/newsfirstlive-kannada/media/post_attachments/wp-content/uploads/2025/05/chandra-prabha.jpg)
ಕಿರುತೆರೆ ಜನಪ್ರಿಯ ಶೋ ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ ಹಾಸ್ಯ ನಟ ಚಂದ್ರಪ್ರಭ. ತಮ್ಮ ಅದ್ಭುತ ಅಭಿನಯದ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ:‘ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಟ್ಟು ಕೀರ್ತಿಯಾಗಿ ಸೆಲೆಕ್ಟ್ ಆದೆ’.. ತನ್ವಿ ರಾವ್ ಸೀರಿಯಲ್ ರೋಚಕ ಜರ್ನಿ ಹೇಗಿತ್ತು?
ಇದೀಗ ವೀಕ್ಷಕರ ನೆಚ್ಚಿನ ಹಾಸ್ಯ ನಟ ಎಲ್ಲರೂ ಅಚ್ಚರಿಯಾಗುವಂತೆ ಮನೆ ಕಟ್ಟಿದ್ದಾರೆ. ಚಂದ್ರಪ್ರಭ ಅವರು ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದು, ಸ್ಯಾಂಡಲ್ವುಡ್ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.
ಹೌದು, ಚಂದ್ರಪ್ರಭ ಅವರ ಪತ್ನಿ ಭಾರತಿ ಪ್ರಿಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಮನೆಗೆ ಪ್ರವೇಶದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೊಸ ಮನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತುಂಬಾ ಸುಂದರವಾದ ಡುಪ್ಲೆಕ್ಸ್ ಮನೆಯನ್ನು ಚಂದ್ರಪ್ರಭ ಕಟ್ಟಿಸಿದ್ದಾರೆ.
ಆ ಹೊಸ ಮನೆಗೆ ವೃಷಭ ನಿಲಯ ಎಂದು ಹೆಸರಿಟ್ಟಿದ್ದಾರೆ. ಇವರ ಗೃಹಪ್ರವೇಶಕ್ಕೆ ವಿನೋದ್ ಗೊಬ್ರಗಾಲ, ರಾಘವೇಂದ್ರ, ಕೆಂಡಸಂಪಿಗೆ ಧಾರಾವಾಹಿ ನಟಿ ಐಶ್ವರ್ಯ ಮುಂತಾದವರು ಬಂದು ಶುಭ ಹಾರೈಸಿದ್ದಾರೆ.
ಆದ್ರೇ ಈ ಸುಂದರವಾದ ಮನೆಯನ್ನು ಊರಲ್ಲಾ ಅಥವಾ ಬೆಂಗಳೂರಿನಲ್ಲಾ ಎಂಬ ಮಾಹಿಯಿ ಲಭ್ಯವಾಗಿಲ್ಲ. ಸದ್ಯ ನಟ ಚಂದ್ರಪ್ರಭ ಅವರು ಈಗ ರಿಯಾಲಿಟಿ ಶೋ, ಸಿನಿಮಾಗಳು, ನಾಟಕಗಳು ಎಂದು ಬ್ಯುಸಿಯಾಗಿದ್ದಾರೆ.
View this post on Instagram
ಈಗ ಅವರು ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿದ್ದಾರೆ.ಈ ವಿಚಾರ ತಿಳಿದ ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ