ಐಪಿಎಲ್​​ ಟೂರ್ನಿಯಿಂದಲೇ ಧೋನಿ ಹೊರಬಿದ್ದರೂ ಅಚ್ಚರಿ ಇಲ್ಲ..! ಸಿಎಸ್​ಕೆ ಫ್ಯಾನ್ಸ್​ಗೆ ಇದು ನೋವಿನ ಸುದ್ದಿ

author-image
Ganesh
Updated On
ಧೋನಿ ಭರ್ಜರಿ ಬ್ಯಾಟಿಂಗ್​​ ಮಾಡಿದ್ರೂ ಹೀನಾಯ ಸೋಲು; ಪಂತ್​ ಪಡೆಗೆ ಮೊದಲ ಗೆಲುವು
Advertisment
  • ಧೋನಿಯಂತಹ ಲೆಜೆಂಡ್ರಿ ಆಟಗಾರ ಸಿಗೋದು ಕೋಟಿಗೊಬ್ಬ
  • ಕುಚಿಕು ಗೆಳೆಯನಿಗೆ ನೆರವಾದ ‘ಚಿನ್ನತಲಾ’ ಸುರೇಶ್ ರೈನಾ
  • ಏನಾಯ್ತು ಮಾಸ್ಟರ್​​ಮೈಂಡ್​​​ ಮಹೇಂದ್ರ ಸಿಂಗ್ ಧೋನಿಗೆ?

ಕೋಟಿಗೊಬ್ಬ.. ಕ್ರಿಕೆಟ್​ನಲ್ಲಿ ಧೋನಿಯಂತ ಲೆಜೆಂಡ್ರಿ ಆಟಗಾರ ಸಿಗೋದು ಕೋಟಿಗೊಬ್ಬ. ಅಬ್ಬಬ್ಬಾ, ಏನ್​ ಕ್ರಿಕೆಟ್ ಪ್ಯಾಷನ್​​​ ರೀ. ನಿಜಕ್ಕೂ ಯಾರೊಬ್ಬರಿಗೂ ಬರದು ಬಡಿ. ನೋವು ನುಂಗಿ ಸಿಹಿ ಹಂಚುವ ಗುಣ ಎಷ್ಟು ಜನರಲ್ಲಿ ಇದ್ದೀತು ಹೇಳಿ?

ಮಾಹಿ ಮಾರ್ ರಹಾ ಹೇ..! ಪ್ರಸಕ್ತ ಐಪಿಎಲ್ ಸೀಸನ್​​ನಲ್ಲಿ ಮಾಹಿ ಮಾರ್​​​ ರಹಾ ಹೇ. 236ರ ಸ್ಟ್ರೈಕ್​ರೇಟ್​​​ನಲ್ಲಿ ಬ್ಯಾಟ್​ ಬೀಸುತ್ತ, ಅಭಿಮಾನಿಗಳನ್ನ ಮನರಂಜನೆ ಅಲೆಯಲ್ಲಿ ತೇಲಾಡುವಂತೆ ಮಾಡ್ತಿದ್ದಾರೆ. ಇಂತಹ ಆರ್ಭಟದ ಮಧ್ಯೆ ಮಾಸ್ಟರ್​ಮೈಂಡ್​​ ಮಾಹಿ 100 ಪರ್ಸಂಟ್​ ಫಿಟ್​ ಇಲ್ವಾ ಅನ್ನೋ ಪ್ರಶ್ನೆಯೂ ತಲೆದೂರಿದೆ.

ಇದನ್ನೂ ಓದಿ:ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್​​ರನ್ನು​​ ಕೊಂದ ಆರೋಪಿ ಯಾರು?

publive-image

ಏನಾಯ್ತು ಮಾಸ್ಟರ್​​ಮೈಂಡ್​​​ ಎಂ.ಎಸ್ ಧೋನಿಗೆ?
ಮೆಟ್ಟಿಲಿನಿಂದ ಕೆಳಗಿಯಲು ಕಷ್ಟಪಡ್ತಿರೋ ಧೋನಿ ಸಹಾಯಕ್ಕೆ ಬಂದ ಆಪ್ತಮಿತ್ರ ಸುರೇಶ್ ರೈನಾ ಬಂದಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಎಂತಹದವರಿಗೂ ಒಂದು ಸತ್ಯ ಗೊತ್ತಾಗಿರುತ್ತೆ. ಮಾಹಿಗೆ ಫಿಟ್ನೆಸ್ ಸಮಸ್ಯೆ ಕಾಡ್ತಿದೆ ಅನ್ನೋದು. ಅವರು ಅಪಾರ ನೋವಿನಿಂದ ಬಳಲುತ್ತಿದ್ದಾರೆ. ಅವರ ಮುಖವೇ ಅದನ್ನು ಸಾರಿ, ಸಾರಿ ಹೇಳ್ತಿದೆ. ಕಷ್ಟಪಟ್ಟು ಕುಂಟುತ್ತಾ ಭಾರವಾದ ಹೆಜ್ಜೆಗಳನ್ನ ಇಡುತ್ತಿದ್ದಾರೆ.

ಇದನ್ನೂ ಓದಿ:ಐಪಿಎಲ್​​ನಲ್ಲಿ ಸತತ ಹೀನಾಯ ಸೋಲು, RCB ದುಸ್ಥಿತಿಗೆ ಇವರಿಬ್ಬರೇ ಪ್ರಮುಖ ಕಾರಣ..!

publive-image

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಕುಂಟಿದ್ದ ಮಾಹಿ
ಬರೀ ಮುಂಬೈ ಇಂಡಿಯನ್ಸ್​ ಪಂದ್ಯದ ಕಥೆ ಅಷ್ಟೇ ಅಲ್ಲ. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಬ್ಯಾಟಿಂಗ್​ ಅಬ್ಬರಿಸಿದ ನಂತರ ಕಾಲಿಗೆ ಐಸ್​ ಪ್ಯಾಕ್​​ ಕಟ್ಟಿಕೊಂಡಿದ್ರು. ಕುಂಟುತ್ತಲೇ ಆಟಗಾರರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದ್ರು. ಆವಾಗ್ಲೇ ಧೋನಿಗೆ ಇಂಜುರಿ ನೋವು ಕಾಡ್ತಿದೆ ಅನ್ನೋ ಸುಳಿವು ಸಿಕ್ಕಿತ್ತು.

ನೋವು ಲೆಕ್ಕಕ್ಕಿಲ್ಲ.. ತಂಡದ ಹಿತವೇ ಮುಖ್ಯ..
ಇಷ್ಟಾದರೂ ಧೋನಿ ತಂಡವನ್ನ ಬಿಟ್ಟು ಹೋಗ್ತಿಲ್ಲ. ಯಾಕಂದ್ರೆ ಅವರಿಗೆ ತಮ್ಮ ನೋವಿಗಿಂತ ತಂಡದ ಹಿತವೇ ಮುಖ್ಯ. ಎಲ್ಲಿ ತಾನು ತಂಡ ತೊರೆದ್ರೆ ತಂಡಕ್ಕೆ ಹಿನ್ನಡೆ ಆಗುತ್ತೆ ಅನ್ನೋ ಚಿಂತೆ ಕಾಡ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ರುತುರಾಜ್ ಗಾಯಕ್ವಾಡ್​ಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಹೊಸ ನಾಯಕನಿಗೆ ಆನ್​ಫೀಲ್ಡ್​ನಲ್ಲಿ ಮಹಿ ಸಲಹೆ ಮತ್ತು ಪ್ರಸನ್ಸ್ ಅಗತ್ಯ. ಇಡೀ ಫ್ರಾಂಚೈಸಿ ತಂಡದ ಹಿರಿಯಣ್ಣ ಧೋನಿಯನ್ನೇ ಹೆಚ್ಚಾಗಿ ನಂಬಿಕೊಂಡಿದೆ.

ಇದನ್ನೂ ಓದಿ:ಮಕ್ಕಳಿಗೆ ತುಂಬಾನೇ ಡೇಂಜರ್ ಸೆರೆಲಾಕ್; ನಿಮ್ಮ ಮಗುವಿಗೆ ಕೊಡುವ ಮುನ್ನ ಈ ಸ್ಟೋರಿ ಓದಿ​..!

publive-image

ಹಾಗೊಂದು ವೇಳೆ ಧೋನಿ ತಂಡವನ್ನ ತೊರೆದಿದ್ದೇ ಆದರೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ತಂಡದ ಬ್ಯಾಲೆನ್ಸ್ ಜೊತೆ ಕಾನ್ಫಿಡೆಂಟ್​​ ಕೂಡ ಕುಗ್ಗಲಿದೆ. ಇದನ್ನೆಲ್ಲಾ ಅರಿತೆ ಧೋನಿ ಎಷ್ಟೇ ನೋವಿದ್ರೂ ಆನ್​​ಫೀಲ್ಡ್​ನಲ್ಲಿ ಕಾಣಿಸಿಕೊಳ್ತಿದ್ದಾರೆ.

ಧೋನಿಗೆ ಇಂಜುರಿ ಮತ್ತೆ ಉಲ್ಬಣವಾಯ್ತಾ?
ಕಳೆದ ಸೀಸನ್​ನಲ್ಲೂ ಇಂಜುರಿ ನೋವಿನ ನಡುವೆ ಧೋನಿ ಅಖಾಡಕ್ಕಿಳಿದ್ರು. ಟೂರ್ನಿ ಮುಗಿದ ಬಳಿಕ KNEE ಸರ್ಜರಿ ಮಾಡಿಸಿಕೊಂಡು ಸುದೀರ್ಘ ವಿಶ್ರಾಂತಿಯ ಮೊರೆ ಹೋಗಿದ್ರು. ಹೀಗಾಗಿ ಈ ಸೀಸನ್​​ಗೂ ಮುನ್ನ ಹೆಚ್ಚು ಅಭ್ಯಾಸ ನಡೆಸಲಿಲ್ಲ. ಸೀಸನ್​ ಆರಂಭದ ಬಳಿಕ ನಾರ್ಮಲ್​ ಆಗೇ ಕಾಣಿಸಿಕೊಂಡಿದ್ರು. ವಿಕೆಟ್ ಮಧ್ಯೆ ಚಿರತೆಯಂತೆ ಓಡುತ್ತಿದ್ದ ಮಾಹಿಗೆ ಮತ್ತೆ ಇಂಜುರಿ ಉಲ್ಬಣಿಸಿದೆ. ಈ ಇಂಜುರಿ ಮಧ್ಯೆ ಮಾಹಿ ಆಡ್ತಾರಾ? ಇಲ್ಲ ಸೆಕೆಂಡ್ ಹಾಫ್​​ನಲ್ಲಿ ವಿಶ್ರಾಂತಿ ಪಡೆದು ಮತ್ತೆ ಕಮ್​ಬ್ಯಾಕ್ ಮಾಡ್ತಾರಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment