/newsfirstlive-kannada/media/post_attachments/wp-content/uploads/2025/07/GAGANA4.jpg)
ಮಹಾನಟಿ ಮೂಲಕ ಸಖತ್​ ಫೇಮಸ್​ ಆಗಿದ್ದ ಗಗನಾ ಸದ್ಯ ಭರ್ಜರಿ ಬ್ಯಾಚುಲರ್ಸ್ ಸೀಸನ್​ 2ರಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಡ್ರೋನ್​ ಪ್ರತಾಪ್​ ಮೆಂಟರ್​ ಆಗಿರೋ ಗಗನಾ ವೀಕ್ಷಕರಿಗೆ ತುಂಬಾ ಇಷ್ಟ ಆಗುತ್ತಿದ್ದಾರೆ. ದಿನೇ ದಿನೇ ಗಗನಾ ಹಾಗೂ ಡ್ರೋನ್ ಪ್ರತಾಪ್​ ಜೋಡಿ ವೀಕ್ಷಕರನ್ನು ರಂಜಿಸುತ್ತಿದೆ.
ಇದನ್ನೂ ಓದಿ:ಕಾಲೇಜು ಉಪನ್ಯಾಸಕರಿಂದ ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್.. ಮೂವರು ಕೀಚಕರು ಅರೆಸ್ಟ್..!
ಈ ಹಿಂದೆ ಸರಿಗಮಪ ಶೋ ಸ್ಪರ್ಧಿಯಾಗಿದ್ದ ಬಾಳು ಬೆಳಗುಂದಿ ಜೊತೆಗೆ ಮೈಚಳಿ ಬಿಟ್ಟು ರೊಮ್ಯಾಂಟಿಕ್ ಹಾಡಿಗೆ ಗಗನಾ ಡ್ಯಾನ್ಸ್​ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಈ ಇಬ್ಬರ ಕೆಮೆಸ್ಟಿಗೆ ವೀಕ್ಷಕರು ಫುಲ್ ಫಿದಾ ಆಗಿದ್ದರು. ಅಷ್ಟೇ ಅಲ್ಲದೇ ಈ ಇಬ್ಬರ ಡ್ಯಾನ್ಸ್​ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಜೊತೆಗೆ ಮುಂದಿನ ದಿನಗಳಲ್ಲಿ ಮತ್ತೆ ನೀವು ಇಬ್ಬರು ಒಟ್ಟಾಗಿ ಡ್ಯಾನ್ಸ್​ ಮಾಡಿ ಅಂತ ಅಭಿಮಾನಿಗಳು ಕೇಳಿಕೊಂಡಿದ್ದರು.
View this post on Instagram
ಅದರಂತೆ ಜೋಡಿ ಇದೀಗ ಅಭಿಮಾನಿಗೆ ಗುಡ್​ನ್ಯೂಸ್​ ಕೊಟ್ಟಿದೆ. ಮಹಾನಟಿ, ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್, ಭರ್ಜರಿ ಬ್ಯಾಚುಲರ್ಸ್ ಸೀಸನ್​ 2 ಬಳಿಕ ಈಗ ಅಲ್ಬಂ ಸಾಂಗ್​ನಲ್ಲಿ ಗಗನಾ ಮಿಂಚಿದ್ದಾರೆ. ಹೌದು ಬಾಳು ಬೆಳಗುಂದಿ ಜೊತೆಗೆ ಅವರ ಸಂಯೋಜನೆಯಲ್ಲಿ ಮೂಡಿ ಬಂದ ‘ಏನ ಕುಣತ ನಿಂದ ಏನ ಕುಣತ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದು ಕೂಡ ಉತ್ತರ ಕರ್ನಾಟಕದ ಹುಡುಗಿಯಂತೆ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ