newsfirstkannada.com

×

ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

Share :

Published August 15, 2024 at 6:58am

Update August 15, 2024 at 7:00am

    ಬಹುನಿರೀಕ್ಷಿತ ಮಹೀಂದ್ರ ಥಾರ್ ರೋಕ್ಸ್‌ ಬಿಡುಗಡೆ

    ಪೆಟ್ರೋಲ್, ಡೀಸೆಲ್ ರೂಪಾಂತರಗಳಲ್ಲಿ ಬಂತು ಹೊಸ ಥಾರ್​

    ಗ್ರಾಹಕರ ಬೇಡಿಕೆಯಂತೆ ಮಾರುಕಟ್ಟೆಗೆ ಬಂದ 5 ಡೋರ್​ನ ಹೊಸ ಥಾರ್

ಮಹೀಂದ್ರ ಥಾರ್​​. ಭಾರತೀಯ ವಾಹನ ಪ್ರೇಮಿಗಳ ಮನಗೆದ್ದ ವಾಹನ. ಆದರೆ ಈ ಕಂಪನಿ 3 ಡೋರ್​ಗಳ ಥಾರ್​ ಪರಿಚಯಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಆದರೆ ಬಹುತೇಕರು 5 ಡೋರ್​ ಥಾರ್​​ಗಾಗಿ ಬೇಡಿಕೆ ಇಟ್ಟಿದ್ದರು. ಆದರೀಗ ಗ್ರಾಹಕರಿಗಾಗಿ ಕಂಪನಿ 5 ಡೋರ್​ನ ಥಾರ್ ರೋಕ್ಸ್​​​ ಅನ್ನು ಬಿಡುಗಡೆ ಮಾಡಿದೆ.

ನೂತನ ಥಾರ್​ ರೋಕ್ಸ್ 12.99 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಗ್ರಾಹಕರಿಗಾಗಿ​ ಪೆಟ್ರೋಲ್​ ಮತ್ತು ಡಿಸೇಲ್​ ಆವೃತ್ತಿಯಲ್ಲಿ ಸಿಗುತ್ತಿದೆ. ಪೆಟ್ರೋಲ್ ಮ್ಯಾನುವಲ್ ಆವೃತ್ತಿಗೆ (MX1), ಡೀಸೆಲ್ ಮ್ಯಾನುವಲ್ ಆವೃತ್ತಿಯನ್ನು (MX1) ಪರಿಚಯಿಸಿದೆ. 13.99 ಲಕ್ಷದಿಂದ ರೂಪಾಯಿಯಿಂದ ಖರೀದಿಸಬಹುದಾಗಿದೆ.

ಪೆಟ್ರೋಲ್​​ ರೂಪಾಂತರವು 162PS/330NM ಎಂಜಿನ್​ ಹೊಂದಿದ್ದು, ಡಿಸೇಲ್​​ ರೂಪಾಂತರವು 152PS/330NM ಎಂಜಿನ್​ ಹೊಂದಿದೆ.

ಥಾರ್ ರೋಕ್ಸ್‌ನ ವಿಶೇಷತೆ:

ಪ್ರವೇಶ ಮಟ್ಟದ ಥಾರ್ ರೋಕ್ಸ್‌ನ MX1 ರೂಪಾಂತರದ ವೈಶಿಷ್ಟ್ಯವು ಭಿನ್ನವಾಗಿದೆ. ಇದರಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಡ್ಯುಯಲ್-ಟೋನ್ ಮೆಟಲ್ ಟಾಪ್, 18-ಇಂಚಿನ ಸ್ಟೀಲ್ ಚಕ್ರಗಳು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಜೊತೆಗೆ ಪುಶ್ ಸ್ಟಾರ್ಟ್ ಬಟನ್, 60:40 ಸ್ಪ್ಲಿಟ್ ರಿಯರ್ ಸೀಟ್, ರಿಯರ್ ಎಸಿ ವೆಂಟ್‌ಗಳು ಮತ್ತು ಯುಎಸ್‌ಸಿ ಸಿ ಟೈಪ್​ ಪೋರ್ಸ್​​ ಇದರಲ್ಲಿದೆ.

ಸುರಕ್ಷತೆಗಾಗಿ ಹೆಚ್ಚು ಒತ್ತು

ಥಾರ್ ರೋಕ್ಸ್ ಎಮ್‌ಎಕ್ಸ್1 ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್, ಆರು ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಬ್ರೇಕ್ ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಸಹ ಪಡೆಯುತ್ತದೆ. ಒಟ್ಟಾರೆಯಾಗಿ, SUV 35 ಕ್ಕಿಂತ ಹೆಚ್ಚು ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರ ಥಾರ್ ರೋಕ್ಸ್‌ನ ಉನ್ನತ ರೂಪಾಂತರಗಳು ಸಾಫ್ಟ್-ಟಚ್ ಲೆಥೆರೆಟ್ ಡ್ಯಾಶ್‌ಬೋರ್ಡ್ ಮತ್ತು ಡೋರ್ ಟ್ರಿಮ್‌ಗಳು, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟ್‌ಗಳು, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇದಲ್ಲದೆ ಮಹೀಂದ್ರ ಥಾರ್ ರೋಕ್ಸ್‌ ಎಮ್‌ಎಕ್ಸ್1 ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಅಳವಡಿಸಿಕೊಂಡಿದೆ. ಎತ್ತರ ಹೊಂದಾಣಿಕೆ, ಡ್ರೈವರ್ ಸೀಟ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್, 6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಬ್ರೇಕ್ ಲಾಕಿಂಗ್ ಡಿಫರೆನ್ಷಿಯಲ್ ಹೊಂದಿದೆ. ಸುರಕ್ಷತೆಗೆ ಹೆಚ್ಚು ಗಮನಹರಿಸಿದೆ.

ಸದ್ಯ ಮಹೀಂದ್ರ ಕಂಪನಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಥಾರ್ ರೋಕ್ಸ್‌ ಅನ್ನು ಪ್ರವೇಶ ಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ ಮಾತ್ರ ಪರಿಚಯಿಸಿದೆ. ಮಾತ್ರವಲ್ಲದೆ ಬೆಲೆಗಳನ್ನು ಘೋಷಿಸಿದೆ. ಇಂದು ಮಹೀಂದ್ರ ಥಾರ್ ರೋಕ್ಸ್‌ ಎಮ್‌ಎಕ್ಸ್1 ಸಂಪೂರ್ಣ ಮಾಹಿತಿ ಹೊರಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

https://newsfirstlive.com/wp-content/uploads/2024/08/Mahindra-Thar-1.jpg

Load More