‘ಕೊಹ್ಲಿ ಮತ್ತು ನಾನು..’ ವಿರಾಟ್ ಜೊತೆಗಿನ ಸ್ನೇಹದ ಬಗ್ಗೆ ತಲಾ ಒಳ್ಳೊಳ್ಳೆ ಮಾತು..!

author-image
Ganesh
Updated On
‘ಕೊಹ್ಲಿ ಮತ್ತು ನಾನು..’ ವಿರಾಟ್ ಜೊತೆಗಿನ ಸ್ನೇಹದ ಬಗ್ಗೆ ತಲಾ ಒಳ್ಳೊಳ್ಳೆ ಮಾತು..!
Advertisment
  • ವಿಶೇಷ ಸಂದರ್ಶನದಲ್ಲಿ ಧೋನಿ ಹೇಳಿದ್ದೇನು..?
  • ವಿರಾಟ್ ಕೊಹ್ಲಿ ರನ್ ತುಡಿತದ ಬಗ್ಗೆ ಮಾಹಿ ಏನಂದ್ರು?
  • ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಜಿ ನಾಯಕ ಧೋನಿ

ನಾನು ವಿರಾಟ್ ಕೊಹ್ಲಿ ಈಗಲೂ ಸ್ನೇಹಿತರು ಎಂದು ಸಿಎಸ್​ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಜಿಯೋ ಹಾಟ್​ಸ್ಟಾರ್​ ಮಹೇಂದ್ರ ಸಿಂಗ್ ಧೋನಿ ಅವರ ಸಂದರ್ಶನ ನಡೆಸಿದೆ. ಈ ವೇಳೆ 2022ರಲ್ಲಿ ಟೆಸ್ಟ್​ ನಾಯಕತ್ವ ತೊರೆದ ಬಳಿಕ ಧೋನಿ ಹೊರೆತುಪಡಿಸಿ ಬೇರೆ ಯಾರೂ ನನಗೆ ಮಸೇಜ್ ಮಾಡಿರಲಿಲ್ಲ ಎಂಬ ಕೊಹ್ಲಿ ಹೇಳಿಕೆ ಬಗ್ಗೆ ಕೇಳಲಾಗಿತ್ತು. ಅದಕ್ಕೆ ಧೋನಿ, ಏನು ಮೆಸೇಜ್ ಕಳುಹಿಸಿದ್ದರು ಅನ್ನೋದನ್ನ ಬಹಿರಂಗಪಡಿಸಲು ನಿರಾಕರಿಸಿದರು.

ನಾನು ಸಂಬಂಧದ ಬಗ್ಗೆ ಮಾತನಾಡುತ್ತೇನೆ. ಸಂದೇಶದ ಬಗ್ಗೆ ಅಲ್ಲ. ಅದನ್ನು ಹಾಗೆಯೇ ಇಟ್ಟುಕೊಳ್ಳಲು ಬಯಸುತ್ತೇನೆ. ಯಾವತ್ತೂ ನಂಬಿಕೆ ಮುಖ್ಯ ಎಂದಿದ್ದಾರೆ. ಹಿರಿಯ ಮತ್ತು ಕಿರಿಯರ ಮಧ್ಯೆ ಒಂದು ಗೆರೆ ಇರುತ್ತದೆ. ಆದರೆ ನಾನು ವಿರಾಟ್ ಕೊಹ್ಲಿ ಈಗಲೂ ಸ್ನೇಹಿತರು ಎಂದಿದ್ದಾರೆ. ವಿರಾಟ್ ಕೊಹ್ಲಿ 40-60 ರನ್​ಗಳಿಗೆ ತೃಪ್ತರಾಗುವುದಿಲ್ಲ. ಯಾವತ್ತೂ ಶತಕಗಳಿಸಬೇಕು. ಪಂದ್ಯದ ಕೊನೆಯವರೆಗೂ ಇರಬೇಕು ಬಯಸುತ್ತಾರೆ. ಅದುವೇ ಅವರ ಯಶಸ್ಸು ಎಂದು ಧೋನಿ ಬಣ್ಣಿಸಿದ್ದಾರೆ.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಆಟ.. 15 ಎಸೆತದಲ್ಲಿ 39 ರನ್​ ಚಚ್ಚಿದ ವಿಪ್ರಜ್ ನಿಗಮ್ ಯಾರು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment