newsfirstkannada.com

ಕಿರುತೆರೆಗೆ ಲಗ್ಗೆ ಇಡ್ತಿದೆ ಮತ್ತೊಂದು ‘ಮಜಾ ಕೆಫೆ’; ಹೊಚ್ಚ ಹೊಸ ರಿಯಾಲಿಟಿ ಶೋ ಅತಿಥಿ ಇವರೇ ನೋಡಿ

Share :

19-08-2023

    ಹೊಸ ‘ಮಜಾ ಕೆಫೆ’ ಇಡೀ ಕರುನಾಡ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಾ?

    ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್​ಬಾಸ್ ಸೀಸನ್​ 10 ಕಿರುತೆರೆಗೆ

    ಮಜಾ ಕೆಫೆ ರಿಯಾಲಿಟಿ ಶೋ ಯಾವ ರೀತಿ ಜನರಿಗೆ ಮಜಾ ಕೊಡುತ್ತೆ?

ಕಿರುತೆರೆಯ ಲೋಕದಲ್ಲಿ ಹೊಸತನಕ್ಕೆ ಈಗ ತುಂಬಾ ದೊಡ್ಡ ಜಾಗ ಇದೆ. ಯಾವುದೇ ರಿಯಾಲಿಟಿ ಶೋ ಆಗಲಿ ಅಥವಾ ಸೀರಿಯಲ್​ಗಳಾಗಲಿ ಇತ್ತೀಚಿನ ದಿನಗಳಲ್ಲಿ ಹೊಸತನಕ್ಕೆ ಅವಕಾಶಗಳನ್ನ ಕಲ್ಪಿಸಿಕೊಡಲಾಗುತ್ತಿದೆ. ಕಾರಣ ಕಾಂಪಿಟೇಷನ್ ಲೆವೆಲ್ ಜೋರಾಗಿದೆ. ಸದ್ಯ ಕಲರ್ಸ್​ ವಾಹಿನಿ ಮತ್ತೊಂದು ಹೊಚ್ಚ ಹೊಸ ಶೋ ಒಂದನ್ನ ತರಲು ಸೆಟ್ ಆಗಿದೆ. ಹೌದು, ಈಗಾಗಲೇ ಆ ಶೋಗೆ ಟೈಟಲ್ ಕೊಟ್ಟಾಗಿದೆ. ಅದುವೆ ಮಜಾ ಕೆಫೆ. ಈ ಟೈಟಲ್ ಕೇಳಿದ ತಕ್ಷಣ ಥಟ್ ಅಂತ ನೆನಪಾಗುವುದೇ ಮಜಾ ಟಾಕೀಸ್.

ಮಜಾ ಕೆಫೆ ಹೊಚ್ಚ ಹೊಸತನದಿಂದ ಕೂಡಿರೋ ಅಂತಾ ಶೋ. ಈ ಶೋನಲ್ಲೂ ಕೂಡ ಗೆಸ್ಟ್ ಬರ್ತಾರೆ, ಹರಟೆ ಮಾತು ಕತೆ ಸರ್ವೇ ಸಾಮಾನ್ಯವಂತೆ ಇರುತ್ತೆ. ಇದೊಂದು ಎಲ್ಲಾ ರಿಯಾಲಿಟಿ ಶೋಗಳ ಬೆಸಿಕ್ ಥಿಂಗ್. ಕಿರುತೆರೆಯ ಅಡ್ಡಾದಲ್ಲಿ ಕೇಳಿ ಬರ್ತಿರೋ ಪ್ರಕಾರ ಮಜಾ ಕೆಫೆಯ ಮೊದಲ ಅತಿಥಿಯಾಗಿ ರಕ್ಷಿತ್ ಶೆಟ್ಟಿ ಆಗಮಿಸಲಿದ್ದಾರಂತೆ. ಈ ಮುಂಚೆ ಸೃಜನ್ ಸಾರಥ್ಯದಲ್ಲಿ ಮೂಡಿ ಬರ್ತಿದ್ದ ಮಜಾ ಟಾಕೀಸ್ ಶೋ ಇಡೀ ಕರುನಾಡ ವೀಕ್ಷಕರ ಮನಸ್ಸನ್ನು ಗೆದ್ದಿತ್ತು. ನಂತರಲ್ಲಿ ಕಲರ್ಸ್​ ವಾಹಿನಿಯಲ್ಲಿ ಮತ್ತೆ ಆ ರೀತಿಯ ಬೇರೆ ಶೋ ಬಂದಿಲ್ಲ. ಇನ್ನೂ ಅದೇ ಹೆಸರಿನೊಟ್ಟಿಗೆ ಕೊಂಚ ಬದಲಾವಣೆ ಮಾಡಿಕೊಂಡು ಈ ಶೋ ಬರ್ತಿರೋದ್ರಿಂದ ಇದು ಮಜಾ ಟಾಕೀಸ್ ರೀತಿ ಇರಬಹದು ಅನ್ನೋ ಪ್ರಶ್ನೆ ಫ್ಯಾನ್ಸ್​ಗಳಲ್ಲಿ ಮೂಡುವುದು ಸಹಜ.

ಕೆಫೆ ಹೆಸರು ಇರೋ ಕಾರಣ ಹಲವಾರು ಜನ ಇದು ಪಕ್ಕಾ ಅಡುಗೆ ಶೋನೆ ಇರಬಹುದು ಅಂತಾ ಹೇಳುತ್ತಿದ್ದಾರೆ. ಇದು 50ರಷ್ಟು ಸತ್ಯ ಇನ್ನೂ 50ರಷ್ಟು ಗೆಸ್, ಏಕೆಂದರೆ ಈಗಾಗಲೇ ಮುರುಳಿ ಅವರ ಸಾರಥ್ಯದಲ್ಲಿ ಸ್ಟಾರ್ ಸವಿರುಚಿ ಮಧ್ಯಾಹ್ನದ ಸ್ಲಾಟ್​ನಲ್ಲಿ ಪ್ರಸಾರವಾಗುತ್ತಿದೆ. ಈ ಶೋ ಮುಗಿದ ನಂತರ ಮಜಾ ಕೆಫೆ ಆ ಸ್ಲಾಟ್​ಗೆ ಬರಬಹುದು. ಇದು ಕೂಡ ಗೆಸ್ ವರ್ಕ್. ಯಾವ ರೀತಿಯ ಶೋ ಇರಬಹುದು ಅನ್ನೋ ಗೆಸ್ ವರ್ಕ್​ ಅಷ್ಟೇ. ಈ ನಿಮ್ಮ ಎಲ್ಲಾ ಉಹಾಪೋಹಾಗಳಿಗೆ ಸದ್ಯದಲ್ಲೇ ಮಜಾ ಕೆಫೆಯ ಪ್ರೋಮೋ ಹೊರ ಬೀಳಲಿದೆ. ಸದ್ಯ ಕಲರ್ಸ್​ನಲ್ಲಿ ಸಂಜೆ 6ರಿಂದ 9ರವರೆಗೆ ಸ್ಲಾಟ್ ಫ್ರೀ ಇದೆ. ಇದು ವಿಕೇಂಡ್ ಪ್ರೋಗ್ರಾಮ್ ಆದರೆ ಈ ಸ್ಲಾಟ್​ನಲ್ಲಿ ಪ್ರಸಾರವಾಗೋ ಸಾಧ್ಯತೆ ಇದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್​ಬಾಸ್ ಕೂಡ ಕಿರುತೆರೆಯಲ್ಲಿ ಲಗ್ಗೆ ಇಡಲಿದೆ. ಕಲರ್ಸ್​ ಎಲ್ಲಾ ಶೋಗಳ ಸಮಯದ ತೂಕ ಹಾಕಿ ಈ ಶೋ ಸ್ಲಾಟ್​ನ ಡಿಸೈಡ್ ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿರುತೆರೆಗೆ ಲಗ್ಗೆ ಇಡ್ತಿದೆ ಮತ್ತೊಂದು ‘ಮಜಾ ಕೆಫೆ’; ಹೊಚ್ಚ ಹೊಸ ರಿಯಾಲಿಟಿ ಶೋ ಅತಿಥಿ ಇವರೇ ನೋಡಿ

https://newsfirstlive.com/wp-content/uploads/2023/08/colors-kannada-2.jpg

Load More