/newsfirstlive-kannada/media/post_attachments/wp-content/uploads/2025/07/Mahindra_XUV_3XO_New.jpg)
ಸದಾ ಅದ್ಭುತ ಮಾಡೆಲ್ಗಳ ಮೂಲಕ ಹಾಗೂ ಅತ್ಯಂತ ಕಡಿಮೆ ಬೆಲೆಗೆ ಐಷಾರಾಮಿ ಫೀಚರ್ಸ್ ನೀಡಿ ಜನರ ದಿಲ್ ಗೆದ್ದಿರುವ ನಮ್ಮ ದೇಶಿ ಕಂಪನಿ ಮಹೀಂದ್ರ. ಈಗ ಮತ್ತೊಂದು ಹೊಸ ಕಾರ್ನ ಅತೀ ಕಡಿಮೆ ಬೆಲೆಗೆ ನೀಡೋಕೆ ಮುಂದಾಗಿದೆ. ಇಷ್ಟೂ ದಿನ ನಾವು ಮಹೀಂದ್ರ XUV 3XOನ ಪಫಾರ್ಮೆನ್ಸ್ ನೋಡಿದ್ದೀವಿ. ಇದರ ಸ್ಟೈಲಿಶ್ ಹಾಗೂ ಮಾಡರ್ನ್ ಲುಕ್ಗೆ ಜನ ಫಿದಾ ಆಗಿದ್ದರು. ಆದ್ರೆ ಈಗ ಒಂದು ಹೊಸ ಮಾರ್ಕೆಟಿಂಗ್ ಸ್ಟ್ರಾಟರ್ಜಿಯೊಂದಿಗೆ ಎರಡು ಹೊಸ ವೇರಿಯೆಂಟ್ ಕಾರ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
XUV 3XO RevX A ಹಾಗೂ XUV 3XO RevX M. ಇಲ್ಲಿ RevX M ಕಡಿಮೆ ವೇರಿಯೆಂಟ್ನ ಕಾರ್ ಹಾಗೂ XUV 3XO RevX A ಹೈಯರ್ ವೇರಿಯೆಂಟ್ ಕಾರ್ ಆಗಿದೆ. ಹಾಗಿದ್ರೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಕಾರ್ಗಳ ವಿಶೇಷತೆಗಳು ಏನೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಯೋಗಿ ನಾಡಲ್ಲೇ ಮತಾಂತರ; 40 ಬ್ಯಾಂಕ್ ಖಾತೆ, 106 ಕೋಟಿ ರೂಪಾಯಿ ಆಸ್ತಿ.. ಬಾಬಾ, ನೀತೂ ಜೈಲು ಪಾಲು!
- ಹಳೇಯ ಮಾಡೆಲ್ XUV 3XO RevX ಕಾರ್ಗಳಿಗೂ, ಈಗಿನ XUV 3XO RevX A & XUV 3XO RevX M ಗಾಡಿಗಳಲ್ಲಿ ಬಾಡಿ ಕಲರ್ ಗ್ರಿಲ್ ಹೊಂದಿದೆ..
- ಡ್ಯೂವಲ್ ಟೋನ್ ರೂಫ್ಗಳನ್ನು ಹೊಂದಿದೆ.
- ಎರಡೂ ಕಾರ್ಗಳಿಗೂ 16 ಇಂಚ್ನ ಕಪ್ಪು ಬಣ್ಣದ ALLOY WHEELS ಇವೆ
- ವಿಶೇಷತೆ ಏನೆಂದ್ರೆ ಎರಡೂ ಕಾರ್ಗಳ ಸೀಟ್ಗಳು ಲೆದರೆಟ್ (ಲೆದರ್) ಸೀಟ್ ಹೊಂದಿವೆ
- ಡ್ಯೂವಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂಗಳನ್ನು 2 ಕಾರ್ಗಳು ಹೊಂದಿವೆ
- ಅತ್ಯಾಕರ್ಷಕ ಡಿಜಿಟಲ್ ಇನ್ಸ್ಟ್ರುಮೆಂಟ್ (ಡ್ಯಾಶ್ಬೋರ್ಡ್) ಡಿಸ್ಪ್ಲೇ ಇದೆ
- ಅತೀ ದೊಡ್ಡ ಇನ್ಫೋಟೇನ್ಮೆಂಟ್ ಸಿಸ್ಟಂಗಳನ್ನು ಎರಡು ಮಾಡೆಲ್ ಕಾರ್ಗಳು ಹೊಂದಿವೆ
- ಜೊತೆಗೆ ದೊಡ್ಡ ಪ್ಯಾನರೋಮಿಕ್ ಸನ್ರೂಫ್ಕೂಡ ಈ ಮಾಡೆಲ್ ಕಾರ್ಗೆ ಇದೆ
ಸೋ ಈಗ ಮೇನ್ ಮ್ಯಾಟರ್ ಅಂದರೆ ಇವುಗಳ ಬೆಲೆ ಎಷ್ಟಿದೆ??. ಸೋ ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರೋ ಮಹೀಂದ್ರ XUV 3XO RevX A ಮಾನ್ಯೂವಲ್ ಗೇರ್ಬಾಕ್ಸ್ ನಿಮಗೆ ಕೇವಲ 11.79 ಲಕ್ಷ ರೂಪಾಯಿಗೆ ಲಭ್ಯವಿದೆ ಹಾಗೂ ಆಟೋಮ್ಯಾಟಿಕ್ನ ಬೆಲೆ 12.99 ಲಕ್ಷ ರೂಪಾಯಿ. ಇದರ ಜೊತೆಗೆ XUV 3XO RevX M ನಿಮಗೆ 8.94 ಲಕ್ಷ ರೂಪಾಯಿಗಳಿಗೆ ಸಿಗಲಿದೆ. ಇವೆಲ್ಲವೂ ಎಕ್ಸ್-ಶೋರೂಂ ಬೆಲೆಗಳು ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ