/newsfirstlive-kannada/media/post_attachments/wp-content/uploads/2025/02/SHIVARATRI.jpg)
ಶಿವರಾತ್ರಿ ಅಂದ್ರೆ ಪವಿತ್ರ ಹಾಗೂ ಮಂಗಳಕರ ರಾತ್ರಿ ಎಂದು ಅರ್ಥ. ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ ಉಪಾಸನೆ ಮಾಡಿದಾಗ ಸಕಲ ಪಾಪ-ಕರ್ಮಗಳು ಕಳೆದು ಪುಣ್ಯ ಸಂಚಯವಾಗುವ ನಂಬಿಕೆ ಇದೆ. ಅದೇ ರೀತಿ ಮಹಾ ಶಿವರಾತ್ರಿಯನ್ನು ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಯಿತು. ಎಲ್ಲೆಲ್ಲೂ ಶಿವನಾಮ ಸ್ಮರಣೆ ಮಾರ್ಧನಿಸಿತು.
ಕೊಯಮತ್ತೂರಿನಲ್ಲಿ ಅದ್ಧೂರಿ ಶಿವರಾತ್ರಿ ಜಾಗರಣೆ
ಕೊಯಮತ್ತೂರಿನಲ್ಲಿರುವ ಈಶಾ ಯೋಗ ಕೇಂದ್ರದಲ್ಲಿ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಲಾಯಿತು. ಕೇಂದ್ರ ಸಚಿವ ಅಮಿತ್ ಶಾ, ಡಿಸಿಎಂ ಡಿ.ಕೆ ಶಿವಕುಮಾರ್ ಪಾಲ್ಗೊಂಡು ಶಿವನ ನಾಮ ಸ್ಮರಣೆ ಮಾಡಿದರು. ಇನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಶಿವಧ್ಯಾನದಲ್ಲಿ ಮಂತ್ರ ಮುಗ್ಧರನ್ನಾಗಿಸ್ತು. ಇನ್ನು ಲೇಸರ್ ಶೋ ನೆರೆದಿದ್ದ ಭಕ್ತರ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.
ಆರ್ಟ್ ಹಾಫ್ ಲೀವಿಂಗ್ನಲ್ಲೂ ಶಿವರಾತ್ರಿ ಸಂಭ್ರಮ ಜೋರಾಗಿತ್ತು. ಸುಮಾರು 1000 ವರ್ಷಗಳ ನಂತರ ಪುರಾತನ ಸೋಮನಾಥ ಜ್ಯೋತಿರ್ಲಿಂಗವನ್ನು ಸಾವಿರಾರು ಭಕ್ತರ ಮುಂದೆ ಬಹಿರಂಗ ಮಾಡಲಾಯಿತು. 1,000 ವರ್ಷಗಳ ಹಿಂದೆ ಭಗ್ನವಾಗಿ ಕಣ್ಮರೆಯಾಗಿದ್ದ ಸೋಮನಾಥ ಜ್ಯೋತಿರ್ಲಿಂಗದ ಪುನರ್ ಉದಯವಾಗಿದೆ. ಮಹಾ ರುದ್ರ ಹೋಮದೊಂದಿಗೆ ಶಿವರಾತ್ರಿ ಸಂಪನ್ನವಾಯಿತು.
ಧರ್ಮಸ್ಥಳ, ಕದ್ರಿಯಲ್ಲೂ ಶಿವರಾತ್ರಿ ಜಾಗರಣೆ ಜೋರು
ರಾಜ್ಯದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲೂ ಶಿವರಾತ್ರಿ ಸಂಭ್ರಮ ಜೋರಾಗಿತ್ತು. ಶಿವಪಂಚಾಕ್ಷರಿ ಮಂತ್ರದೊಂದಿಗೆ ಜಾಗರಣೆ ಶುರುವಾಯಿತು. ಇನ್ನು ಸಂಸ್ಕೃತಿಕ ಕಾರ್ಯಕ್ರಮಗಳು. ಮಂಜುನಾಥಸ್ವಾಮಿ ಮೆರವಣಿಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಮುರುಡೇಶ್ವರದಲ್ಲೂ ಶಿವರಾತ್ರಿ ಅಂಗವಾಗಿ ಜಾಗರಣೆ ಮೂಲಕ ಭಕ್ತರು ಶಿವನ ಧನ್ಯಮಾಡಿ ಪುನೀತರಾದರು.
ಇದನ್ನೂ ಓದಿ: ಯಶಸ್ವಿಯಾದ ಮಹಾ ಕುಂಭಮೇಳ.. ಉತ್ತರ ಪ್ರದೇಶಕ್ಕೆ ಎಷ್ಟು ಲಕ್ಷ ಕೋಟಿ ಆದಾಯ ಬಂದಿದೆ ಗೊತ್ತಾ?
ಇನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನದ ಮೂಲಕ ವಿಶಿಷ್ಠ ರೀತಿಯಲ್ಲಿ ಶಿವರಾತ್ರಿ ಆಚರಣೆ ಮಾಡಲಾಯಿತು. ಇನ್ನು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮಾರ್ಕಂಡೇಶ್ವರ ದರ್ಶನ ಪಡೆದು ಭಕ್ತರು ಪುನೀತರಾದರು.
ದೇಶದ ಮೂಲೆ ಮೂಲೆಯಲ್ಲೂ ಗಂಗಾಧರ.. ನೀಲಕಂಠ.. ಮುಕ್ಕಣ್ಣನ ಆರಾಧನೆ ಅದ್ಧೂರಿ ಆಗಿತ್ತು. ಭಕ್ತರು ರಾತ್ರಿಯಿಡೀ ಜಾಗರಣೆ ಇದ್ದು, ಶಿವನ ಕೃಪೆಗೆ ಪಾತ್ರರಾದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ