newsfirstkannada.com

53 ದಿನ, 70 ಪಂದ್ಯ, 12 ಸ್ಥಳ.. ಅಲ್ಲಿ ಒಬ್ಬನದ್ದೇ ಹವಾ.. ಹೇಗಿತ್ತು ಗೊತ್ತಾ ‘ಧೋನಿ ಜಾತ್ರೆ’..?

Share :

Published May 30, 2023 at 5:09am

    ಎಲ್ಲೇ ಹೋಗ್ಲಿ.. ಎಲ್ಲೇ ಬರ್ಲಿ.. ಧೋನಿದ್ದೇ ಹವಾ..!

    ಮಾಂತ್ರಿಕ ಮಹೆಂದ್ರನಿಗೆ ಎಲ್ಲರೂ ಕ್ಲೀನ್​ ಬೋಲ್ಡ್​

    ಧೋನಿ ಜೈಕಾರ ಕೇಳಿ ತಬ್ಬಿಬ್ಬಾದ ಱಪರ್

ಬರೋಬ್ಬರಿ 2 ತಿಂಗಳ ಕಾಲ ನಡೆದ ಕ್ರಿಕೆಟ್​ ಜಾತ್ರೆಗೆ ಅದ್ಧೂರಿ ತೆರೆಬಿದ್ದಿದೆ. ಈ ಸೀಸನ್​ನಲ್ಲಿ ರನ್​ ಹೊಳೆಯೇ ಹರೀತು. ದಾಖಲೆಗಳು ಉಡೀಸ್​ ಆದ್ವು. ರಣರೋಚಕ ಪಂದ್ಯಗಳು ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದ್ವು. ಆದ್ರೆ ಕೊನೆವರೆಗೂ ಕನ್ಸಿಸ್ಟೆಂಟ್​ ಆಗಿದ್ದು ಒಂದೇ. ಅದೇ ಧೋನಿ ಜಾತ್ರೆ.

53 ದಿನ, 70 ಪಂದ್ಯ, 12 ಸ್ಥಳ.. ಒಬ್ಬನದೇ ಹವಾ..!
ಕಳೆದ 3 ವರ್ಷದಿಂದ ಸೊರಗಿದ್ದ ಐಪಿಎಲ್​ಗೆ ಈ ಸೀಸನ್​ನಲ್ಲಿ ಕಳೆ ಬಂದಿತ್ತು. ಹೋಮ್​ & ಅವೇ ಫಾರ್ಮೆಟ್​ ವಾಪಸ್ಸಾಗಿದ್ದು ಫ್ಯಾನ್ಸ್​ ಎಕ್ಸೈಟ್​​ಮೆಂಟ್​​ ಅನ್ನ ಹೆಚ್ಚಿಸಿತ್ತು. 53 ದಿನ ನಡೆದ 70 ಪಂದ್ಯಗಳು ಫ್ಯಾನ್ಸ್​ಗೆ ಸಖತ್ ಮನರಂಜನೆ​ ನೀಡಿದ್ದು ಸುಳ್ಳಲ್ಲ.. ಆದ್ರೆ, ಐಪಿಎಲ್​ ನಡೆದ 12 ಸ್ಥಳಗಲ್ಲೂ ನಡೆದಿದ್ದು ಒಬ್ಬನದ್ದೇ ಹವಾ. ಅದೇ ಧೋನಿ ಮೇನಿಯಾ.

ಕ್ರಿಕೆಟ್​​ ಜಾತ್ರೆಯಲ್ಲ.. ಇದು ತಲಾ ಧೋನಿ ಜಾತ್ರೆ..!
ನಿನ್ನೆ ಕ್ಲೋಸಿಂಗ್​ ಸೆರಮನಿ ಅದ್ಭುತವಾಗಿ ನಡೀತಿತ್ತು. ಱಪರ್​ ಹಾಡ್ತಿದ್ದ ಹಾಡು ಕೇಳಿ ಫ್ಯಾನ್ಸ್​ ಹುಚ್ಚೆದ್ದು ಕುಣೀತಾ ಇದ್ರು. ಆದ್ರೆ ಇದಕ್ಕಿದ್ದಂತೆ ಆದ ಒಂದು ಬದಲಾವಣೆಗೆ ಱಪರ್​ ಕಕ್ಕಾಬಿಕ್ಕಿ ಆಗಿಬಿಟ್ಟ. ಅಂತಾ ಪ್ರಳಯ ಏನ್​ ಆಗ್ಲಿಲ್ಲ.. ಎಂದಿನಂತೆ ಕೂಲ್​ & ಕಾಮ್​​ ಆಗಿ ಧೋನಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದೇ ತಡ ಱಪರ್​ ಹಾಡೇ ಕೇಳಿಸಲಿಲ್ಲ.. ಧೋನಿ… ಧೋನಿ.. ಹರ್ಷೋದ್ಘಾರವೇ ಮುಗಿಲು ಮುಟ್ಟಿತ್ತು.

ರಾಕೆಟ್​​, ವಿಮಾನದ ಶಬ್ದಕ್ಕೂ ಧೋನಿ ಜೈಕಾರದ ಸವಾಲ್
ಒಂದು ರಾಕೆಟ್​​ ಉಡಾವಣೆಯಾಗೋವಾಗ ಹುಟ್ಟೋ ಶಬ್ದದ ತೀವ್ರತೆ ಅಂದಾಜು 200 ಡೆಸಿಬಲ್​​. ಒಂದು ಫ್ಲೈಟ್​​ ಟೇಕಾಫ್​ ಆಗೋವಾಗ ಬರೋ ಸೌಂಡ್​ ಅಂದಾಜು 130 ಡೆಸಿಬಲ್​ ಇರುತ್ತೆ. ಇವರೆಡನ್ನೂ ಬಿಟ್ರೆ, 5 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ ಮ್ಯೂಸಿಕ್​ ಕಾನ್ಸರ್ಟ್​​ನಲ್ಲಿ 115 ಡೆಸಿಬಲ್​ ಶಬ್ದದ ತೀವ್ರತೆ ದಾಖಲಾಗಿತ್ತು. ಈ ಬಾರಿಯ ಐಪಿಎಲ್​​ ಈ ದಾಖಲೆಯನ್ನ ಉಡೀಸ್​ ಮಾಡಿ, ಫ್ಲೈಟ್​​, ರಾಕೆಟ್​ ಶಬ್ದಕ್ಕೂ ಟಕ್ಕರ್​ ಕೊಡ್ತು. ಧೋನಿ ಅನ್ನೋ ಮಾಂತ್ರಿಕ ಹೆಸರಿಗಿರೋ ಪವರ್​​ ಅದು.

ಧೋನಿ ಟಾಸ್​​ಗಾಗಿ ಅಖಾಡಕ್ಕಿಳಿದಾಗಲೇ ಸರಾಸರಿ 117ರ ಡೆಸಿಬಲ್​ ಶಬ್ದದ ತೀವ್ರತೆ ದಾಖಲಾಗಿತ್ತು. ಚೆನ್ನೈನ ಚೆಪಾಕ್​ಗೆ ಮಾತ್ರ ಧೋನಿ ಮೇನಿಯಾ ಸೀಮಿತವಾಗಿರಲಿಲ್ಲ. ಅಹಮದಾಬಾದ್​, ಬೆಂಗಳೂರು, ಲಕ್ನೋ, ಎಲ್ಲೇ ಹೋಗಲಿ, ಎಲ್ಲೇ ಬರಲಿ. ಧೋನಿ. ಧೋನಿ ಎಂಬ ಕೂಗು ಮಾರ್ಧನಿಸಿತ್ತು.
ಇಷ್ಟೇ ಅಲ್ಲ.. ಈ ಬಾರಿ ಮಹೇಂದ್ರನ ಮೇನಿಯಾ ಯಾವ ಮಟ್ಟಕ್ಕಿತ್ತು ಅಂದ್ರೆ ಸ್ವತಃ ಧೋನಿಯೇ ಇದ್ರಿಂದ ಪೀಕಲಾಟಕ್ಕೆ ಸಿಲುಕಿದ್ರು. ಚೆನ್ನೈನ ಚೆಪಾಕ್​ನಲ್ಲಿ ಇಂಟರ್​ವ್ಯೂಗೆ ಅಂತಾ ಬಂದ ಧೋನಿಗೆ ಕಾಮೆಂಟೇಟರ್​ ಹೇಳಿದ ಪ್ರಶ್ನೆಯೇ ಕೇಳಲಿಲ್ಲ. ಕೊನೆಗೆ ಸೌಂಡ್​ ಸ್ಪೀಕರ್​ಗೆ ಧೋನಿ ಕಿವಿಕೊಡಬೇಕಾದ ಅನಿವಾರ್ಯತೆ ಎದುರಾಯ್ತು.

ಧೋನಿ ಮಾತ್ರವಲ್ಲ.. ಕಾಮೆಂಟೇಟರ್​ ಕೂಡ ಅಭಿಮಾನಿಗಳ ಜೈಕಾರ ಕಂಡು ಬೆಪ್ಪಾದ್ರು. ಮಾತು ಕೇಳದೆ ಈ ಸನ್ನೆಯಲ್ಲೇ ಮಾತಾಡೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಷ್ಟೇ ಅಲ್ಲ. ಕೊನೆಗೆ ಧೋನಿಯನ್ನೇ ನಾನ್​ ಯಾವಾಗ್​ ಸ್ಟಾರ್ಟ್​ ಮಾಡ್ಲಿ ಎಂದು ಕೇಳಿದ್ದು ಆಯ್ತು.

ಧೋನಿ.. ಧೋನಿ ಜೈಕಾರ ಇಷ್ಟಕ್ಕೆ ಮಾತ್ರ ಸೀಮಿತವಾಗಿತ್ತು ಅನ್ಕೋಬೇಡಿ. ಧೋನಿ ಹೊಡೆದ ಒದೊಂದು ಬೌಂಡರಿ, ಸಿಕ್ಸರ್​ಗೆ ರೂಫ್​ ಟಾಪ್​ ಕಿತ್ತೋಗೋ ರೀತಿಯಲ್ಲಿ ಕೂಗಿ ಫ್ಯಾನ್ಸ್​ ಸಂಭ್ರಮಿಸಿದ್ರು. ಏನೇ ಹೇಳಿ, ಧೋನಿ ಅನ್ನೋ ಹೆಸರಿಗಿರೋ ಗತ್ತೇ ಬೇರೆ ಕಣ್ರಿ. ಮಾಂತ್ರಿಕ ಮಾಹಿಗೆ ಒಂದು ಸಲಾಂ ಅಷ್ಟೇ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

53 ದಿನ, 70 ಪಂದ್ಯ, 12 ಸ್ಥಳ.. ಅಲ್ಲಿ ಒಬ್ಬನದ್ದೇ ಹವಾ.. ಹೇಗಿತ್ತು ಗೊತ್ತಾ ‘ಧೋನಿ ಜಾತ್ರೆ’..?

https://newsfirstlive.com/wp-content/uploads/2023/05/DHONI-1.jpg

Load More