/newsfirstlive-kannada/media/post_attachments/wp-content/uploads/2025/05/amrutha2.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಈಗಾಗಲೇ ವೀಕ್ಷಕರ ಫೇವರಿಟ್ ಆಗಿದೆ. ಈ ಶೋ ಮೂಲಕವೇ ಜೋಡಿಗಳು ವೀಕ್ಷಕರಿಗೆ ಇಷ್ಟವಾಗುತ್ತಿದ್ದಾರೆ. ಟಾಪ್ 10 ಜೋಡಿಗಳಲ್ಲಿ ವೀಕ್ಷಕರಿಗೆ ಗಾಯಕ ಸುನೀಲ್ ಮತ್ತು ಅಮೃತಾ ರಾಜ್ ಕೆಮಿಸ್ಟ್ರಿ ಇಷ್ಟವಾಗಿದೆ.
ಇದನ್ನೂ ಓದಿ:ಚಿಕ್ಕೋಡಿ ಮೇಖಳಿ ಮಠ ಧ್ವಂಸ.. ಅಧಿಕಾರಿಗಳ ಇಂಥ ನಿರ್ಧಾರಕ್ಕೆ ಅಸಲಿ ಕಾರಣ ಏನು..?
ಪ್ರತಿ ವಾರದಂತೆ ಈ ವಾರವೂ ವೀಕೆಂಡ್‌ನಲ್ಲಿ ಕಮಾಯಿ ಮಾಡೋದಕ್ಕೆ ಈ ಜೋಡಿ ರೆಡಿಯಾಗಿದೆ. ಆದ್ರೆ ಈ ಮಧ್ಯೆ ಅಮೃತಾ ರಾಜ್ ಅವರು ವಧುವಿನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಮಹಾನಟಿ ಶೋ ಮೂಲಕ ಫೇಮಸ್ ಆಗಿದ್ದರು ಅಮೃತ. ಸದ್ಯ ಭರ್ಜರಿ ಬ್ಯಾಚುಲಸರ್ರ್ನಲ್ಲಿ ಸುನೀಲ್ ಅವರಿಗೆ ಜೋಡಿಯಾಗಿ ಮಿಂಚುತ್ತಿದ್ದಾರೆ.
ಇನ್ನೂ, ಇದರ ಮಧ್ಯೆ ಅಮೃತಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕ್ಯೂಟ್ ಆಗಿರೋ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮಧುಮಗಳಂತೆ ಕಂಗೊಳಿಸಿದ್ದಾರೆ ಅಮೃತಾ. ಇವರ ಈ ಕ್ಯೂಟ್ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೇ ಬಂಗಾರದ ರಾಣಿ, ಲುಕ್ಕಿಂಗ್ ಬ್ಯೂಟಿಫುಲ್ ಅಂತಾ ಕಾಮೆಂಟ್ಸ್ ಹಾಕಿ ಹಾಡಿ ಹೊಗಳುತ್ತಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ