/newsfirstlive-kannada/media/post_attachments/wp-content/uploads/2024/05/maharastra.jpg)
ಚಿಕ್ಕೋಡಿ: ರಾಜ್ಯದಲ್ಲಿ ಈಗಷ್ಟೇ ಮಳೆ ಬೀಳಲಾರಂಭಿಸಿದೆ. ನದಿ, ಕೆರೆ, ಕಟ್ಟೆಗಳಿಗೆ ಜೀವಕಲೆ ಬರಬೇಕಿದೆ. ಆದರೆ ಅದಕ್ಕೂ ಮುನ್ನವೇ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿ ನೀರಿನ ವಿಚಾರವಾಗಿ ಮತ್ತೆ ಮಹಾಕ್ಯಾತೆ ಎತ್ತಿದೆ.
ಮಹಾರಾಷ್ಟ್ರ ಸರ್ಕಾರ ಮತ್ತೆ ತನ್ನ ಹಳೇ ಬುದ್ಧಿ ತೋರಿಸಿದೆ. ಕರ್ನಾಟದ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಲ್ಲಿ ಹರಿದು ಹೋಗುವ ಕೃಷ್ಣಾ ನದಿ ನೀರನ್ನು ತಡೆಹಿಡಿದಿದೆ.
ಕೃಷ್ಣಾ ನದಿ ನೀರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿತ್ತು. ಆದರೀಗ ನೆರೆಯ ರಾಜ್ಯ ರಾಜಾಪುರ ಬ್ಯಾರೇಜ್ ಬಳಿ ನಾಲ್ವರು ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಇಬ್ಬರು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ನೀರಾವರಿ ಇಲಾಖೆಯ ಸಿಬ್ಬಂದಿ ನಿಯೋಜಿಸಿದೆ.
ಇದನ್ನೂ ಓದಿ: KRS ಡ್ಯಾಂ ಒಳಹರಿವಿನ ಪ್ರಮಾಣ ಹೆಚ್ಚಳದಿಂದ ರೈತರ ಮೊಗದಲ್ಲಿ ಮಂದಹಾಸ! ಇಂದು ನೀರಿನ ಮಟ್ಟ ಎಷ್ಟಿದೆ?
ಮಹಾರಾಷ್ಟ್ರ ಸರ್ಕಾರ ನಾಲ್ವರು ಸಿಬ್ಬಂದಿಯ ಎರಡು ಗಸ್ತು ತಂಡವನ್ನು ನೇಮಕ ಮಾಡಿದೆ. ಸದ್ಯ ಈ ವಿಚಾರವಾಗಿ ಕರ್ನಾಟಕ ಭಾಗದ ಜನರಿಗೆ ಬೇಸರವಾಗಿದೆ. ಮಳೆ ಬೀಳಲು ಆರಂಭಿಸುವ ಪ್ರಾರಂಭದಲ್ಲೇ ವಕ್ರ ಬುದ್ಧಿ ತೋರಿಸಿದ್ದಕ್ಕೆ ಜನರು ಕಿಡಿಕಾರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us