/newsfirstlive-kannada/media/post_attachments/wp-content/uploads/2025/05/gagana.jpg)
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಸಖತ್ ಆಗಿ ಮೂಡಿ ಬರುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ.
ವಾರದಿಂದ ವಾರಕ್ಕೆ ಭರ್ಜರಿ ಬ್ಯಾಚುಲರ್ಸ್ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಪ್ರತಿ ವಾರದಂತೆ ಈ ವಾರ ಡೆಡಿಕೇಷನ್ ರೌಂಡ್ ನಡೆದಿದೆ. ಬ್ಯಾಚುಲರ್ಸ್‌ಗಳು ತಮ್ಮ ತಮ್ಮ ಜೋಡಿಗೆ ಏನಾದರೂ ಡೆಡಿಕೇಟ್ ಮಾಡಬೇಕಿತ್ತು.
ಇದನ್ನೂ ಓದಿ: ಚೈತ್ರಾ ಕುಂದಾಪುರ, ರಂಜಿತ್ ಮದುವೆಗೆ ಗೌತಮಿ ಜಾಧವ್ ಹೋಗಲಿಲ್ಲವೇಕೆ? ಈ ಬಗ್ಗೆ ಏನಂದ್ರು?
ಹೀಗೆ ಬಿಗ್ಬಾಸ್ ಮೂಲಕ ಫೇಮಸ್ ಆಗಿರೋ ಡ್ರೋನ್ ಪ್ರತಾಪ್, ಮೆಂಟರ್ ಗಗನಾ ಅವರ ಏಳಿಗೆಗಾಗಿ ಉರುಳು ಸೇವೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇದನ್ನು ನೋಡಿ ಗಗನಾ ಭಾವುಕರಾಗಿದ್ದಾರೆ. ಹೌದು, ಪ್ರತಿ ವಾರವು ಒಂದಲ್ಲಾ ಒಂದು ರೀತಿಯಲ್ಲಿ ಗಗನಾ ಡ್ರೋನ್ ಪ್ರತಾಪ್ ಸರ್ಪ್ರೈಸ್‌ಗಳನ್ನು ನೀಡುತ್ತಲೇ ಇರುತ್ತಾರೆ.
ಆದರೆ ಈ ಭಾರೀ ಡ್ರೋನ್ ಪ್ರತಾಪ್ ಮೆಂಟರ್ ಗಗನಾಗಾಗಿ ಗಗನಾ ಅವರ ಆರೋಗ್ಯ ಮತ್ತು ಏಳಿಗೆಗಾಗಿ ಲಕ್ಷ್ಮೀ ಭೂ ವರಾಹ ಸ್ವಾಮಿ ದೇವಸ್ಥಾನದಲ್ಲಿ ಡ್ರೋನ್ ಪ್ರತಾಪ್ ವಿಶೇಷ ಹರಕೆ ಸಲ್ಲಿಸಿದ್ದಾರೆ. ಬಾವಿಯ ತಣ್ಣೀರು ಸ್ನಾನ ಮಾಡಿ, ಬಿಳಿ ಪಂಚೆ ಧರಿಸಿ ಸಾಷ್ಟಾಂಗ ನಮಸ್ಕಾರ ಹಾಕಿ ದೇವಿ ಬಳಿ ಗಗನಾ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ಕುರಿತ ವೇದಿಕೆ ಮೇಲೆ ಪ್ರೋಮೋವನ್ನು ರಿಲೀಸ್ ಮಾಡಲಾಗಿದೆ.
ಆ ಪ್ರೋಮೋದಲ್ಲಿ, ಗಗನಾ ಯಾವಾಗಲೂ ಹುಷಾರು ತಪ್ಪುತ್ತಿರುತ್ತಾರೆ. ಅವರು ತುಂಬಾ ಸೂಕ್ಷ್ಮ. ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟಿಯಾಗಿ ಬೆಳೆಯಬೇಕು ಅನ್ನೋ ಆಸೆ ಅವರಲ್ಲಿ ಕೊರೆಯುತ್ತಿದೆ. ಯಾವುದೇ ಕೆಟ್ಟ ದೃಷ್ಟಿ ಅವರ ಮೇಲೆ ಬೀಳದೇ ಇರಲಿ ಅನ್ನೋ ಕಾರಣಕ್ಕೆ ಹರಕೆ ಕಟ್ಟಿಕೊಳ್ಳೋಕೆ ಬಂದಿದ್ದೇನೆ ಎಂದು ಡ್ರೋನ್ ಪ್ರತಾಪ್ ಹೇಳಿಕೊಂಡಿದ್ದಾರೆ.
View this post on Instagram
ಇನ್ನೂ, ಗಗನಾ ಡ್ರೋನ್ ಪ್ರತಾಪ್ ಡೆಡಿಕೇಷನ್‌ಗೆ ಫುಲ್ ಸರ್ಪ್ರೈಸ್ ಆಗಿದ್ದಾರೆ. ನನ್ನ ಸ್ಟ್ರೆಂತ್, ವೀಕ್ನೆಸ್, ಬೆಸ್ಟ್ ಫ್ರೆಂಡ್ ಎಲ್ಲವೂ ದೇವರೇ. ನಾನು ತುಂಬಾ ಕಷ್ಟಗಳನ್ನು ಅನುಭವಿಸಿದ್ದೇನೆ. ಮಹಾನಟಿ ಶೋಗೆ ಬರೋದಕ್ಕೂ ಮೊದಲು ನಾನು ದುರಾದೃಷ್ಟೆ ಅಂದುಕೊಳ್ಳುತ್ತಿದ್ದೆ. ಆ ಶೋ ನಂತರ ಇಂದಿಗೂ ಪ್ರತಿ ದಿನವೂ ನಾನು ತುಂಬಾ ಲಕ್ಕಿ ಅಂತ ಫೀಲ್ ಆಗುತ್ತೆ. ನನ್ನನ್ನು ಖುಷಿ ಪಡಿಸೋದಕ್ಕೆ ಡ್ರೋನ್ ಪ್ರತಾಪ್ ಅವರು ಅಷ್ಟು ಕಷ್ಪ ಪಟ್ಟಿದ್ದು, ಆ ಪುಣ್ಯ ಎಲ್ಲವೂ ಖಂಡಿತವಾಗಿಯೂ ನಿಮಗೆ ಬರಲಿ ಎಂದು ಗಗನಾ ಕಣ್ಣೀರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ