: ಪೊಲೀಸರ ಹೆಸರೇಳಿ ಸ್ವಾಮೀಜಿಗೆ 1 ಕೋಟಿ ಉಂಡೇನಾಮ; ಭಾರೀ ಅನುಮಾನ
ಭಕ್ತರು, ಶಿಷ್ಯರ ಈ ಜಟಾಪಟಿಗೆ ರೋಸಿ ಹೋದ ಮಹಾಲಿಂಗ ಸ್ವಾಮೀಜಿ ಅವರು ಮಠದ ಆಡಳಿತವನ್ನು ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾಯಿಸುತ್ತೇನೆ. ಇದಾದ ಬಳಿಕ ನಾನು ಪತ್ನಿಯ ಊರಿಗೆ ತೆರಳಿ ಅಲ್ಲಿ ಶೈವ ಸಿದ್ಧಾಂತ, ತತ್ವದ ಮಠ ಕಟ್ಟುತ್ತೇನೆ ಎಂದು ಮಹಾಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಮಠ ಬಿಡಲು ಚಿಂತಿಸಿರುವ ಮಹಾಲಿಂಗ ಸ್ವಾಮೀಜಿ ಕರ್ನಾಟಕದಲ್ಲಿ ಶೈವ ಮಠ ಕಟ್ಟುವ ಪ್ಲಾನ್ ಮಾಡಿದ್ದಾರಂತೆ. ವೃದ್ಧಾಪ್ಯದಲ್ಲಿ ತನಗೆ ಬೇರೆಯವರ ಸಹಾಯ ಬೇಕಿದೆ. ಹೀಗಾಗಿ ವಿವಾಹವಾಗಿರುವುದಾಗಿ ಸ್ವಾಮೀಜಿ ಹೇಳುತ್ತಿದ್ದಾರೆ.
ಮಹಾಲಿಂಗ ಸ್ವಾಮೀಜಿ ಹಾಗೂ ಶಿಷ್ಯರ ಈ ಗಲಾಟೆಯ ಮಧ್ಯೆ ಸೂರ್ಯನಾರ್ ದೇವಾಲಯದ ಅಧೀನಂ ಪೀಠವನ್ನು ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆ ತಮ್ಮ ಸುಪರ್ದಿಗೆ ಪಡೆಯಲು ಸಿದ್ಧತೆ ನಡೆಸಿದೆ. ಈಗಾಗಲೇ ದೇವಾಲಯ ಆಡಳಿತದ ಬಗ್ಗೆ ವರದಿ ಕೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us