/newsfirstlive-kannada/media/post_attachments/wp-content/uploads/2024/11/KHARGE_SIDDU.jpg)
ಮಹಾರಾಷ್ಟ್ರದಲ್ಲಿ ಕರ್ನಾಟಕದ್ದೇ ಹವಾ ಸೃಷ್ಟಿ ಆಗಿದೆ. ರಾಜ್ಯದಲ್ಲಿ ಎದ್ದ ಗ್ಯಾರಂಟಿ ಅಲೆ, ಮಹಾರಾಷ್ಟ್ರಕ್ಕೆ ಅಪ್ಪಳಿಸಿದೆ. ಅದು ಒಂದ್ ಕಥೆಯಾದ್ರೆ ರಾಜ್ಯದ ಕಾಂಗ್ರೆಸ್ ನಾಯಕರೆಲ್ಲ ಮಹಾರಾಷ್ಟ್ರ ಎಲೆಕ್ಷನ್ನ ಸ್ಟಾರ್ ಪ್ರಚಾರಕರಾಗಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅಂತು ಮಹಾರಾಷ್ಟ್ರದಲ್ಲೇ ಠಿಕಾಣಿ ಹೂಡಿದ್ದು, ಎಂ.ಬಿ.ಪಾಟೀಲ್ ವಾರದಿಂದ ಅಲ್ಲೇ ಇದ್ದಾರೆ. ಇನ್ನು, ನಿನ್ನೆಯಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಅಖಾಡದಲ್ಲಿ ಇದ್ದಾರೆ.
ಮಹಾರಾಷ್ಟ್ರ ಎಲೆಕ್ಷನ್ನಲ್ಲಿ ಕರ್ನಾಟಕ ಮಾದರಿಯ ಗ್ಯಾರಂಟಿಗಳ ಸದ್ದಾಗುತ್ತಿವೆ. ಕರ್ನಾಟಕದ ನಾಯಕರ ಪ್ರಚಾರಕ್ಕೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಾರಾಷ್ಟ್ರ ಗಡಿಭಾಗದ ಕ್ಷೇತ್ರಗಳಲ್ಲಿ ಬಿಡಾರ ಹೂಡಿರುವ ಕಾಂಗ್ರೆಸ್ ನಾಯಕರು, ಎಲೆಕ್ಷನ್ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಮರಾಠಿ, ಉರ್ದು, ಕನ್ನಡದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತಬೇಟೆ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ನ ಕ್ಯಾಪ್ಟನ್. ಮಹಾರಾಷ್ಟ್ರ ಗೆದ್ದರೆ ಬಿಜೆಪಿಗೆ ಬಹುದೊಡ್ಡ ಪೆಟ್ಟು ನೀಡಿದಂತೆ ಅನ್ನೋದನ್ನ ಅರಿತಿರುವ ಖರ್ಗೆ, ಅಲ್ಲೇ ಠಿಕಾಣಿ ಹಾಕಿದ್ದಾರೆ. ಇತರ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ಱಲಿಗಳನ್ನ ನಡೆಸುತ್ತಿರುವ ಖರ್ಗೆ, ಮರಾಠಿ, ಉರ್ದು, ಕನ್ನಡದಲ್ಲಿ ಮತಬೇಟೆ ನಡೆಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾಗುವ ಮುನ್ನ ಇದೇ ಖರ್ಗೆ, ಮಹಾರಾಷ್ಟ್ರ ಉಸ್ತುವಾರಿ ಆಗಿ ಕೆಲಸ ಮಾಡಿದ್ದರು. ಹೀಗಾಗಿ ಇಡೀ ಕಾಂಗ್ರೆಸ್ನ ಎಲೆಕ್ಷನ್ ನೇತೃತ್ವವನ್ನೇ ಖರ್ಗೆ ನಿಭಾಯಿಸುತ್ತಿದ್ದಾರೆ.
ಗಡಿಭಾಗದ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಹವಾ!
ಇನ್ನು, ಸಿದ್ದರಾಮಯ್ಯ ಗಡಿಭಾಗದ ಮಾಸ್ ಲೀಡರ್. ಬೆಳಗಾವಿ, ವಿಜಯಪುರಕ್ಕೆ ಹೊಂದಿಕೊಂಡ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ರೌಂಡ್ಸ್ ಹಾಕಿದ್ದಾರೆ. ಮಹಾರಾಷ್ಟ್ರದ ನಾಂದೇಡ್‌ನ ಮುಖೇಡ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಜತ್ ವಿಧಾನಸಭೆ ಕ್ಷೇತ್ರದ ಸಂಕ್ ಪಟ್ಟಣದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿ ಆಗಿದ್ದರು. ಇನ್ನು, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಮಹಾರಾಷ್ಟ್ರ ಎಲೆಕ್ಷನ್ ಟೂರ್ನಲ್ಲಿದ್ದಾರೆ. ಮುಂಬೈನ ಭೀವಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಯಾನಂದ ಚೋರ್ಕೆ ಪರ ಪ್ರಚಾರ ನಡೆಸಿದ್ದಾರೆ.
ಮಹಾರಾಷ್ಟ್ರ ಪಶ್ಚಿಮ ಭಾಗದ ವೀಕ್ಷಕರಾಗಿ ಎಂಬಿ ಪಾಟೀಲ್ ತಂತ್ರ
ಸೊಲ್ಲಾಪುರ, ಲಾತೂರ್, ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳನ್ನ ಒಳಗೊಂಡ ಪಶ್ವಿಮ ಮಹಾರಾಷ್ಟ್ರ, ಯವತ್ಮಾಲ್ ಮತ್ತು ವಾಶಿಮ್‌ನಲ್ಲಿ ಗಣನೀಯ ಲಿಂಗಾಯತ ಮತಗಳು ನಿರ್ಣಾಯಕ. ಈ ಭಾಗದಲ್ಲಿ ಸಚಿವ ಎಂ.ಬಿ ಪಾಟೀಲ್ ಸಾಕಷ್ಟು ವರ್ಚಸ್ಸು ಹೊಂದಿದ್ದಾರೆ. ಈ ಕಾರಣಕ್ಕೆ ಮಹಾರಾಷ್ಟ್ರ ಪಶ್ಚಿಮ ಭಾಗದ ವೀಕ್ಷಕರಾಗಿ ಎಂಬಿ ಪಾಟೀಲ್ರನ್ನ ಎಐಸಿಸಿ ನಿಯೋಜಿಸಿದೆ. ಹೀಗಾಗಿ ಕಳೆದ 1 ವಾರದಿಂದ ಎಂ.ಬಿ.ಪಾಟೀಲ್ ಈ ಭಾಗದಲ್ಲಿ ಬಿಡಾರ ಹೂಡಿ ಕಾರ್ಯತಂತ್ರ ರೂಪಿಸ್ತಿದ್ದಾರೆ..
ಅಂತಿಮ ಹಂತದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಬೆಳಗಾವಿ ನಾಯಕರು ಎಲೆಕ್ಷನ್ ಯಾತ್ರೆ ಹೊರಡು ಸಾಧ್ಯತೆ ಇದೆ. ಮಹಾರಾಷ್ಟ್ರ ಎಲೆಕ್ಷನ್ನಲ್ಲಿ ಕರ್ನಾಟಕದ ನಾಯಕರಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ