newsfirstkannada.com

VIDEO: ಬೈಕ್​ಗೆ​ ಬಸ್ ಡಿಕ್ಕಿ.. ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

Share :

Published February 8, 2024 at 8:57am

    ಬೈಕ್​ನಲ್ಲಿ ಕಾಲೇಜ್​ಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಸ್ ಡಿಕ್ಕಿ

    ಬಸ್ ಡಿಕ್ಕಿ ಹೊಡೆದ ರಭಸಕ್ಕೆ 50 ಮೀಟರ್ ದೂರ ಬಿದ್ದ ವಿದ್ಯಾರ್ಥಿ

    ಒಂದೇ ಬೈಕ್​ನಲ್ಲಿ ಮೂವರು ಹೆಲ್ಮೆಟ್​ ಧರಿಸದೇ ಚಲಿಸುತ್ತಿದ್ದರು

ಮುಂಬೈ: ವೇಗವಾಗಿ ಬಂದ ಬಸ್​ವೊಂದು ಹಿಂದಿನಿಂದ ಬೈಕ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆ ಬಳಿ ನಡೆದಿದೆ ಎನ್ನಲಾಗಿದೆ.

ಒಂದೇ ಬೈಕ್​ನಲ್ಲಿ ಮೂವರು ಹೆಲ್ಮೆಟ್​ ಧರಿಸದೇ ಚಲಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಹಿಂದಿನಿಂದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಡಿಕ್ಕಿ ಹೊಡೆದ ತಕ್ಷಣ ಬೈಕ್ ಭಾಗಗಳಾಗಿ ಚೆಲ್ಲಾಪಿಲ್ಲಿಯಾಗಿದೆ. ಬೈಕ್​ನಲ್ಲಿದ್ದ ಮೂವರೂ 50 ಮೀಟರ್ ಅಧಿಕ ದೂರ ಹೋಗಿ ಬಿದ್ದಿದ್ದಾರೆ.

ಇನ್ನು ಆ್ಯಕ್ಸಿಡೆಂಟ್ ಆಗುತ್ತಿದ್ದಂತೆ ಸರ್ಕಲ್​​ನಲ್ಲಿದ್ದ ಜನರೆಲ್ಲ ಓಡೋಡಿ ಬಂದಿದ್ದಾರೆ. ಸದ್ಯ ಈ ಭಯಾನಕವಾದ ಅಪಘಾತದ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತರ ಮೂವರು ಒಂದೇ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೈಕ್​ಗೆ​ ಬಸ್ ಡಿಕ್ಕಿ.. ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/02/MUMBAI_ACCIDENT.jpg

Load More