Advertisment

MS ಧೋನಿ ದೊಡ್ಡ ಹೆಜ್ಜೆ.. ಕ್ಯಾಪ್ಟನ್​​ ಕೂಲ್​​ಗಾಗಿ ಟ್ರೇಡ್​ಮಾರ್ಕ್​​ಗೆ ಅರ್ಜಿ..!

author-image
Ganesh
ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?
Advertisment
  • ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ
  • ಒತ್ತಡದ ಸಂದರ್ಭಗಳಲ್ಲಿಯೂ ತಾಳ್ಮೆಯಿಂದ ನಿರ್ಧಾರಕ್ಕೆ ಫೇಮಸ್
  • ಟ್ರೇಡ್‌ಮಾರ್ಕ್‌ಗಳ ನೋಂದಾವಣೆ ಪೋರ್ಟಲ್ ಹೇಳಿದ್ದೇನು..?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ (MS Dhoni) ಹುಟ್ಟುಹಬ್ಬ ಸಮೀಪಿಸುತ್ತಿದೆ. ಜುಲೈ 7 ರಂದು ಧೋನಿಗೆ 44 ವರ್ಷ ತುಂಬಲಿದೆ. ಲೇಟೆಸ್ಟ್ ವಿಷಯ ಏನೆಂದರೆ ‘ಕ್ಯಾಪ್ಟನ್ ಕೂಲ್' (Captain Cool) ಎಂಬ ಪದಗುಚ್ಛಕ್ಕೆ ‘ಟ್ರೇಡ್‌ಮಾರ್ಕ್’ (Trademark) ಸಲ್ಲಿಸಿದ್ದಾರೆ.

Advertisment

ಒತ್ತಡದ ಸಂದರ್ಭಗಳಲ್ಲಿಯೂ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ಧೋನಿ ಅವರನ್ನು ‘ಕ್ಯಾಪ್ಟನ್ ಕೂಲ್’ ಎಂದು ಕರೆಯಲಾಗುತ್ತದೆ. ಜೂನ್ 5 ರಂದು ಥಾಲಾ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: 2ನೇ ಟೆಸ್ಟ್​ನಲ್ಲಿ 4 ಬದಲಾವಣೆ ಫಿಕ್ಸ್..! ಯಾರಿಕೆ ಕೊಕ್? ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ..?

publive-image

ಟ್ರೇಡ್‌ಮಾರ್ಕ್‌ಗಳ ನೋಂದಾವಣೆ ಪೋರ್ಟಲ್ (Trade Marks Registry portal) ಪ್ರಕಾರ.. ಎಂಎಸ್ ಧೋನಿ ಅವರ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಈ ಸಂಬಂಧ ಜಾಹೀರಾತು ಮಾಡಲಾಗಿದೆ. ಈ ಟ್ರೇಡ್‌ಮಾರ್ಕ್ ಅನ್ನು ಕ್ರೀಡಾ ತರಬೇತಿ ಮತ್ತು ಟ್ರೈನಿಂಗ್ ಸರ್ವೀಸ್ ಒದಗಿಸುವ ಕ್ಯಾಟಗರಿಯಲ್ಲಿ ನೋಂದಾಯಿಸಲಾಗಿದೆ. ಈ ಬಗ್ಗೆ ಧೋನಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ವರದಿಯ ಪ್ರಕಾರ, ಪ್ರಭಾ ಸ್ಕಿಲ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ‘ಕ್ಯಾಪ್ಟನ್ ಕೂಲ್’ ಎಂಬ ಪದಗುಚ್ಛಕ್ಕಾಗಿ ಅರ್ಜಿ ಸಲ್ಲಿಸಿದೆ. ಆದರೆ ಆ ಅರ್ಜಿ ಪೆಂಡಿಂಗ್​​ನಲ್ಲಿ ಇಡಲಾಗಿದೆ.

Advertisment

ಆಗಸ್ಟ್ 2020 ರಲ್ಲಿ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. 350 ODI ಪಂದ್ಯ ಆಡಿರುವ ಧೋನಿ 10,773 ರನ್ ಗಳಿಸಿದ್ದಾರೆ. 90 ಟೆಸ್ಟ್ ಪಂದ್ಯಗಳಲ್ಲಿ 4,876 ರನ್ ಗಳಿಸಿದ್ದಾರೆ. 98 ಪಂದ್ಯಗಳ T20 ವೃತ್ತಿಜೀವನದಲ್ಲಿ 1,617 ರನ್ ಗಳಿಸಿದ್ದಾರೆ.

ಇದನ್ನೂ ಓದಿ: 2ನೇ ಟೆಸ್ಟ್​ನಲ್ಲಿ 4 ಬದಲಾವಣೆ ಫಿಕ್ಸ್..! ಯಾರಿಕೆ ಕೊಕ್? ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment