newsfirstkannada.com

ಜೈಲಿನಲ್ಲಿ ಶ್ರೀರಾಮನ ಪೂಜೆ ಮಾಡಿದ್ಕೆ ಅನ್ಯಕೋಮಿನ ಕೈದಿಗಳಿಂದ ಹಲ್ಲೆ ಆಗಿದೆ -ಚರ್ಚೆಗೆ ಕಾರಣವಾಗ್ತಿದೆ ವಿಡಿಯೋ

Share :

Published January 27, 2024 at 10:52am

  ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ನಡೆದ ಘಟನೆ

  ವಿಡಿಯೋ ರಿಲೀಸ್ ಮಾಡಿದ ಮಾಹಾರಾಷ್ಟ್ರದ ಕೈದಿ

  ಭಾರೀ ಚರ್ಚೆಗೆ ಕಾರಣವಾಗ್ತಿದೆ ಕೈದಿಯ ಈ ವಿಡಿಯೋ

ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಮಹಾರಾಷ್ಟ್ರ ಮೂಲದ ಕೈದಿಯೊಬ್ಬ ಜೈಲಿನಿಂದ ವಿಡಿಯೋ ಬಿಡುಗಡೆ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ವಿಡಿಯೋದಲ್ಲಿ ಮಾಡಿರುವ ಆರೋಪ ಏನು?
ಜನವರಿ 22 ರಂದು ಅಯೋಧ್ಯೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ ಮಹಾರಾಷ್ಟ್ರದ ಮೂವರು ಕೈದಿಗಳು ಶ್ರೀರಾಮನ ಪೂಜೆ ಮಾಡಿದ್ವಿ. ಜೈಲಿನಲ್ಲಿ ಪೂಜೆ ಮಾಡಿ ಪ್ರಸಾದ ಹಂಚಿ ರಾಮೋತ್ಸವ ಆಚರಿಸಿದ್ವಿ. ಅದಾದ ನಂತರ ಅಂದರೆ ಜನವರಿ 23 ರಂದು ಜೈಲಿನ ಅಧಿಕಾರಿಗಳು ಹಾಗೂ 30ಕ್ಕೂ ಹೆಚ್ಚು ಅನ್ಯ ಕೋಮಿನ ಕೈದಿಗಳು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾನೆ.

ರೌಡಿಶೀಟರ್ ಶೇಖ್ ಮೊಹಮ್ಮದ್ ಮೋದಿ ಹಾಗೂ ಗ್ಯಾಂಗ್‌ನಿಂದ ಹಲ್ಲೆ ಆಗಿದೆ. ಹಿಂದೂ ಕೈದಿಯಿಂದ ಜೈಲಿನಿಂದ ವಿಡಿಯೋ ರಿಲೀಸ್ ಆಗಿದೆ. ಜೈಲಿನೊಳಗೆ ಕೈದಿಗಳಿಗೆ ಮೊಬೈಲ್ ಅವಕಾಶ ಇಲ್ಲ. ಹಾಗಿದ್ದರೆ ಜೈಲಿನೊಳಗೆ ಕೈದಿ ಬಳಿ ಮೊಬೈಲ್ ಹೇಗೆ ಹೋಯ್ತು? ವಿಡಿಯೋ ಬಿಡುಗಡೆ ಹೇಗಾಯ್ತು ಅನ್ನೋದು ಚರ್ಚೆಗೆ ಗ್ರಾಸವಾಗಿದೆ.

ಆರೋಪ ನಿರಾಕರಣೆ
ಮಹಾರಾಷ್ಟ್ರದ ಜೈಲಿನಲ್ಲಿ ಜಗಳ ಆಗುತ್ತಿದ್ದ ಹಿನ್ನೆಲೆಯಲ್ಲಿ ಮೂವರು ಕೈದಿಗಳನ್ನು ವಿಜಯಪುರ ಜೈಲಿಗೆ ಸ್ಥಳಾಂತರಿಸಲಾಗಿದೆ. ವಿಜಯಪುರ ಕೇಂದ್ರ ಕಾರಾಗೃಹದಲ್ಲೂ ಇತರೆ ಕೈದಿಗಳೊಂದಿಗೆ ಇವರು ಜಗಳವಾಡಿದ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್​ನಲ್ಲಿ ಇಡಲಾಗಿದೆ. ಈ ಕಾರಣಕ್ಕೆ ಬೇರೆ ವಿಚಾರ ಹೇಳಿದ್ದಾರೆ ಎಂದು ಜೈಲು ಸೂಪರಿಂಟೆಂಡೆಂಟ್ ಮ್ಯಾಗೇರಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿ ಶ್ರೀರಾಮನ ಪೂಜೆ ಮಾಡಿದ್ಕೆ ಅನ್ಯಕೋಮಿನ ಕೈದಿಗಳಿಂದ ಹಲ್ಲೆ ಆಗಿದೆ -ಚರ್ಚೆಗೆ ಕಾರಣವಾಗ್ತಿದೆ ವಿಡಿಯೋ

https://newsfirstlive.com/wp-content/uploads/2024/01/VIJ-JAIL.jpg

Load More