/newsfirstlive-kannada/media/post_attachments/wp-content/uploads/2024/11/SIRAJ_LOVE_KOHLI.jpg)
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಬಿಟೌನ್ ಬೆಡಗಿಯ ಜೊತೆ ಡೇಟ್ನಲ್ಲಿದ್ದಾರೆಂಬ ಗಾಸಿಪ್ ಹಬ್ಬಿದೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಬಿಸಿಬಿಸಿ ಬಾತ್ ಶುರುವಾಗಿದೆ. ಈ ವದಂತಿ ಹುಟ್ಟಲು ಒಂದು ಪ್ರಮುಖ ಕಾರಣವೂ ಇದೆ. ಅದೇನು ಗೊತ್ತಾ?.
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ರನ್ನ ಆರ್ಸಿಬಿ ತಂಡ ಮತ್ತೆ ಖರೀದಿಸಿಲ್ಲ ಅನ್ನೋ ವಿಚಾರ ಆರ್ಸಿಬಿ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದೆ. ಈ ವೇಗಿಯನ್ನ ಗುಜರಾತ್ ಟೈಟನ್ಸ್ ಖರೀದಿಸಿದೆ. ಈ ನಡುವೆ ಮೊಹಮ್ಮದ್ ಸಿರಾಜ್ ಕುರಿತು ಹೊಸ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದುವೇ ಸಿರಾಜ್ ನಟಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೊ ವಿಚಾರ.
ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್!?
ಇವರೇ ಮಹಿರಾ ಶರ್ಮಾ, ಬಾಲಿವುಡ್ ನಟಿ. ಹಿಂದಿ ಬಿಗ್ ಬಾಸ್ ಸೀಸನ್-13 ರಲ್ಲಿ ಸಾಕಷ್ಟು ಸುದ್ದಿ ಮಾಡಿದ ಚೆಲುವೆ. ಬಳಿಕ ಬಿಗ್ ಬಾಸ್ ಸ್ಪರ್ಧಿ ಪರಸ್ ಛಾಬ್ರಾ ಅವರೊಂದಿಗೆ ಪ್ರೀತಿ ಪ್ರಾರಂಭವಾಯಿತು. ಆದರೆ ಇಬ್ಬರೂ ಕೆಲ ದಿನಗಳ ಬಳಿಕ ಬ್ರೇಕಪ್ ಮಾಡಿಕೊಂಡರು. ಈಗ ಮಹಿರಾ ಜೀವನದಲ್ಲಿ ಒಬ್ಬ ಕ್ರಿಕೆಟಿಗ ಎಂಟ್ರಿಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜೊತೆ ಮಹಿರಾ ಶರ್ಮಾ ಹೆಸರು ತಳುಕು ಹಾಕಿಕೊಂಡಿದೆ.
ಸಿರಾಜ್ ಬಾಲಿವುಡ್ ನಟಿಯೊಬ್ಬರ ಜತೆ ಡೇಟ್ ಮಾಡುತ್ತಿದ್ದಾರೆ ಎಂಬ ಚರ್ಚೆ ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೊಹಮ್ಮದ್ ಸಿರಾಜ್-ಮಹಿರಾ ಶರ್ಮಾ ನಡುವೆ ಏನು ನಡೆಯುತ್ತಿದೆ ಎಂಬ ಗಾಸಿಪ್ ಹುಟ್ಟಲು ಒಂದು ಪ್ರಮುಖ ಕಾರಣ ಇದೆ. ಅದಕ್ಕೆ ಕಾರಣ ಈ ಪೋಸ್ಟ್.
ಇದನ್ನೂ ಓದಿ:IPL Mega Auction; ಅದೃಷ್ಟ ಲಕ್ಷ್ಮಿ.. ರೋಹಿತ್ ಟೀಮ್ ಸೇರಿದ ಧೋನಿಯ ನೆಚ್ಚಿನ ಬೌಲರ್!
ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದ ನಟಿ
ಇತ್ತೀಚಿಗೆ ಮಹಿರಾ ಶರ್ಮಾ, ಇನ್ಸ್ಟಾಗ್ರಾಮ್ನಲ್ಲಿ ಕೆಲವು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬ ಅಭಿಮಾನಿಯು ಫಿದಾ ಆಗಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಮಹಿರಾ ಫೋಟೋಗಳಿಗೆ ಲೈಕ್ ಕೊಟ್ಟಿದ್ದಾರೆ. ಆ ನಂತರ ಸಿರಾಜ್ ಮತ್ತು ಮಹಿರಾ ನಡುವೆ ಪ್ರೀತಿ ಶುರುವಾಗಿದೆ ಎಂಬ ವದಂತಿಗಳು ಹಬ್ಬಿದೆ.
ಮಹಿರಾ ಶರ್ಮಾ ಫೋಟೋಗಳಿಗೆ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಲೈಕ್ ಕೊಟ್ಟ ಬೆನ್ನಲ್ಲೇ ಇವರಿಬ್ಬರ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹಬ್ಬತೊಡಗಿದೆ. ಕೆಲವರು ಇದು ಗೆಳೆತನದ ಆರಂಭ ಎಂದು ಹೇಳಿದರೆ ಮತ್ತೆ ಕೆಲವರು ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದಿದ್ದಾರೆ. ಆದರೆ ಇಬ್ಬರೂ ಇದುವರೆಗೆ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹೀಗಾಗಿ ಇದು ಗಾಸಿಪ್ ಅಷ್ಟೇನಾ? ನಿಜಾನಾ ಎಂಬ ನಿರ್ಧಾರಕ್ಕೆ ಈಗಲೇ ಬರೋದು ಕಷ್ಟ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ