ರೇಣುಕಾಸ್ವಾಮಿ ಮಾದರಿ ಕೇಸ್​ಗೆ ಟ್ವಿಸ್ಟ್​.. ಅಂತೂ, ಇಂತೂ ಪ್ರಕರಣದ A-1 ಅರೆಸ್ಟ್..!

author-image
Ganesh
Updated On
ರೇಣುಕಾಸ್ವಾಮಿ ಮಾದರಿ ಕೇಸ್​ಗೆ ಟ್ವಿಸ್ಟ್​.. ಅಂತೂ, ಇಂತೂ ಪ್ರಕರಣದ A-1 ಅರೆಸ್ಟ್..!
Advertisment
  • ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೇಸ್
  • ಕುಶಾಲ್ ಎಂಬಾತನ ಅಪಹರಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು
  • ಇದೀಗ ಪ್ರಮುಖ ಆರೋಪಿ ಹೇಮಂತ್​ನ ಬಂಧನ ಆಗಿದೆ

ನೆಲಮಂಗಲ: ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ‘ರೇಣುಕಾಸ್ವಾಮಿ ಮಾದರಿ’ಯ ಯುವಕನ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹೇಮಂತ್ (24) ಬಂಧಿತ ಆರೋಪಿ. ಹೇಮಂತ್ ಪ್ರಕರಣದ ಮೊದಲ ಆರೋಪಿ. ಸಂತ್ರಸ್ತ ಕುಶಾಲ್​​ನನ್ನು ಅಪಹರಿಸಿ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದೇ ಈತ. ಅಪಹರಣದ ಬಳಿಕ ಕುಶಾಲ್​​ನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದರು. ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿ ಹೇಮಂತ್ ಗಾಯಬ್ ಆಗಿದ್ದ. ಇದೀಗ ಪೊಲೀಸರು ಆತನನ್ನು ಹಿಡಿದು ಜೈಲಿಗೆ ಅಟ್ಟಿದ್ದಾರೆ.

ಇದನ್ನೂ ಓದಿ: ಗುಡ್​ ಮಾರ್ನಿಂಗ್ ಅಮ್ಮ ಎಂದಿದ್ದಳು.. ಬೆಂಗಳೂರಿನ ಯುವತಿ ಓಡಿಶಾದಲ್ಲಿ ನಿಧನ, ಭಾರೀ ಅನುಮಾನ

ಪ್ರಾಥಮಿಕ ತನಿಖೆ ವೇಳೆ ಹೇಮಂತ್ ವಿರುದ್ಧ ಒಟ್ಟು ನಾಲ್ಕು ಕೇಸ್​ಗಳು ಇರೋದು ಗೊತ್ತಾಗಿದೆ. 2023ರಲ್ಲಿ ಒಂದು ಹಾಗೂ 2024ರಲ್ಲಿ ಎರಡು ಕೇಸ್ ದಾಖಲಾಗಿರೋದು ತಿಳಿದುಬಂದಿದೆ.

ಏನಿದು ಪ್ರಕರಣ..?

ಕುಶಾಲ್ ಎಂಬಾತ ತನ್ನ ಮಾಜಿ ಸ್ನೇಹಿತೆಗೆ ಮೆಸೇಜ್ ಮಾಡಿದ ಅನ್ನೋ ಕಾರಣಕ್ಕೆ, ಆತನ ಅಪಹರಿಸಿ ಮನಸೋ ಇಚ್ಛೆ ಹಲ್ಲೆ ಮಾಡಲಾಗಿತ್ತು. ಅಂದು ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿ, ನಗ್ನಗೊಳಿಸಿ ಚಿತ್ರಹಿಂಸೆ ನೀಡಿದಂತೆ ಟಾರ್ಚರ್ ನೀಡಲಾಗಿತ್ತು. ಮಾತ್ರವಲ್ಲ ಆತನ ಮರ್ಮಾಂಗಕ್ಕೆ ಒದ್ದು, ಕೊಡಬಾರದ ಹಿಂಸೆ ಕೊಟ್ಟಿದ್ದರು. ‘ತಪ್ಪಾಯ್ತು ಅಣ್ಣಾ, ಬಿಡ್ರೋ’ ಅಂದ್ರೂ ಕೇಳದ ಪಾಪಿಗಳು ಬರ್ಬರವಾಗಿ ಥಳಿಸಿದ್ದರು.

ಹಲ್ಲೆ ಮಾಡಿದ್ದು ಮಾತ್ರವಲ್ಲದೇ, ಹಿಗ್ಗಾಮುಗ್ಗಾ ಥಳಿಸುವ ದೃಶ್ಯವನ್ನೂ ಮೊಬೈಲ್​​ನಲ್ಲಿ ಕಿರಾತಕರು ಸೆರೆ ಹಿಡಿದುಕೊಂಡಿದ್ದಾರೆ. ಇದೀಗ ಆ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲ್ಲೆ ಮಾಡ್ತಿರುವ ದೃಶ್ಯವನ್ನು ಓರ್ವ ಆರೋಪಿ ಸೆರೆ ಹಿಡಿದಿದ್ದ. ಅದರಲ್ಲಿ ಆತ, ಎ-1 ಹೇಮಂತ್, ಎ-2 ನಾನು ಎಂದು ಹೇಳಿದ್ದ. ಸುಮಾರು 6 ರಿಂದ 7 ಮಂದಿಯಿದ್ದ ಗ್ಯಾಂಗ್​ನಿಂದ ಈ ಮಾರಣಾಂತಿಕ ದಾಳಿಯಾಗಿತ್ತು. ಎರಡು ವಿಡಿಯೋಗಳು ವೈರಲ್ ಆಗಿದ್ದು, ಒಂದರಲ್ಲಿ ಬಟ್ಟೆ ಬಿಚ್ಚಿಸಿ ಅಟ್ಟಾಡಿಸಿ ಹೊಡೆಯುತ್ತಿದ್ದರು. ಇನ್ನೊಂದರಲ್ಲಿ ಸಂತ್ರಸ್ತ ಕುಶಾಲ್​​ನನ್ನು ಫೀಲ್ಡ್​​ನಲ್ಲಿ ಬೀಳಿಸಿಕೊಂಡು ಆತನ ಮೇಲೆ ಮೃಗಿಯವಾಗಿ ಹಲ್ಲೆ ಮಾಡ್ತಿರೋದಾಗಿದೆ.

ಇದನ್ನೂ ಓದಿ: ಉದ್ಯಮಿ ಮಗನ, ಶಿಕ್ಷಕನ ಮಗಳ UPSC ಕನಸು ಕಸಿದ ಹೃದಯಾಘಾತ.. ಮತ್ತೆ 2 ಜೀವ ತೆಗೆದ ಹಾರ್ಟ್​​​ ಅಟ್ಯಾಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment