ಮಹಾನಟಿ ರಿಯಾಲಿಟಿ ಶೋ; ಫಿನಾಲೆಗೆ ಟಾಪ್​ 5 ಸ್ಪರ್ಧಿಗಳು ಸೆಲೆಕ್ಟ್; ಯಾರವರು?

author-image
Veena Gangani
Updated On
ಮಹಾನಟಿ ವಿನ್ನರ್​ ಪ್ರಿಯಾಂಕ ಆಚಾರ್​​ಗೆ ಅಭಿಮಾನಿಗಳಿಂದ ಸ್ಪೆಷಲ್ ವಿಶ್​​; ಏನದು?
Advertisment
  • ಕಿರುತೆರೆಯಲ್ಲೇ ದೊಡ್ಡ ಮಟ್ಟದಲ್ಲಿ ಸೌಂಡ್​ ಮಾಡಿದ್ದ ಮಹಾನಟಿ ಶೋ
  • ಕೊನೆಯ ಹಂತಕ್ಕೆ ಬಂದು ತಲುಪಿದ ‘ಮಹಾನಟಿ’ ರಿಯಾಲಿಟಿ ಶೋ
  • ಅದ್ಭುತ ನಟನೆಯ ಮೂಲಕ ವೀಕ್ಷಕರ ಮನೆ ಮಾತಾಗಿದ್ದ ಸ್ಪರ್ಧಿಗಳು

ಕನ್ನಡ ಕಿರುತೆರೆಯಲ್ಲಿ ‘ಮಹಾನಟಿ’ ರಿಯಾಲಿಟಿ ಶೋ ತುಂಬ ವಿಭಿನ್ನವಾದುದು. ಈ ಶೋ ಸ್ಪರ್ಧಿಗಳಿಗೆಲ್ಲರಿಗೂ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಸತ್ಯ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸೋ ಅವಕಾಶವನ್ನು ತಂಡ ಕಲ್ಪಿಸಿಕೊಟ್ಟಿತ್ತು.

publive-image

ಇದನ್ನೂ ಓದಿ:ದಾಸ ಜೈಲಿನಲ್ಲಿರುವಾಗಲೇ ಶಾಸ್ತ್ರಿ ಥಿಯೇಟರ್‌ಗೆ ಲಗ್ಗೆ.. 20 ವರ್ಷಗಳ ಬಳಿಕ ರೀ ರಿಲೀಸ್​; ಯಾವಾಗ ಗೊತ್ತಾ?

ಇದೀಗ 'ಮಹಾನಟಿ' ರಿಯಾಲಿಟಿ ಶೋ ಮುಗಿಯುವ ಹಂತ ತಲುಪಿದೆ. ಫಿನಾಲೆಗೆ ವೇದಿಕೆ ರೆಡಿಯಾಗಿದೆ. ಇಷ್ಟು ವಾರಗಳ ಕಾಲ ರಂಜಿಸಿದವರು ಇದೀಗ ಗೆದ್ದು ಬೀಗುವ ಸಮಯವೂ ಹತ್ತಿರವಾಗಿದೆ. ಇಡೀ ಕರ್ನಾಟಕದಾದ್ಯಂತ ಆಡಿಷನ್ ಮಾಡಿ ಮಹಾನಟಿ ರಿಯಾಲಿಟಿ ಶೋಗೆ ಹಲವಾರು ಸ್ಪರ್ಧಿಗಳನ್ನ ಆಯ್ಕೆ ಮಾಡಿ ತರಲಾಗಿತ್ತು. ಮಹಾನಟಿ ರಿಯಾಲಿಟಿ ಶೋಗೆ ಜಡ್ಜಸ್​​ಗಳ ಸ್ಥಾನವನ್ನು ಚಲನಚಿತ್ರರಂಗದ ಖ್ಯಾತ ನಟಿ ಪ್ರೇಮಾ, ಖ್ಯಾತ ನಟ, ಹ್ಯಾಂಡ್ಸಮ್ ಹಂಕ್ ರಮೇಶ್ ಅರವಿಂದ್, ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅಲಂಕರಿಸಿದ್ದರು.

ಇದೀಗ ಮಹಾನಟಿಯಲ್ಲಿ ತಮಗೆ ಕೊಟ್ಟ ಡೈಲಾಗ್‌ಗಳನ್ನು ಅತ್ಯುತ್ತಮವಾಗಿ ಡೆಲಿವರಿ ಮಾಡುತ್ತ ಎಲ್ಲರ ಸೆಳೆದಿದ್ದವರು ಈಗ ಟಾಪ್​ 5ನಲ್ಲಿದ್ದಾರೆ. ಮಹಾನಟಿ ರಿಯಾಲಿಟಿ ಶೋನಲ್ಲಿದ್ದ ಸ್ಪರ್ಧಿಗಳು ಟಾಪ್​ 5 ಫೈನಲಿಸ್ಟ್​ ಆಗಿ ಹೊರ ಹೊಮ್ಮಿದ್ದಾರೆ. ಗಗನ, ಪ್ರಿಯಾಂಕ, ಶ್ವೇತಾ ಭಟ್​, ಆರಾಧನ ಭಟ್​, ಹಾಗೂ ಧನುಶ್ರೀ ಈ ಐದು ಸ್ಪರ್ಧಿಗಳು ಟಾಪ್​​ 5 ಫೈನಲಿಸ್ಟ್​ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಒಬ್ಬೊಬ್ಬರ ಅಭಿನಯವು ವೀಕ್ಷಕರ ಮನ ಮುಟ್ಟಿದ್ದವು. ಜೊತೆಗೆ ಶೋ ಶುರುವಾದಾಗಿನಿಂದ ಕೊನೆಯವರೆಗೂ ಎಲ್ಲಾ ಸ್ಪರ್ಧಿಗಳು ನಟನೆಯನ್ನು ನೋಡಿದ ಜಡ್ಜಸ್ ಕೂಡ ತಮ್ಮ ನಿರ್ಧಾರವನ್ನು ಕೊನೆಗೂ ನೀಡಿದ್ದಾರೆ. ಟಾಪ್​ 5ರ ಪಟ್ಟವನ್ನು ಅಲಂಕರಿಸಿದ್ದಕ್ಕೆ ಮಹಾನಟಿಯರು ಫುಲ್ ಖುಷ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment