newsfirstkannada.com

ಥಿಯೇಟರ್ಸ್​​ನಲ್ಲೇ ಲೋಕಸಭಾ ಚುನಾವಣಾ ಫಲಿತಾಂಶದ ಲೈವ್​​ ನೋಡಬಹುದು.. ಹೇಗೆ? ಟಿಕೆಟ್ ದರ ಇದೆಯಾ?

Share :

Published June 3, 2024 at 6:07am

Update June 3, 2024 at 6:08am

    ಜೂನ್ 1 ರವರೆಗೆ ನಡೆದ ಲೋಕಸಭಾ ಚುನಾವಣೆಯ ಮತದಾನ

    ಲೋಕ ಸಮರದ ಲೈವ್ ಸ್ಟ್ರೀಮಿಂಗ್ ಥಿಯೇಟರ್​ಗಳಲ್ಲಿ ನೋಡಿ.!

    ಚುನಾವಣಾ ಫಲಿತಾಂಶ ಥಿಯೇಟರ್ಸ್​​ನಲ್ಲಿ ನೋಡಲು ಹಣವೆಷ್ಟು?

18ನೇ ಲೋಕಸಭಾ ಚುನಾವಣೆಯ ಮತದಾನವು ದೇಶದೆಲ್ಲೆಡೆ ಮುಕ್ತಾಯಗೊಂಡಿದೆ. ವೋಟಿಂಗ್ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಬಿಜೆಪಿ ಮತ್ತೆ ಗದ್ದುಗೆ ಏರಲಿದೆ ಎಂದು ಹೇಳಿವೆ. ಆದ್ರೆ ಇದಕ್ಕೆಲ್ಲ ಜೂನ್ 4 ರಂದು ಲೋಕಸಭಾ ರಿಸಲ್ಟ್​ ಉತ್ತರ ಕೊಡಲಿದೆ. 18ನೇ ಲೋಕ ಸಮರದ ಲೈವ್ ಸ್ಟ್ರೀಮಿಂಗ್ ಅನ್ನು ಥಿಯೇಟರ್​ಗಳಲ್ಲಿ ಕುಳಿತು ವೀಕ್ಷಣೆ ಮಾಡಬಹುದಾಗಿದ್ದು ಇದಕ್ಕೆ ಇಂತಿಷ್ಟು ದರ ಕೂಡ ನಿಗದಿ ಮಾಡಲಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ನಾಗರಿಕರನ್ನು ತೊಡಗಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯ ವಿಶೇಷ ಕಾರ್ಯಕ್ರಮ ರೂಪಿಸಿದೆ. ನಗರಗಳಲ್ಲಿನ ಚಿತ್ರಮಂದಿರಗಳು 2024ರ ಲೋಕಸಭಾ ಚುನಾವಣೆಯ ಲೈವ್ ಸ್ಟ್ರೀಮಿಂಗ್ ಅನ್ನು ಪ್ರದರ್ಶನ ಮಾಡಲಿವೆ. ಈ ವಿನೂತನ ಕಾರ್ಯಕ್ರಮವನ್ನು ಮುಂಬೈ, ಪುಣೆ, ನಾಸಿಕ್ ಮತ್ತು ನಾಗ್ಪುರದಂತಹ ಪ್ರಮುಖ ನಗರಗಳ ಥಿಯೇಟರ್​​ಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಇದಕ್ಕೆ ಶುಲ್ಕ ನಿಗದಿ ಪಡಿಸಲಾಗಿದ್ದು ಟಿಕೆಟ್ ದರ ಒಬ್ಬರಿಗೆ 99 ರಿಂದ 300 ರೂಪಾಯಿವರಗೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಶ್ವಕಪ್​​​ನ ಮೊದಲ ಪಂದ್ಯದಲ್ಲೇ ಅಮೆರಿಕ ಸೆನ್ಸೇಷನ್.. ಭಾರತಕ್ಕೆ ಎಚ್ಚರಿಕೆ ಕೊಟ್ಟ ಆ್ಯರೋನ್ ಜೇನ್ಸ್​

ಮುಂಬೈನ ಸಿಯಾನ್‌ನಲ್ಲಿನ ಮೂವೀಮ್ಯಾಕ್ಸ್​​ನಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪ್ರದರ್ಶನ ಮಾಡಲಾಗುತ್ತದೆ. SM5 ಕಲ್ಯಾಣ್, ಎಟರ್ನಿಟಿ ಮಾಲ್- ಥಾಣೆ, ಕಂಜುರ್ಮಾರ್ಗ್, ವಂಡರ್ ಮಾಲ್ ಥಾಣೆ, ಮೀರಾ ರೋಡ್ ಮೂವೀಮ್ಯಾಕ್ಸ್​ನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವವನ್ನು ನೋಡಬಹುದಾಗಿದೆ. ಈ ಚುನಾವಣಾ ಫಲಿತಾಂಶಗಳ ಲೈವ್ ಸ್ಟ್ರೀಮಿಂಗ್ ಬೆಳಗ್ಗೆ 9.00 ಗಂಟೆಗೆ ಪ್ರಾರಂಭವಾಗಿ 6 ಗಂಟೆಗಳ ಕಾಲ ಮುಂದುವರಿಯುತ್ತದೆ. ಅಂದರೆ ಮಧ್ಯಾಹ್ನ 3 ಗಂಟೆಗೆ ಲೈವ್ ಸ್ಟ್ರೀಮಿಂಗ್ ಮುಕ್ತಾಯವಾಗುತ್ತದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಥಿಯೇಟರ್ಸ್​​ನಲ್ಲೇ ಲೋಕಸಭಾ ಚುನಾವಣಾ ಫಲಿತಾಂಶದ ಲೈವ್​​ ನೋಡಬಹುದು.. ಹೇಗೆ? ಟಿಕೆಟ್ ದರ ಇದೆಯಾ?

https://newsfirstlive.com/wp-content/uploads/2024/06/LOK_SABHA_POLL.jpg

Load More