/newsfirstlive-kannada/media/post_attachments/wp-content/uploads/2025/07/divyanjali.jpg)
ದಿನದಿಂದ ದಿನಕ್ಕೆ ಮಹಾನಟಿಯರು ಚೆನ್ನಾಗಿ ಅಭಿನಯಿಸಿ ಜಡ್ಜ್‌ಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅದರಲ್ಲೂ ಅಭಿನಯವೇ ಗೊತ್ತಿಲ್ಲದ ಈ ಹುಡುಗಿ ಒಂದೇ ಲುಕ್ನಲ್ಲಿ ಎಲ್ಲರ ಹೃದಯ ಗೆದ್ದುಕೊಂಡಿದ್ದಾಳೆ.
ಇದನ್ನೂ ಓದಿ:ಪದವಿ ಓದಿದವರಿಗೆ ಸಿಹಿ ಸುದ್ದಿ.. 1500 ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ
ಹೌದು, ವಿಭಿನ್ನ ಕಾನ್ಸೆಪ್ಟ್ನೊಂದಿಗೆ ಬಂದ ಮಹಾನಟಿ ರಿಯಾಲಿಟಿ ವೀಕ್ಷಕರಿಗೆ ಇಷ್ಟವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಡಿಷನ್ ಕೊಟ್ಟಿದ್ದವರಲ್ಲಿ 24 ಮಂದಿ ಆಯ್ಕೆ ಆಗಿದ್ದರು. ಸದ್ಯ ಈ ವಾರ ಹೀರೋಯಿನ್ ಇಂಟ್ರಡಕ್ಷನ್ ರೌಂಡ್ (Heroine Introduction Round) ನಡೆಯುತ್ತಿದೆ. ಇಂದು ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ಇದೇ ರೌಂಡ್ನಲ್ಲಿ ನಟಿಯರು ಸೂಪರ್ ಡೂಪರ್ ಆಗಿ ಮಿಂಚಿದ್ದಾರೆ. ಅದರಲ್ಲೂ ಈ ವಾರ ಬೀದರ್ ದಿವ್ಯಾಂಜಲಿ ಹೆಣ್ಣು ನೋಡುವ ಶಾಸ್ತ್ರದಲ್ಲಿ ಮುದ್ದು ಹುಡುಗಿಯಾಗಿ ಕಂಗೊಳಿಸಿದ್ದಾಳೆ. ದಿವ್ಯಾಂಜಲಿಯನ್ನು ನೋಡಲು ಗಂಡಿನ ಕಡೆಯವರು ಬಂದಿದ್ದಾರೆ. ಆಗ ದಿವ್ಯಾಂಜಲಿ ಥೇಟ್ ಅಪ್ಸರೆಯಂತೆ ರೆಡಿಯಾಗಿ ಕ್ಯಾಮೆರಾ ಮುಂದೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನೂ, ದಿವ್ಯಾಂಜಲಿಯ ಹೊಸ ಲುಕ್ ಅನ್ನು ನೋಡಿದ ಸಹ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೇ ಜಡ್ಜ್ಗಳು ಕೂಡ ಫಿದಾ ಆಗಿದ್ದಾರೆ. ಹೊಸ ಲುಕ್ನಲ್ಲಿ ದಿವ್ಯಾಂಜಲಿಯನ್ನು ನೋಡಿದ ವೆರಿ ಬ್ರಿಲಿಯಂಟ್ ಶಾರ್ಟ್ ಅಂತ ತರುಣ್ ಸುಧೀರ್ ಹೊಳಿಗಳಿದ್ದಾರೆ. ಆಗ ದಿವ್ಯಾ ಬಗಳ ಚೆನ್ನಾಗಿದೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ