ಮಹೀಂದ್ರ ಕಂಪನಿಯ XUV ಕಾರ್​ ಖರೀದಿ ಮಾಡೋರಿಗೆ ಬಿಗ್​ ಶಾಕ್​ ಕಾದಿದೆ..!

author-image
Bheemappa
Updated On
ಮಹೀಂದ್ರ ಕಂಪನಿಯ XUV ಕಾರ್​ ಖರೀದಿ ಮಾಡೋರಿಗೆ ಬಿಗ್​ ಶಾಕ್​ ಕಾದಿದೆ..!
Advertisment
  • ಮಹೀಂದ್ರ ಕಾರುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಡಿಮ್ಯಾಂಡ್ ಇದೆ
  • ಹೊಸ ಕಾರು ಮನೆಗೆ ಬರುವುದಕ್ಕೆ ಮೊದಲೇ ಯೋಜನೆ ರೂಪಿಸಿ
  • ನೀವೇನಾದ್ರೂ ಹೊಸ ಕಾರು ಖರೀದಿ ಮಾಡ್ತಿದ್ರೆ ಇದನ್ನ ಓದಬೇಕು

MODIFIED ವರ್ಷನ್​ನಲ್ಲಿ ಮಾರುಕಟ್ಟೆಗೆ ಕಾಲಿಟ್ಟ ನಂತರ ಇಡೀ ಮಾರ್ಕೆಟ್​ನ ಮತ್ತೊಮ್ಮೆ ಕಬ್ಜಾ ಮಾಡಿದೆ. ಇದು ಸುಮ್ಮನೆ ಹೇಳ್ತಿರುವ ಮಾತಲ್ಲ, ಬದಲಾಗಿ ಮಹೀಂದ್ರ SUV ಹಾಗೂ COMPACT SUVಗಳು ಮಾರ್ಕೆಟ್​ನಲ್ಲಿ ರಾರಾಜಿಸ್ತಾ ಇವೆ. ಆದ್ರೆ ನೀವೇನಾದರೂ ಮಹಿಂದ್ರ ಎಸ್​ಯುವಿ ಹಾಗೂ ಕಾಂಪ್ಯಾಕ್ಟ್​​ ಎಸ್​ಯುವಿಗಳನ್ನು ಅದರಲ್ಲೂ XUV 3XO ಮತ್ತು XUV700 SUVನ ಖರೀದಿ ಮಾಡೋಕೆ ಪ್ಲ್ಯಾನ್ ಮಾಡ್ತಾ ಇದ್ರೆ, ನಿಮಗೆ ಒಂದು ಶಾಕ್ ಕಾದಿದೆ. ಯಾಕೆ ಗೊತ್ತಾ?.

ಈ ಕಾರಿನ ವೇಟಿಂಗ್​ ಪೀರಿಯಡ್ ಡಬಲ್

XUV 3XO ಮತ್ತು XUV700 SUV ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಡಿಮ್ಯಾಂಡ್ ಕಾಣುತ್ತಲೇ ಇವೆ, ಸಣ್ಣ ಕಾಂಪ್ಯಾಕ್ಟ್ SUV ಗಳ ಮಾರಾಟವು FY2025 ರಲ್ಲಿ 1 ಲಕ್ಷ ಮೈಲಿಗಲ್ಲನ್ನು ದಾಟಿದೆ, ಆದರೆ ಅದರ ದೊಡ್ಡ MODEL, ವರ್ಷದ ಆರಂಭದಲ್ಲಿ 2.5 ಲಕ್ಷ ಮಾರಾಟದ ಮೈಲಿಗಲ್ಲನ್ನು ತಲುಪಿದೆ. ಸಾಮಾನ್ಯವಾಗಿ, ಬೇಡಿಕೆ ಹೆಚ್ಚಾದಂತೆ, ಕಾಯುವ ಅವಧಿಗಳು ಸಹ ಹೆಚ್ಚಾಗುತ್ತವೆ, ಮಾರ್ಚ್‌ನಲ್ಲಿ ಕಾಯುವ ಅವಧಿಗಳಿಗೆ ಹೋಲಿಸಿದರೆ, ಮೇ ತಿಂಗಳಲ್ಲಿ, XUV 3XO ಮತ್ತು XUV700 ನ ವೇಟಿಂಗ್​ ಪೀರಿಯಡ್ ಡಬಲ್ ಆಗಿದೆ. ಸೋ ಇದರಿಂದಾಗಿ ಮಹೀಂದ್ರ XUV 3XO ಹಾಗೂ ಇದರ ವೇರಿಯೆಂಟ್​ನ ಬುಕ್​ ಮಾಡುವವರು ಇದನ್ನು ಪಡೆಯೋದಕ್ಕೆ, ಒಂದು ವರ್ಷಕ್ಕೂ ಹೆಚ್ಚು ಕಾಯಬೇಕಾಗುತ್ತದೆ. ಇನ್ನು ಪೆಟ್ರೋಲ್-ಚಾಲಿತ XUV 3XO MX2 ಮತ್ತು MX2 ಪ್ರೊ ಕಾರ್​​ಗಳನ್ನು ತಗೊಳ್ಳೋಕೆ ಬಯಸುವವರು, ಮೂರು ತಿಂಗಳವರೆಗೆ ಕಾಯಬೇಕಾಗುತ್ತದೆ, ಇನ್ನು MX3, MX3 ಪ್ರೊ, AX5 ಮತ್ತು AX5 L ಎರಡು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿರುತ್ತವೆ.

ಇದನ್ನೂ ಓದಿ:ಇಡೀ ದೇಶದಲ್ಲೇ ಒಂದೇ ಒಂದು ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು..?

publive-image

ಪೆಟ್ರೋಲ್ XUV 3XO AX7 ಮತ್ತು XUV 3XO AX7 L ವೇರಿಯಂಟ್​, ಎಲ್ಲಾ ಡೀಸೆಲ್ ವೇರಿಯಂಟ್​​, ಒಂದು ತಿಂಗಳವರೆಗೆ ಡೆಲಿವರಿ ಸಮಯ ಹೊಂದಿವೆ. ಮಾರ್ಚ್ 2025 ರಿಂದ ಈ ವೇಟಿಂಗ್​ ಅವಧಿ ಡಬಲ್​ ಆಗಿದೆ.

ವೇಟಿಂಗ್​ ಪೀರಿಯಡ್ ಇರಲ್ಲ

ಮಾರ್ಚ್‌ನಲ್ಲಿ ಹೆಚ್ಚಿನ ವೇರಿಯೆಂಟ್​ಗಳಿಗೆ ಎರಡು ವಾರಗಳ ಕಾಯುವ ಸಮಯಕ್ಕೆ ಹೋಲಿಸಿದರೆ, ಮಹೀಂದ್ರಾ XUV700 ಈಗ ಹೆಚ್ಚಿನ ವೇರಿಯೆಂಟ್​ಗಳಲ್ಲಿ ಒಂದು ತಿಂಗಳವರೆಗೆ ಡೆಲಿವರಿ ಸಮಯ ಹೊಂದಿದೆ. ಟಾಪ್-ಸ್ಪೆಕ್ XUV700 AX7 L ಗಾಗಿ ಕಾಯುವ ಅವಧಿ ಇನ್ನೂ ಒಂದು ತಿಂಗಳು ಎಂಬುದನ್ನು ಗಮನಿಸಬೇಕು, ಆದರೆ ESP, 6-ಸೀಟ್ ಲೇಔಟ್ ಮತ್ತು ಡ್ಯುಯಲ್-ಟೋನ್ ಎಕ್ಸ್​ಟೀರಿಯರ್​ ಆಯ್ಕೆಗಳನ್ನು ಹೊಂದಿರುವ ವೇರಿಯೆಂಟ್​ಗಳು ಇಂತಿಷ್ಟೇ ಅಂತ ವೇಟಿಂಗ್​ ಪೀರಿಯಡ್ ಹೊಂದಿಲ್ಲ.

ಸೋ ಹೆಚ್ಚಾಗಿ ಬೇಡಿಕೆ ಬಂದಿರೋದ್ರಿಂದ, ಮಹೀಂದ್ರ ಕಂಪನಿಯ ಕಾರ್​ಗಳ ಪ್ರೊಡಕ್ಷನ್​ ಕೂಡ ಹೆಚ್ಚಾಗಿದೆ. ಇನ್​ಡೈರೆಕ್ಟ್​ ಆಗಿ ಇದರ ವೇಟಿಂಗ್​ ಹಾಗೂ ಡೆಲಿವರಿ ಟೈಂಗಳು ವಿಳಂಭವಾಗಿದೆ.

ಒಟ್ಟಾರೆ ಮಹೀಂದ್ರ ಕಂಪನಿಯ XUV 3XO ಹಾಗೂ XUV700ಗಳ ವೇರಿಯಂಟ್​ ಕಾರ್​ಗಳನ್ನು ಕೊಂಡುಕೊಳ್ಳಬೇಕು ಅಂತ ನೀವೇನಾದ್ರೂ ಅಂದುಕೊಳ್ತಾ ಇದ್ರೆ, ನಿಮಗೆ ವೇಟಿಂಗ್​ ಪೀರಿಯಡ್ ಶಾಕ್ ಕಾದಿದೆ. ಸೋ ಯಾವುದಕ್ಕೂ ನಿಮ್ಮ ಡೆಲಿವರಿ ಟೈಂನ ಪ್ಲ್ಯಾನ್ ಮಾಡಿ ನಂತರ ಖರೀದಿಸಿ.

ವಿಶೇಷ ವರದಿ:ರಾಹುಲ್ ದಯಾನ್,ನ್ಯೂಸ್​ ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment