ಮೆಗಾ ಆಡಿಷನ್​ನಲ್ಲೇ ತರುಣ್​ ಸುಧೀರ್ ಮನಗೆದ್ದ ಮಹಾನಟಿ.. ಈಕೆ ಅಭಿನಯಕ್ಕೆ ಜಡ್ಜಸ್ ಭಾವುಕ!

author-image
Veena Gangani
Updated On
ಮೆಗಾ ಆಡಿಷನ್​ನಲ್ಲೇ ತರುಣ್​ ಸುಧೀರ್ ಮನಗೆದ್ದ ಮಹಾನಟಿ.. ಈಕೆ ಅಭಿನಯಕ್ಕೆ ಜಡ್ಜಸ್ ಭಾವುಕ!
Advertisment
  • ವಿಭಿನ್ನ ಕಾನ್ಸೆಪ್ಟ್​ನೊಂದಿಗೆ ಮತ್ತೆ ಬಂದ ಮಹಾನಟಿ ಸೀಸನ್ 2
  • ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಸಜ್ಜಾದ ಮಹಾನಟಿ 2
  • ಈ ಬಾರಿಯ ಮಹಾನಟಿಗೆ ಬಂದ್ರು ಬೀದರ್​ನ ದಿವ್ಯಾಂಜಲಿ

ಉದಯೋನ್ಮುಖ ಪ್ರತಿಭೆಗಳಿಗೆ ಮಹಾನ್​ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಾನಟಿ ಕಾರ್ಯಕ್ರಮವನ್ನು ಶುರು ಮಾಡಿತ್ತು ಜೀ ವಾಹಿನಿ. ಮೊದಲ ಆವೃತ್ತಿ ಅದ್ಭುತವಾದ ಯಶಸ್ಸು ಕಂಡ ಬೆನ್ನಲ್ಲೇ ಎರಡನೇ ಆವೃತ್ತಿ ಘೋಷಿಸಿದೆ ತಂಡ.

ಇದನ್ನೂ ಓದಿ: ಅಣ್ಣಾವ್ರ ಮನೆಯಲ್ಲಿ ಅಮೃತಾಧಾರೆ ಸೀರಿಯಲ್​ ನಟ ರಾಜೇಶ್​ ನಟರಂಗ್; ಏನಾದ್ರೂ ವಿಶೇಷ ಉಂಟಾ?

publive-image

ಹೌದು, ವಿಭಿನ್ನ ಕಾನ್ಸೆಪ್ಟ್​ ಜೊತೆಗೆ ಮಹಾನಟಿ ರಿಯಾಲಿಟಿ ಶೋ ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಅಭಿನಯದ ಮೇಲೆ ಆಸಕ್ತಿಯಿರೋ ಯುವತಿಯರು ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್​ ಕೊಟ್ಟಿದ್ದರು.

publive-image

ಈಗಾಗಲೇ ಮಹಾನಟಿ ಸೀಸನ್ 2 ಶುರುವಾಗಿದೆ. ಜೀ ವಾಹಿನಿ ಅಧಿಕೃತ ಖಾತೆ ​ಒಂದೊಂದಾಗಿ ಪ್ರೋಮೋಗಳನ್ನು ರಿಲೀಸ್​ ಮಾಡುತ್ತಿದ್ದಾರೆ. ಮಹಾನಟಿ ಸೀಸನ್ 2 ಮೆಗಾ ಆಡಿಷನ್​ನಲ್ಲಿ ಯಾರೆಲ್ಲಾ ಸುಂದರಿಯರು ಬರುತ್ತಾರೆ ಅಂತ ಶನಿವಾರ ಹಾಗೂ ಭಾನುವಾರದ ಸಂಚಿಕೆಯಲ್ಲಿ ರಾತ್ರಿ 7:30ಕ್ಕೆ ಶೋ ಪ್ರಸಾರವಾಗಲಿದೆ.

publive-image

ಇನ್ನೂ, ಈ ಮೆಗಾ ಆಡಿಷನ್​ನಲ್ಲಿ ಬೀದರ್‌ನ ದಿವ್ಯಾಂಜಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ಜಡ್ಜಸ್​ಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಅದರಲ್ಲೂ ಮೂಖ್ಯವಾಗಿ ಜಡ್ಜಸ್​ಗಳ ಭಾವುಕರಾಗುವಂತೆ ಮಾಡಿದ್ದಾಳೆ ಈ ಪೋರಿ. ಬೀದರ್‌ನ ದಿವ್ಯಾಂಜಲಿ ನಗು ನಗುತ್ತಲೇ ವೇದಿಕೆ ಎಂಟ್ರಿ ಕೊಟ್ಟಿದ್ದಾಳೆ. ಇದಾದ ಬಳಿಕ ತನ್ನದೇ ಕಥೆಯನ್ನು ಬಿಚ್ಚು ಮನಸ್ಸಿನಿಂದ ಅಭಿನಯಿಸಿ ಮಾಹಾನಟಿ ಸೀಸನ್ 2ಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಅನಾಥೆಯಂತೆ, ಈಕೆ ಹುಟ್ಟಿದಾಗ ಪೋಷಕರು ಕಸದ ಬುಟ್ಟಿಯಲ್ಲಿ, ರಕ್ತದ ಮಡುವಿನಲ್ಲಿ ಬಿಟ್ಟು ಹೋಗಿದ್ದರಂತೆ. ತನ್ನ ಜೀವನದ ಕಥೆಯನ್ನೇ ಇಟ್ಟುಕೊಂಡು ನಟನೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾಳೆ ದಿವ್ಯಾಂಜಲಿ.

ಸದ್ಯ ನಟ ರಮೇಶ್​ ಅರವಿಂದ್, ನಿಶ್ವಿಕಾ, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಜಡ್ಜಸ್ ಸ್ಥಾನವನ್ನು ಅಲಂಕರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment