Advertisment

ಅಬ್ಬಬ್ಬಾ.. ಮಜಾ ಟಾಕೀಸ್ ‘ರೆಮೋ’ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಜಡ್ಜಸ್; ವಿಡಿಯೋ ಇಲ್ಲಿದೆ ನೋಡಿ!

author-image
Veena Gangani
Updated On
ಅಬ್ಬಬ್ಬಾ.. ಮಜಾ ಟಾಕೀಸ್ ‘ರೆಮೋ’ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಜಡ್ಜಸ್; ವಿಡಿಯೋ ಇಲ್ಲಿದೆ ನೋಡಿ!
Advertisment
  • ನಟ ಧ್ರುವ ಸರ್ಜಾ ಪೊಗರು ಸಾಂಗ್​ಗೆ ಭರ್ಜರಿ ಸ್ಟೆಪ್ ಹಾಕಿದ ರೆಮೋ
  • ರೆಮೋ ಅವರು ಮಜಾ ಭಾರತ ಕಾಮಿಡಿ ಶೋ ಮೂಲಕ ಖ್ಯಾತಿ ಪಡೆದಿದ್ರು
  • ಡ್ಯಾನ್ಸ್​ ನೋಡಿ ಭರವಸೆ ಕರ್ನಾಟಕ ಭರವಸೆ ಅಂತ ಇಡಬೇಕು ಎಂದ್ರು ಜಡ್ಜ್​

ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ಈಗಾಗಲೇ ಶುರುವಾಗಿ ಸಖತ್​ ಸದ್ದು ಮಾಡುತ್ತಿದೆ. ಪ್ರತಿ ಸೀಸನ್​ನಲ್ಲೂ ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಾ ಬಂದಿದೆ. ಈ ಬಾರಿಯ ಸ್ಪೆಷಾಲಿಟಿ ಏನೆಂದರೆ, ಡ್ಯಾನ್ಸರ್ ಮತ್ತು ಸೆಲೆಬ್ರಿಟಿಗಳ ಕಾಂಬಿನೇಷನ್‌ನಲ್ಲಿ ಡಿಕೆಡಿ ಮೂಡಿ ಬರುತ್ತಿದೆ.

Advertisment

ಇದನ್ನೂ ಓದಿ:ಹಸಿ ಬಿಸಿ ಲುಕ್​ನಲ್ಲಿ ಕನ್ನಡತಿ ಸೀರಿಯಲ್​ ನಟಿ ಸಾರಾ ಅಣ್ಣಯ್ಯ.. ಖಾಲಿ ಹೃದಯದಲ್ಲಿ ಪ್ರೀತಿ ಕಂಡ ನಟಿ..!

publive-image

ಕಳೆದ ವಾರವಷ್ಟೇ ಶುರುವಾದ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಬಾರಿ ಡಿಕೆಡಿಗೆ ಎಂಟ್ರಿ ಕೊಟ್ಟಿರೋ ಕಿರುತೆರೆ ನಟ ನಟಿಯರು ಮಸ್ತ್ ಮಜಾ ಮಾಡುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ಸಖತ್​ ಮಿಂಚುತ್ತಿದ್ದಾರೆ. ಅದರಲ್ಲೂ ತಮ್ಮ ಅದ್ಭುತ ಕಾಮಿಡಿ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ರೆಮೋ ಅವರು ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ.

publive-image

ಇದನ್ನೂ ಓದಿ:ತುಂಗಭದ್ರಾ ಡ್ಯಾಂಗೆ ಗೇಟ್ ಅಳವಡಿಸೋದೇ ದೊಡ್ಡ ಚಾಲೆಂಜ್; ಹೇಗಿದೆ ತಜ್ಞರ ಪ್ಲಾನ್..?

Advertisment

ರೆಮೋ ಅವರ ಜೊತೆಗೆ ಸುಮಿತ್​ ಪಾರ್ಟ್ನರ್ ಆಗಿ ಆಯ್ಕೆ ಆಗಿದ್ದಾರೆ. ಇನ್ನು, ರಿಲೀಸ್​ ಆದ ಪ್ರೋಮೋದಲ್ಲಿ ರೆಮೋ ಹಾಗೂ ಸುಮಿತ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಕರಾಬು ಬಾಸು ಕರಾಬು ಎಂಬ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ. ಇನ್ನು, ಸೇಮ್​ ಟು ಸೇಮ್​ ರೆಮೊ ಅವರು ಧ್ರುವ ಸರ್ಜಾ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಅದೇ ಎನರ್ಜಿಯಲ್ಲಿ ಡ್ಯಾನ್ಸ್​ ಮಾಡಿದ್ದಾರೆ. ಇದೇ ಡ್ಯಾನ್ಸ್​ ನೋಡಿದ ಜಡ್ಜರ್ಸ್​ ಫುಲ್ ಶಾಕ್ ಆಗಿದ್ದಾರೆ.

ನಿಮ್ಮ ಕೈಯಲ್ಲೂ ಡ್ಯಾನ್ಸ್​ ಮಾಡಲು ಆಗುತ್ತೆ ಅಂತ ಪ್ರೂವ್​ ಮಾಡಿ ತೋರಿಸಿದ್ದೀರಿ ಅಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ. ಆಗ ನಿಮ್ಮ ಡ್ಯಾನ್ಸ್​ ನೋಡಿದ ಮೇಲೆ ಭರವಸೆ ಕರ್ನಾಟಕ ಭರವಸೆ ಅಂತ ಇಡಬೇಕು ಅಂತ ಅನಿಸುತ್ತದೆ ಎಂದು ಮ್ಯೂಸಿಕ್ ಕಂಪೋಸರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ. ಈ ಭರ್ಜರಿ ರೆಮೊ ಹಾಗೂ ಸುಮಿತ್ ಡ್ಯಾನ್ಸ್​ಗೆ ಶಿವಣ್ಣ ಹಾಗೂ ವಿಜಯ ರಾಘವೇಂದ್ರ ಅವರು ಫೈರ್‌ ಬ್ರ್ಯಾಂಡ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment