‘ಮಹಾ’, ಜಾರ್ಖಂಡ್ ವಿಧಾನಸಭಾ ಚುನಾವಣೆ; ಇಂದು ಮತದಾನ.. ಒಟ್ಟು ಎಷ್ಟು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ?

author-image
Bheemappa
Updated On
‘ಮಹಾ’, ಜಾರ್ಖಂಡ್ ವಿಧಾನಸಭಾ ಚುನಾವಣೆ; ಇಂದು ಮತದಾನ.. ಒಟ್ಟು ಎಷ್ಟು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ?
Advertisment
  • ಬಿಜೆಪಿ, ಕಾಂಗ್ರೆಸ್, ಶಿವಸೇನೆ ಸೇರಿ ಸ್ಥಳೀಯ ಪಕ್ಷಗಳು ಸ್ಪರ್ಧೆ
  • 1,00,186 ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ ಇಂದ ಮತದಾನ
  • ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗಳ ಸಂಖ್ಯೆ.?

ನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್​ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆ 07 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಗೆ ವೋಟಿಂಗ್ ಮುಕ್ತಾಯವಾಗಲಿದೆ. ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಚುನಾವಣೆಯ ಫಲಿಂತಾಂಶವು ನವೆಂಬರ್ 23 ರಂದು ಹೊರ ಬೀಳಲಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಒಟ್ಟು 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಕಣಸಲ್ಲಿ ಬರೋಬ್ಬರಿ 4,136 ಅಭ್ಯರ್ಥಿಗಳು ಇದ್ದು ಗೆಲುವಿಗಾಗಿ ಎದುರು ನೋಡುತ್ತಿದ್ದಾರೆ. ಇದರಲ್ಲಿ 2,086 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ. ಮಹಾರಾಷ್ಟ್ರದಲ್ಲಿ ಈ ಸಲ ಒಟ್ಟು 9.70 ಕೋಟಿ ಜನರು ವೋಟ್​ ಮಾಡುತ್ತಿದ್ದಾರೆ. ಇದರಲ್ಲಿ ಹೊಸ ಮತದಾರರ ಕೂಡ ಸೇರಿದ್ದಾರೆ.

ಇದನ್ನೂ ಓದಿ:‘ಮಹಾ’ ಎಲೆಕ್ಷನ್​; ರಾಜ್ಯದ ಕಾಂಗ್ರೆಸ್​ ನಾಯಕರಿಗೆ ಡಿಮ್ಯಾಂಡ್.. ಸಿಎಂ, ಡಿಸಿಎಂ, ಸಚಿವರು ಕ್ಯಾಂಪೇನ್

publive-image

2024ರ ಎಲೆಕ್ಷನ್​​ನಲ್ಲಿ ಮತದಾರ ಪ್ರಭುಗಳು ಯಾರಿಗೆ ಒಲವು ತೋರಿಸುತ್ತಾರೆ ಎಂದು ಕಾದು ನೋಡಬೇಕಿದೆ. ಬಿಜೆಪಿ 149 ಸ್ಥಾನಗಳಲ್ಲಿ, ಶಿವಸೇನಾ 81, ಅಜಿತ್ ಪವರ್ ಅವರ ಎನ್​ಸಿಪಿ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಪ್ರತಿಪಕ್ಷಗಳಾದ ಕಾಂಗ್ರೆಸ್​ 101, ಶಿವಸೇನಾ (ಯುಬಿಟಿ) 95, ಎನ್​ಸಿಪಿ (ಎಸ್​ಪಿ) 86 ಸ್ಥಾನಗಳಲ್ಲಿ ಸೀಟ್ ಹಂಚಿಕೊಂಡು ಸ್ಪರ್ಧೆ ಮಾಡುತ್ತಿವೆ.

ಮಹಾರಷ್ಟ್ರದ 52,789 ಸ್ಥಳಗಳಲ್ಲಿ 1,00,186 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 42,604 ನಗರ ಮತಗಟ್ಟೆಗಳು ಮತ್ತು 57,582 ಗ್ರಾಮೀಣ ಮತಗಟ್ಟೆಗಳು ಸೇರಿವೆ. ಇವುಗಳಲ್ಲಿ 299 ಮತಗಟ್ಟೆಗಳನ್ನು ವಿಕಲಚೇತನರಿಗಾಗಿ (PwD) ಇವೆ.

ಜಾರ್ಖಂಡ್​​ನಲ್ಲಿ ವಿಧಾನಸಭಾ

ಜಾರ್ಖಂಡ್​​ನಲ್ಲಿ 81 ವಿಧಾನಸಭಾ ಕ್ಷೇತ್ರಗಳಿಗೆ ಎಲೆಕ್ಷನ್ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ ನವೆಂಬರ್ 13 ರಂದು 43 ವಿಧಾನಸಭಾ ಕ್ಷೇತ್ರಗಳಿಗೆ ವೋಟಿಂಗ್ ನಡೆದಿದೆ. ಎರಡನೇ ಹಂತದಲ್ಲಿ 38 ಕ್ಷೇತ್ರಗಳಿಗೆ ಇಂದು ವೋಟಿಂಗ್ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

2ನೇ ಹಂತದಲ್ಲಿ ಮತದಾನದಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಅಖಾಡದಲ್ಲಿದೆ. ಇದರ ಮಿತ್ರಪಕ್ಷವಾದ ಎಜೆಎಸ್‌ಯು 6 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಅದರಂತೆ ಭಾರತ ಬ್ಲಾಕ್‌ಗೆ, JMM 20 ಸ್ಥಾನಗಳಲ್ಲಿ ಕಾಂಗ್ರೆಸ್ 13, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) 4 ಮತ್ತು RJD 2 ಸ್ಥಾನಗಳನ್ನು ಹಂಚಿಕೊಂಡು ಸ್ಪರ್ಧೆ ಮಾಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment