newsfirstkannada.com

ಕಾಂಗ್ರೆಸ್​ಗೆ ಭಾರೀ ಪೆಟ್ಟು.. ಅಶೋಕ್ ನೇತೃತ್ವದಲ್ಲಿ 55 ​ಕಾರ್ಪೊರೇಟರ್​​ಗಳು ಬಿಜೆಪಿಗೆ ಸೇರ್ಪಡೆ

Share :

Published February 25, 2024 at 9:22am

    ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 55 ಜನರು ಬಿಜೆಪಿಗೆ ಸೇರ್ಪಡೆ

    ಲೋಕಸಭಾ ಹೊಸ್ತಿಲಿನಲ್ಲೇ ಕಾಂಗ್ರೆಸ್​ಗೆ ಭಾರೀ ಮುಖಭಂಗ

    ಅಶೋಕ್​ ಚವ್ಹಾಣ್​ ನೇತೃತ್ವದಲ್ಲಿ ಎಲ್ಲರೂ ಬಿಜೆಪಿಗೆ ಸೇರ್ಪಡೆ

ಮುಂಬೈ: ಲೋಕಸಭಾ ಚುನಾವಣೆ ಸಮೀಪದಲ್ಲೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದ್ದು ಮಾಜಿ ಸಿಎಂ ಅಶೋಕ್‌ ಚವ್ಹಾಣ್‌ ಸಮ್ಮುಖದಲ್ಲಿ​ 55 ಕಾಂಗ್ರೆಸ್ ಕಾರ್ಪೊರೇಟರ್ಸ್​ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಕ್ಷೇತ್ರದಲ್ಲಿ ಕಾಂಗ್ರೆಸ್​ ಭಾರೀ ಹಿನ್ನಡೆ ಎಂದು ಹೇಳಲಾಗಿದೆ.

ಈ ಸಂಬಂಧ ಟ್ವಿಟ್ ಮಾಡಿರುವ ಮಾಜಿ ಸಿಎಂ ಅಶೋಕ್‌ ಚವ್ಹಾಣ್‌, ನಾಂದೇಡ್ ವಘಾಲಾದ ಮುನ್ಸಿಪಲ್​ ಕೌನ್ಸಲರ್ ಮತ್ತು ಕಾರ್ಪೊರೇಟರ್‌ಗಳ ಜೊತೆ ಸುದೀರ್ಘವಾದ ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಬಿಜೆಪಿಗೆ ಸೇರಲು ಎಲ್ಲರು ಒಮ್ಮತದಿಂದ ತೀರ್ಮಾನ ಮಾಡಿದ್ದೇವೆ. ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಿರುವ ನಗರಸಭಾ ಮಾಜಿ ಸದಸ್ಯರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಇತ್ತಿಚೇಗೆ ಅಶೋಕ್‌ ಚವ್ಹಾಣ್‌ ಅವರು ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದರು. ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ​ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿಗೆ ಸೇರಿಕೊಂಡಿದ್ದರು. ಇದರ ಬೆನ್ನಲ್ಲೇ ಅವರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆಯಲ್ಲೇ ಅಶೋಕ್​ ಅವರು, ಸದ್ಯ 55 ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ಗೆ ಭಾರೀ ಪೆಟ್ಟು.. ಅಶೋಕ್ ನೇತೃತ್ವದಲ್ಲಿ 55 ​ಕಾರ್ಪೊರೇಟರ್​​ಗಳು ಬಿಜೆಪಿಗೆ ಸೇರ್ಪಡೆ

https://newsfirstlive.com/wp-content/uploads/2024/02/MAHARASTRA_ASHOK_BJP.jpg

Load More