/newsfirstlive-kannada/media/post_attachments/wp-content/uploads/2025/07/mahanati-vamshi.jpg)
ಮಹಾನಟಿ ಸೀಸನ್ 2.. ಹೊಸ ಹೊಸ ಪ್ರತಿಭೆಗಳಿಗೆ ಮಹಾನ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಾನಟಿ ಕಾರ್ಯಕ್ರಮವನ್ನು ಶುರು ಮಾಡಿತ್ತು ಜೀ ವಾಹಿನಿ. ಮೊದಲ ಆವೃತ್ತಿ ಅದ್ಭುತವಾದ ಯಶಸ್ಸು ಕಂಡ ಬೆನ್ನಲ್ಲೇ ಎರಡನೇ ಆವೃತ್ತಿ ಶುರುವಾಗಿ ಮಹಾನಟಿಯರು ಭರ್ಜರಿಯಾಗಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಟಾಕ್..!
ವಿಶೇಷ ಎಂದರೆ ಈ ಬಾರಿಯ ಮಹಾನಟಿ ಸೀಸನ್ 2ಗೆ ಡ್ರಾಮಾ ಜೂನಿಯರ್ಸ್ 2 ವಿನ್ನರ್ ಆಗಿದ್ದ ವಂಶಿ ಎಂಟ್ರಿ ಕೊಟ್ಟಿದ್ದು. ಡ್ರಾಮಾ ಜೂನಿಯರ್ಸ್ ಸೀಸನ್ 2 ಮೂಲಕ ‘ಜ್ಯೂನಿಯರ್ ಲಕ್ಷ್ಮಿ’ ಅಂತ ಬಿರುದು ಗಿಟ್ಟಿಸಿಕೊಂಡಿರುವ ಮಂಗಳೂರಿನ ವಂಶಿ ಮಹಾನಟಿಯಾಗಿ ಮಿಂಚುತ್ತಿದ್ದಾರೆ. ಆಗ ತಮ್ಮ ವಿಭಿನ್ನ ಮ್ಯಾನರಿಸಂನಿಂದ ಇಡೀ ಕರ್ನಾಟಕದ ಜನತೆಯ ಮನ ಗೆದ್ದಿದ್ದರು. ತಮ್ಮ ಅದ್ಭುತ ನಟನೆಯಿಂದ ಶಹಬ್ಬಾಸ್ ಗಿರಿ ಪಡೆದುಕೊಂಡು ವಿನ್ನರ್ ಆಗಿ ಟ್ರೋಫಿಗೆ ಮುತ್ತಿಕ್ಕಿದ್ದರು.
View this post on Instagram
ಇನ್ನೂ, ಸ್ಟಾರ್ ನಟಿಯಾಗಿ ಮಿಂಚೋದಕ್ಕೆ ನೇರವಾಗಿ ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. 12 ವರ್ಷ ವಯಸ್ಸಿದ್ದಾಗ ವಂಶಿ ಡ್ರಾಮಾ ಜ್ಯೂನಿಯರ್ಸ್ಗೆ ಎಂಟ್ರಿ ಕೊಟ್ಟಿದ್ದ ಈಕೆ 20 ವರ್ಷಕ್ಕೆ ಮಹಾನಟಿ ವೇದಿಕೆಗೆ ಬಂದು ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಜೊತೆಗೆ ರಿಲೀಸ್ ಆಗಿರೋ ಪ್ರೋಮೋದಲ್ಲಿ ವಂಶಿ ಒಂದೇ ಪರ್ಫಾರ್ಮೆನ್ಸ್ಗೆ ಇಡೀ ವೇದಿಕೆ ಕಣ್ಣೀರು ಹಾಕಿದೆ. ವಂಶಿ ಅವರ ತಂದೆ ನಿಧನರಾಗಿದ್ದಾರೆ. ಇದೇ ಕಾನ್ಸೆಪ್ಟ್ನಲ್ಲಿ ವಂಶಿ ಪರಪಂಚ ನೀನೇ ಸಾಂಗ್ಗೆ ಡ್ಯಾನ್ಸ್ ಮಾಡಿದ್ದರು. ಇದೇ ಡ್ಯಾನ್ಸ್ ನೋಡಿದ ಜಡ್ಜ್ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ನಟಿ ಪ್ರೇಮಾ ಅವರು ನನ್ನ ತಂದೆಯೇ ಕಣ್ಣು ಮುಂದೆ ಬಂದು ಬಿಟ್ಟರು ಅಂತ ಅತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ