Advertisment

ಪ್ರಾಣಕ್ಕೆ ಕುತ್ತು ತಂದ ರೀಲ್ಸ್​​​ ಹುಚ್ಚು.. ವಿಡಿಯೋಗಾಗಿ ಕಾರ್​ ಓಡಿಸಿ ಯುವತಿ ಭಯಾನಕ ಸಾವು

author-image
Bheemappa
Updated On
ಪ್ರಾಣಕ್ಕೆ ಕುತ್ತು ತಂದ ರೀಲ್ಸ್​​​ ಹುಚ್ಚು.. ವಿಡಿಯೋಗಾಗಿ ಕಾರ್​ ಓಡಿಸಿ ಯುವತಿ ಭಯಾನಕ ಸಾವು
Advertisment
  • ಗೆಳೆಯ ಮೊಬೈಲ್​​ನಲ್ಲಿ ರೀಲ್ಸ್​ ಮಾಡುವಾಗ ನಡೆದ ಘಟನೆ
  • ಫಸ್ಟ್ ಟೈಮ್ ಕಾರು ಓಡಿಸುವಾಗ ಕಣಿವೆ ಮೇಲಿಂದ ಬಿದ್ದು ಸಾವು
  • ಭಯಾನಕವಾದ ವಿಡಿಯೋ ಮೊಬೈಲ್​ ರೀಲ್ಸ್​ನಲ್ಲಿ ಸೆರೆ ಆಗಿದೆ

ಮುಂಬೈ: ಯುವತಿಯೊಬ್ಬರು ಕಾರು ಕಲಿಯುವಾಗ ಬ್ರೇಕ್​ ಬದಲಿಗೆ ಎಕ್ಸ್​ಲೆಟರ್ ತುಳಿದ ಪರಿಣಾಮ ಕಣಿವೆ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ.

Advertisment

ಶ್ವೇತಾ ಸರ್ವಸೇ (23) ಮೃತಪಟ್ಟ ದುರ್ದೈವಿ. ಇವರಿಗೆ ಕಾರು ಚಾಲನೆ ಮಾಡೋಕೆ ಬರೋದಿಲ್ಲ. ಆದರೆ ಆ ಸಮಯಕ್ಕೆ ಮೊಬೈಲ್​ನಲ್ಲಿ ರೀಲ್ಸ್​​ ಮಾಡುವ ಹುಚ್ಚಿಗಾಗಿ ಕಾರು ಚಾಲನೆ ಮಾಡಿದ್ದಾರೆ. ಈ ವೇಳೆ ಈಕೆಯ ಸ್ನೇಹಿತ ಶಿವರಾಜ್ ಮುಳೆ ಎನ್ನುವ ಯುವಕ ಇದನೆಲ್ಲ ಮೊಬೈಲ್​ನಲ್ಲಿ ರೀಲ್ಸ್ ಮಾಡುತ್ತಿದ್ದನು. ಯುವತಿ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಗೊತ್ತಿಲ್ಲದೇ ಬ್ರೇಕ್ ಬದಲಿಗೆ ಎಕ್ಸ್​ಲೆಟರ್ ತುಳಿದಿದ್ದಾಳೆ. ಹೀಗಾಗಿ ಕಾರು ವೇಗವಾಗಿ ಹಿಂದಕ್ಕೆ ಹೋಗಿ ಎತ್ತರದ ಕಣಿವೆಯಿಂದ ಕೆಳಕ್ಕೆ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ:A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್‌!

Advertisment


">June 18, 2024

ಇನ್ನು ಕಾರು ಮೇಲಿನಿಂದ ಕೆಳಕ್ಕೆ ಬಿದ್ದಿದ್ದರಿಂದ ಕೆಲಸಕ್ಕೆ ಬಾರದ ರೀತಿ ನಜ್ಜುಗುಜ್ಜಾಗಿದೆ. ಇನ್ನು ಮಾಹಿತಿ ತಿಳಿದು ಒಂದು ಗಂಟೆ ನಂತರ ಬಂದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕಣಿವೆಯಿಂದ ಕೆಳಕ್ಕೆ ಇಳಿದು ಯುವತಿನ್ನು ಪತ್ತೆ ಮಾಡಿದ್ದಾರೆ. ಆದರೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಮೃತದೇಹವನ್ನು ಪೋಸ್ಟ್​ಮಾರ್ಟ್​​ಮ್​ಗೆ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment