ಮಹಾಯುತಿ ಮೈತ್ರಿಯಲ್ಲಿ CM ಸ್ಥಾನಕ್ಕೆ ಪೈಪೋಟಿ; ಘೋಷಣೆಗೂ ಮೊದಲೇ ಪವಾರ್ ‘ಪವರ್’ ಪೋಸ್ಟರ್..!

author-image
Ganesh
Updated On
ಮಹಾಯುತಿ ಮೈತ್ರಿಯಲ್ಲಿ CM ಸ್ಥಾನಕ್ಕೆ ಪೈಪೋಟಿ; ಘೋಷಣೆಗೂ ಮೊದಲೇ ಪವಾರ್ ‘ಪವರ್’ ಪೋಸ್ಟರ್..!
Advertisment
  • ಮಹಾರಾಷ್ಟ್ರ ಚುನಾವಣೆಯಲ್ಲಿ ಎಂವಿಎಗೆ ಭಾರೀ ಹಿನ್ನಡೆ
  • ಅಧಿಕಾರ ರಚಿಸುವತ್ತ ಮುನ್ನಡೆ ಕಾಯ್ದುಕೊಂಡ Mahayuti
  • ಮೂವರು ನಾಯಕರ ಮಧ್ಯೆ ಸಿಎಂ ಸ್ಥಾನಕ್ಕೆ ಫೈಟ್

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಭರ್ಜರಿ ಲೀಡ್​ನಲ್ಲಿರೋ ಮಹಾಯುತಿ 223ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ನಾಯಕತ್ವದ ಎಂವಿಎ (Maha Vikas Aghadi) ಕೇವಲ 52ರಲ್ಲಿ ಮಾತ್ರ ಮುನ್ನೆಡೆ ಕಾಯ್ದುಕೊಂಡಿದೆ.

ಬಿಜೆಪಿ 126 ಕ್ಷೇತ್ರಗಳಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಶಿಂಧೆ ಬಣ ಶಿವಸೇನೆಗೆ 55 ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದ್ದು, ಅಜಿತ್​ ಪವಾರ್​​ ಎನ್​ಸಿಪಿಗೆ ಸುಮಾರು 36 ಕ್ಷೇತ್ರಗಳಲ್ಲಿ ಲೀಡ್​ ಇದೆ. ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮುಂದಿನ ಸಿಎಂ ಯಾರು ಆಗುತ್ತಾರೆ ಅನ್ನೋ ಚರ್ಚೆ ಜೋರಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​ಗೆ ಹೀನಾಯ ಸೋಲು; ಬಿಜೆಪಿ ಗೆಲುವಿಗೆ ಕಾರಣಗಳೇನು?

ಮೈತ್ರಿಯಲ್ಲಿ ಯಾವ್ಯಾವ ಬಣ..?
ಬಿಜೆಪಿ, ಎನ್​ಸಿಪಿ (ಅಜಿತ್ ಪವಾರ್) ಮತ್ತು ಶಿವಸೇನೆ (ಏಕನಾಥ್ ಶಿಂಧೆ) ಮಹಾಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್, ಎನ್​ಸಿಪಿ (ಶರದ್ ಪವಾರ್) ಮತ್ತು ಶಿವಸೇನಾ (ಉದ್ಧವ್ ಠಾಕ್ರೆ) ಮಹಾವಿಕಾಸ್ ಅಘಾಡಿ ಮೈತ್ರಿಕೂಟವು 52 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೊನೆಯವರೆಗೂ ಇದೇ ಟ್ರೆಂಡ್ ಮುಂದುವರಿದರೆ ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಬರಲಿದೆ.

ಸಿಎಂ ಯಾರು..?
ಇದೀಗ ಮಹಾರಾಷ್ಟ್ರ ಸಿಎಂ ರೇಸ್​ನಲ್ಲಿ ಮೂವರ ಹೆಸರು ಕೇಳಿಬಂದಿದೆ. ಶಿವಸೇನೆಯ ಏಕನಾಥ್ ಶಿಂಧೆ, ಬಿಜೆಪಿಯ ದೇವೇಂದ್ರ ಫಡ್ನವಿಸ್ ಹಾಗೂ ಎನ್​ಸಿಪಿ ಅಜಿತ್ ಪವಾರ್ ಹೆಸರು ಮುಂಚೂಣಿಯಲ್ಲಿದೆ. ಇದರ ನಡುವೆ ಅಜಿತ್ ಪವಾರ್ ಅವರನ್ನು ಬೆಂಬಲಿಸಿ ಮಾಹಾರಷ್ಟ್ರದಲ್ಲಿ ಪೋಸ್ಟರ್​ಗಳು ರಾರಾಜಿಸುತ್ತಿವೆ. ಮತ್ತೊಂದು ಕಡೆ ಮಾಜಿ ಸಿಎಂ ಫಡ್ನವಿಸ್ ಹೆಸರು ಬಿಜೆಪಿ ವಲಯದಲ್ಲಿ ಜೋರಾಗಿದೆ. ಮೈತ್ರಿಕೂಟದ ಮೂರು ಪಕ್ಷಗಳ ನಾಯಕರು ಸಿಎಂ ಗಾದಿ ಮೇಲೆ ಕಣ್ಣಿಟ್ಟಿರೋದ್ರಿಂದ ಮಹಾರಾಷ್ಟ್ರ ರಾಜಕೀಯ ಚಟುವಟಿಕೆಗಳು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್​ಗೆ ಭರ್ಜರಿ ಗೆಲುವು.. ನಿಖಿಲ್​​ಗೆ ಹ್ಯಾಟ್ರಿಕ್ ಸೋಲು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment