/newsfirstlive-kannada/media/post_attachments/wp-content/uploads/2024/07/mahanati1-1.jpg)
ಕನ್ನಡ ಕಿರುತೆರೆಯಲ್ಲಿ ‘ಮಹಾನಟಿ’ ರಿಯಾಲಿಟಿ ಶೋ ತುಂಬಾ ವಿಭಿನ್ನವಾದುದು. ಈ ಶೋ ಸ್ಪರ್ಧಿಗಳಿಗೆಲ್ಲರಿಗೂ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಸತ್ಯ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸೋ ಅವಕಾಶವನ್ನು ತಂಡ ಕಲ್ಪಿಸಿಕೊಟ್ಟಿತ್ತು.
/newsfirstlive-kannada/media/post_attachments/wp-content/uploads/2024/07/mahanati-2.jpg)
ಇದೀಗ ‘ಮಹಾನಟಿ’ ರಿಯಾಲಿಟಿ ಶೋ ವಿನ್ನರ್​ ಆಗಿ ಪ್ರಿಯಾಂಕ ಆಚಾರ್ ಅವರು ಹೊರ ಹೊಮ್ಮಿದ್ದಾರೆ. ಇಷ್ಟು ವಾರಗಳ ಕಾಲ ವೀಕ್ಷಕರನ್ನು ರಂಜಿಸಿದ್ದರು ಈ ಮಹಾನಟಿಯರು. ಇಡೀ ಕರ್ನಾಟಕದಾದ್ಯಂತ ಆಡಿಷನ್ ಮಾಡಿ ಮಹಾನಟಿ ರಿಯಾಲಿಟಿ ಶೋಗೆ ಹಲವಾರು ಸ್ಪರ್ಧಿಗಳನ್ನ ಆಯ್ಕೆ ಮಾಡಿ ತರಲಾಗಿತ್ತು.
ಇದನ್ನೂ ಓದಿ:ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!
/newsfirstlive-kannada/media/post_attachments/wp-content/uploads/2024/07/mahanati2.jpg)
ಮಹಾನಟಿ ರಿಯಾಲಿಟಿ ಶೋಗೆ ಜಡ್ಜಸ್​​ಗಳ ಸ್ಥಾನವನ್ನು ಚಲನಚಿತ್ರರಂಗದ ಖ್ಯಾತ ನಟಿ ಪ್ರೇಮಾ, ಖ್ಯಾತ ನಟ, ಹ್ಯಾಂಡ್ಸಮ್ ಹಂಕ್ ರಮೇಶ್ ಅರವಿಂದ್, ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅಲಂಕರಿಸಿದ್ದರು. ಮಹಾನಟಿ ರಿಯಾಲಿಟಿ ಶೋನಲ್ಲಿ ಗಗನ, ಪ್ರಿಯಾಂಕ, ಶ್ವೇತಾ ಭಟ್​, ಆರಾಧನ ಭಟ್​, ಹಾಗೂ ಧನ್ಯಶ್ರೀ ಟಾಪ್​​ 5 ಫೈನಲಿಸ್ಟ್​ ಆಗಿ ಹೊರ ಹೊಮ್ಮಿದ್ದರು. ಇದೀಗ ಈ ಐವರಲ್ಲಿ ಮಹಾನಟಿ ಕಿರೀಟವನ್ನು ಪ್ರಿಯಾಂಕ ಆಚಾರ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಧನ್ಯಶ್ರೀ ಅವರು ಮಹಾನಟಿ ರನ್ನರ್ ಅಪ್​ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us