ಮಜಾ ಟಾಕೀಸ್ ಮತ್ತು BOYS V/S GIRLS; ನಕ್ಕು ನಗಿಸುವ ಮಹಾ ಮಿಲನದ ವಿಶೇಷಗಳು ಏನೇನು?

author-image
admin
Updated On
ಮಜಾ ಟಾಕೀಸ್ ಮತ್ತು BOYS V/S GIRLS; ನಕ್ಕು ನಗಿಸುವ ಮಹಾ ಮಿಲನದ ವಿಶೇಷಗಳು ಏನೇನು?
Advertisment
  • ಮಜಾ ಟಾಕೀಸ್ ಮತ್ತು BOYS V/S GIRLS ಭರ್ಜರಿ ಮನರಂಜನೆ
  • ನಕ್ಕು ನಗಿಸುವ ಮನರಂಜನೆ, 'ಮಹಾ ಮಿಲನ'ದಲ್ಲಿ ಹಲವು ವಿಶೇಷ!
  • ಚಂದ್ರಪ್ರಭಾ, ಪ್ರಶಾಂತ್, ವಿವೇಕ್, ಮಿಮಿಕ್ರಿ ಗೋಪಿ ಅವರು ಸ್ಕಿಟ್‌ಗಳು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ವೀಕೆಂಡ್‌ 6 ಗಂಟೆಗಳ ಮಹಾ ಮಿಲನದಲ್ಲಿ ಮಜಾ ಟಾಕೀಸ್ ಮತ್ತು BOYS V/S GIRLS ಭರ್ಜರಿ ಮನರಂಜನೆ ಮೂಡಿ ಬರುತ್ತಿದೆ. ನಾಳೆ ಅಂದ್ರೆ ಫೆಬ್ರವರಿ 22 ಹಾಗೂ ಭಾನುವಾರ ರಾತ್ರಿ 7:30ಕ್ಕೆ ಮಹಾ ಮಿಲನ ಪ್ರಸಾರ ಆಗುತ್ತಿದೆ.

ಕರ್ನಾಟಕದ ಎರಡು ಅತಿ ದೊಡ್ಡ ಶೋಗಳಾದ ಮಜಾ ಟಾಕೀಸ್ ಮತ್ತು Boys Vs Girls ಮಹಾ ಮಿಲನ ಆಗುತ್ತಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ 'ಮಹಾ ಮಿಲನ'ದಲ್ಲಿ ಅನೇಕ ವಿಶೇಷಗಳಿವೆ.

publive-image

ಯೋಗರಾಜ್ ಭಟ್ ಮತ್ತು ಸೃಜನ್ ಕಾರ್ಯಕ್ರಮದ ಜಡ್ಜ್ ಆಗಿ ಹೊಸ ಬಗೆಯ ತೀರ್ಪು ಬರೆಯಲಿದ್ದಾರೆ. ಅನುಪಮಾ ಅವರ ನಿರೂಪಣೆಯಲ್ಲಿ ಎರಡೂ ಶೋಗಳ ದೈತ್ಯ ಪ್ರತಿಭೆಗಳು ತಮ್ಮ ಸ್ಕಿಟ್ಸ್, ಗಿಮಿಕ್, ಡಾನ್ಸ್ ಮೂಲಕ ಜನರ ಮನ ಕದಿಯಲಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ದೋಸ್ತಿಗಳ ಮಿಲನ.. ಧನರಾಜ್ ಆಚಾರ್‌ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್‌; ಏನಿದು ಸರ್‌ಪ್ರೈಸ್‌? 

'ಮಹಾ ಶಿವರಾತ್ರಿ' ವಿಶೇಷವಾಗಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನರ್ತಿಸಲಿದ್ದಾರೆ. 'ಅಣ್ಣಯ್ಯ' ಸಿನಿಮಾದ ಕಾಮಿಡಿ ಅಣಕವನ್ನು ಹಾಲಿವುಡ್‌ನ "ಅವತಾರ್' ಚಿತ್ರದ ಮಾದರಿಯಲ್ಲಿ ಚಂದ್ರಪ್ರಭಾ, ಪ್ರಶಾಂತ್, ವಿವೇಕ್, ಮಿಮಿಕ್ರಿ ಗೋಪಿ ಅವರು ತೋರಿಸಿ ಮನರಂಜಿಸಲಿದ್ದಾರೆ.

publive-image

ಇನ್ನೊಂದು ವಿಶೇಷವೆಂದರೆ ‘ನೊಂದ ಗಂಡಂದಿರ ಸಂಘ’ ಸ್ಕಿಟ್‌ನಲ್ಲಿ ತುಕಾಲಿ - ಪತ್ನಿ ಮಾನಸ, ಪಾವಗಡ ಮಂಜು -ಪತ್ನಿ ನಂದಿನಿ ಮತ್ತು ಕುರಿ ಪ್ರತಾಪ್ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲಿದ್ದಾರೆ.

ಇದರ ಜೊತೆಗೆ ಹಲವಾರು ಸ್ಕಿಟ್‌ಗಳು, ಡಾನ್ಸ್ ಮತ್ತು ಗೇಮ್ಸ್‌ಗಳಿಂದ ಆರು ಗಂಟೆಗಳ ಈ ಮಹಾಮಿಲನ ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಅಪರೂಪದ ವಿಶೇಷ ಆನಂದದ ಹಬ್ಬವಾಗಿರುವುದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment