newsfirstkannada.com

IPL ಬಳಿಕ ಭಗವದ್ಗೀತೆ ಹಿಡಿದ ಧೋನಿ? ಶ್ರೀಕೃಷ್ಣ ಹೇಳಿದ್ದನ್ನು ಫಾಲೋ ಮಾಡ್ತಾರ ಮಾಹಿ?

Share :

02-06-2023

  CSK ಕ್ಯಾಪ್ಟನ್​ ಧೋನಿ ಕೈಯಲ್ಲಿ ಭಗವದ್ಗೀತೆ

  IPL ಮುಗಿದ ಬಳಿಕ ಪವಿತ್ರಗ್ರಂಥ ಹಿಡಿದ ಮಾಹಿ

  ಕೃಷ್ಣನ ದಾರಿ ಅನುಸರಿಸುತ್ತಾರಾ ಧೋನಿ?

ಸಂಧ್ಯಾಕಾಲದಲ್ಲೂ ಲೆಜೆಂಡ್ ಧೋನಿ ಯಶಸ್ಸಿನ ಓಟ ಮುಂದುವರಿದಿದೆ. ಇದು ಎರಡು ದಶಕಗಳ ಅನ್​ಸ್ಟಾಪೆಬಲ್​​​ ಯಶೋಗಾಥೆ. ಟೀಮ್ ಇಂಡಿಯಾ ಮುನ್ನಡೆಸಿದಾಗಲೂ ಅದೇ. ನಿವೃತ್ತಿ ಕೊಟ್ಟ ನಂತರವೂ ಮಾಹಿ ಸಕ್ಸಸ್​ ಮೇಲೆ ಸಕ್ಸಸ್​ ಕಾಣ್ತಿದ್ದಾರೆ. ಈ ಬಿಗ್ಗೆಸ್ಟ್​​​​​​ ಸಕ್ಸಸ್​​ ಹಿಂದಿನ ಸಿಕ್ರೇಟ್​​​ ಏನು ಅನ್ನೋದು ಈಗ ರಿವೀಲ್ ಆಗಿದೆ.

3 ಐಸಿಸಿ ಟ್ರೋಫಿ.. 5 ಐಪಿಎಲ್​ ಕಪ್​​​..!

ಇದು ವಿಶ್ವಮೆಚ್ಚಿದ ಮಹೇಂದ್ರ ಸಿಂಗ್ ಧೋನಿಯ ಯಶೋಗಾಥೆ. 3 ಐಸಿಸಿ ಮಾದರಿ ಟ್ರೋಫಿ, ಐದು ಐಪಿಎಲ್​ ಕಪ್​​​​​​​​​​, 2 ಏಷ್ಯಾಕಪ್​, 2 ಚಾಂಪಿಯನ್ಸ್ ಲೀಗ್​​​​​​​​, CB ಸಿರೀಸ್​​ ಹಾಗೂ ಒಂದು ಟೆಸ್ಟ್ ಚಾಂಪಿಯನ್​ಶಿಪ್​​​ ಗರಿ​​​..ಇವೆಲ್ಲವೂ ಚಾಣಾಕ್ಷ ಮಾಹಿ ನಾಯಕತ್ವಕ್ಕೆ ಒಲಿದ ಪ್ರಶಸ್ತಿಗಳ ಸರಮಾಲೆ. ನಿಜಕ್ಕೂ ಅಸಾಮಾನ್ಯ ಸಾಧನೆ. 2007 ರಿಂದ ಶುರುವಾದ ಧೋನಿ ಸಕ್ಸಸ್​​​ಯಾತ್ರೆ 2023ರ ಐಪಿಎಲ್ ಕಿರೀಟದ ತನಕ ಬಂದು ನಿಂತಿದೆ.

ಒಬ್ಬ ವ್ಯಕ್ತಿ ಒಂದು ಟ್ರೋಫಿ ಗೆಲ್ಲೋದನ್ನೇ ಕಷ್ಟ. ಅಂತ್ರದಲ್ಲಿ ಮಾಹಿ ತನ್ನ ಕ್ರಿಕೆಟ್​ ಕರಿಯರ್​​ನಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನ ಜಯಿಸಿದ್ದಾರೆ. 41 ರ ಹರೆಯದಲ್ಲೂ ಟ್ರೋಫಿ ಗೆಲುವಿನ ಹಸಿವು ನಿಂತಿಲ್ಲ. ಹಾಗಾದ್ರೆ ಮಿಸ್ಟರ್​​ ಕೂಲ್​​​​​​​ ನಿಂದ ಇಂತಹ ಅದ್ವಿತೀಯ ಸಾಧನೆ ಸಾಧ್ಯವಾಗಿದ್ದಾದ್ರು ಹೇಗೆ?. ಎರಡು ದಶಕಕ್ಕೂ ಅಧಿಕ ಕಾಲ ನಾಯಕರುಗಳ ನಾಯಕನಾಗಿ ವಿಜೃಂಭಿಸಿದ್ದೇಗೆ.?. ಈ ಪ್ರಶ್ನೆಗೀಗ ಕೊನೆಗೂ ಆಕ್ಸನ್ ಸಿಕ್ಕಿದೆ. ಮಹೇಂದ್ರ ಬಾಹುಬಲಿಯ ಬಿಗ್ಗೆಸ್ಟ್​ ಸಕ್ಸಸ್​ಗೆ ಭಗವದ್ಗೀತೆ ಕಾರಣ ಅನ್ನೋ ಗುಟ್ಟು ರಟ್ಟಾಗಿದೆ.

ಧೋನಿ ಯಶಸ್ಸಿನ ಹಿಂದಿದ್ಯಾ ಭಗವದ್ಗೀತೆ..?

ಭಗವದ್ಗೀತೆ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದು. ವೇದವ್ಯಾಸರು ರಚಿತ ಗ್ರಂಥ ಹಲವು ಸಾಧಕರಿಗೆ ಸ್ಫೂರ್ತಿಯಾಗಿದೆ‘. ಈಗ ಇದೇ ಭಗವದ್ಗೀತೆ ದಿ ಸಕ್ಸಸ್​​​ಫುಲ್ ಲೀಡರ್​​ ಧೋನಿ ಯಶಸ್ಸಿಗೂ ಕಾರಣವಾಗಿದೆಯಾ ಪ್ರಶ್ನೆಯನ್ನ ಹುಟ್ಟುಹಾಕಿದೆ.

IPL ಮುಗಿಸಿ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದ ‘ಮಾಸ್ಟರ್​’

16ನೇ ಐಪಿಎಲ್​​ಗೆ ತೆರೆಬಿದ್ದಿದೆ. ಚೆನ್ನೈಗೆ ಟ್ರೋಫಿ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಧೋನಿ ಮೊಣಕಾಲು ಇಂಜುರಿ ಸಲುವಾಗಿ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಮಾಹಿ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದುಕೊಂಡಿರೋ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ಬಿಡುವಿದ್ದಾಗಲೆಲ್ಲಾ ಭಗವದ್ಗೀತೆ ಪುಸ್ತಕ ಓದುತ್ತಾರೆ ಧೋನಿ

ಹೌದು, ಜನಪ್ರಿಯ ನಾಯಕ ಧೋನಿ ಕ್ರಿಕೆಟ್ ನಿಂದ​ ಬಿಡುವು ಸಿಕ್ಕಾಗಲೆಲ್ಲಾ ಭಗವದ್ಗೀತೆ ಪುಸ್ತಕ ಓದುತ್ತಾರೆ. ಇನ್ನು ಮಾಹಿ ಈ ಪವಿತ್ರ ಗ್ರಂಥವನ್ನ ಓದೋದು ಇದೇ ಮೊದಲೇನಲ್ಲ..ಈ ಹಿಂದೆಯೂ ಮಾಸ್ಟರ್​​ಮೈಂಡ್​​​ ಭಗವದ್ಗೀತೆ ಪುಸ್ತಕಗಳನ್ನ ಹಿಡಿದುಕೊಂಡ ಪೋಟೋಸ್ ವೈರಲ್ ಆಗಿದ್ವು.

ಮಾಹಿ ಯಶಸ್ಸಿಗೆ ಭಗವದ್ಗೀತೆ ಪ್ರೇರಣೆ..!

ಹೌದು, ದಿ ಲೆಜೆಂಡ್​​​ ಕ್ರಿಕೆಟ್ ಜರ್ನಿಯಲ್ಲಿ ಭಗವದ್ಗೀತೆ ಸಾಕಷ್ಟು ಪ್ರಭಾವ ಬೀರಿದೆ..ಅಪಾರ ಯಶಸ್ಸಿನ ಹಿಂದೆ ಈ ಪವಿತ್ರ ಗ್ರಂಥ ಇದೇ ಅಂದ್ರು ತಪ್ಪಲ್ಲ..ಇದನ್ನ ಸ್ವತಃ ಧೋನಿಯೇ ಒಮ್ಮೆ ಹೇಳಿಕೊಂಡಿದ್ದಾರೆ.

ಭಗವದ್ಗೀತೆ ನನಗೆ ಸ್ಫೂರ್ತಿ

”ನಾನು ಭಗವದ್ಗೀತೆ ಪುಸ್ತಕ ಓದುವುದನ್ನ ಇಷ್ಟಪಡುತ್ತೇನೆ. ನನ್ನ ಕ್ರಿಕೆಟ್ ಯಶಸ್ಸಿಗೆ ಇದು ಕಾರಣವಾಗಿದೆ. ಇದರಿಂದ ಸಾಕಷ್ಟು ಸ್ಫೂರ್ತಿಗೊಂಡಿದ್ದೇನೆ”- ಧೋನಿ

ಭಗವದ್ಗೀತೆ ಪ್ರಿನ್ಸ್​​ಪಲ್ಸ್​​​, ಅಂಗಳದಲ್ಲಿ ಅಪ್ಲೈ..!

ಭಗವದ್ಗೀತೆ ಓದುವ ದಿ ಮಾಸ್ಟರ್​​​​ ಆ ಪುಸ್ತಕದಲ್ಲಿನ ಪ್ರಿನ್ಸಿಪಲ್ಸ್​ಗಳನ್ನ ಚಾಚುತಪ್ಪದೇ ಫಾಲೋ ಮಾಡ್ತಿದ್ದಾರೆ. ತಾಳ್ಮೆ , ಸ್ಥಿರ ಮನಸ್ಥಿತಿ, ದೂರದೃಷ್ಠಿ ಯೋಚನೆ, ರಿಸ್ಕ್ ಡಿಶಿಶನ್​​​, ವಿಭಿನ್ನ ಯೋಜನೆ ಈ ಎಲ್ಲಾ ಗುಣಗಳು ಮಾಹಿಗೆ ದಿ ಬೆಸ್ಟ್​​​​ ಕ್ಯಾಪ್ಟನ್ಸಿ ಪಟ್ಟ ತಂದುಕೊಟ್ಟಿವೆ. ಅಂದಹಾಗೇ ಈ ಎಲ್ಲಾ ಅಂಶಗಳು ಭಗವದ್ಗೀತೆ ಪುಸ್ತಕದಲ್ಲಿವೆ.

ಭಗವದ್ಗೀತೆ ಅಧ್ಯಾಯ 5, ಶ್ಲೋಕ 20 ರಲ್ಲಿ ಶ್ರೀಕೃಷ್ಣ ಒಳ್ಳೆಯದು ನಡೆದಾಗ ತುಂಬಾ ಖುಷಿಪಡಬೇಡ. ಕೆಟ್ಟದು ನಡೆದಾಗ ತಾಳ್ಳೆಯಿಂದ ಇರು ಎಂದು ಹೇಳುತ್ತಾನೆ. ಧೋನಿ ಕೂಡ ಹಾಗೇ. ಟ್ರೋಫಿ ಗೆಲ್ಲಿಸಿಕೊಟ್ಟಾಗ ವಿಜೃಂಭಿಸಲ್ಲ.ಇನ್ನು ಸೋತಾಗ ತಾಳ್ಮೆಯಿಂದ ವರ್ತಿಸ್ತಾರೆ. ಇನ್ನು ಅದೇ ಶ್ರೀಕೃಷ್ಣ ಮತ್ತೊಂದು ಮಾತನ್ನ ಹೇಳುತ್ತಾನೆ. ನೀನು ಏನೇ ಮಾಡಿದಾಗಲೂ ಹೃದಯದಿಂದ ಮಾಡು. ಎಲ್ಲರನ್ನೂ ಸಮಾನವಾಗಿ ಕಾಣು ಎನ್ನುತ್ತಾನೆ. ಅಂತೆಯೇ ಧೋನಿ ಅಂಗಳದಲ್ಲಿ ಎಲ್ಲರನ್ನ ಸಮಾನವಾಗಿ ಕಾಣುತ್ತಾರೆ. ಸಹ ಆಟಗಾರರಿಂದ ಹಿಡಿದು ಗ್ರೌಂಡ್ಸ್​ಮೆನ್​​ಗೂ​​​ ಒಂದೇ ರೆಸ್ಪೆಕ್ಟ್​​. ರಿಸ್ಕ್ ಅನ್ನಿಸಿದ್ರೂ ಮನಸ್ಸಿಗೆ ಅನ್ನಿಸಿದ್ದನ್ನ ಮಾಡುತ್ತಾರೆ. ಎಲ್ಲವೂ ಭಗವದ್ಗೀತೆಯ ಪ್ರಭಾವ.

ಒಟ್ಟಿನಲ್ಲಿ ಡೈರೆಕ್ಟಿಲಿ ಅಥವಾ ಇನ್​ಡೈರೆಕ್ಟಿಲಿ ಭಗವದ್ಗೀತೆ, ಧೋನಿ ಯಶಸ್ಸಿಗೆ ಕಾರಣವಾಗಿದೆ. ಅವರ ನಡೆ ಮತ್ತು ಗುಣಗಳೇ ಅದಕ್ಕೆ ಸಾಕ್ಷಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL ಬಳಿಕ ಭಗವದ್ಗೀತೆ ಹಿಡಿದ ಧೋನಿ? ಶ್ರೀಕೃಷ್ಣ ಹೇಳಿದ್ದನ್ನು ಫಾಲೋ ಮಾಡ್ತಾರ ಮಾಹಿ?

https://newsfirstlive.com/wp-content/uploads/2023/06/Dhoni-11.jpg

Load More