BBK11; ಬಿಗ್​ಬಾಸ್​ ಮನೆಗೆ ಮಜಾ ಟಾಕೀಸ್​ನ ಕುರಿ ಪ್ರತಾಪ್ ಸೇರಿ ಕಾಮಿಡಿ ಟೀಮ್ ಎಂಟ್ರಿ.. ಸರ್ಪ್ರೈಸ್‌

author-image
Bheemappa
Updated On
BBK11; ಬಿಗ್​ಬಾಸ್​ ಮನೆಗೆ ಮಜಾ ಟಾಕೀಸ್​ನ ಕುರಿ ಪ್ರತಾಪ್ ಸೇರಿ ಕಾಮಿಡಿ ಟೀಮ್ ಎಂಟ್ರಿ.. ಸರ್ಪ್ರೈಸ್‌
Advertisment
  • ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ಹಾಡಿ, ಕುಣಿದ ಕಾಮಿಡಿ ಟೀಮ್
  • ಗ್ರ್ಯಾಂಡ್ ಫಿನಾಲೆ ಗೆಲ್ಲುವ ಆ ಅದೃಷ್ಟಶಾಲಿ ಯಾರು, ಕುತೂಹಲ
  • ಮನೆಯೊಳಗೆ ಎಲ್ಲರ ಜೊತೆ ಮಜಾ ಮಾಡಿದ ಮಜಾ ಟಾಕೀಸ್

ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ ಕೊನೆ ಹಂತಕ್ಕೆ ಬಂದಿದೆ. ಇನ್ನೇನು ಕೇವಲ 3 ದಿನಗಳಲ್ಲಿ ಬಿಗ್​ಬಾಸ್ ವಿನ್ನರ್ ಯಾರೆಂದು ಗೊತ್ತಾಗಲಿದೆ. ಮನೆಯಲ್ಲಿನ 6 ಸ್ಪರ್ಧಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಅದೃಷ್ಟವಂತ ವಿಜಯಶಾಲಿ ಯಾರೆಂಬುದು ಸುದೀಪ್ ಘೋಷಣೆ ಮಾಡಲಿದ್ದಾರೆ. ಈ ಟೆನ್ಷನ್​ನಲ್ಲಿರುವ ಸ್ಪರ್ಧಿಗಳಿಗೆ ಫುಲ್ ಜೋಶ್ ತುಂಬಲು ಮನೆಗೆ ಮಜಾ ಟಾಕೀಸ್​ನ ಕಾಮಿಡಿ ಕಲಾವಿದರ ಎಂಟ್ರಿಯಾಗಿದೆ.

ಹನುಮಂತು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ, ರಜತ್ ಹಾಗೂ ಮಂಜು ಈ ಸ್ಪರ್ಧಿಗಳ ಎದೆಯಲ್ಲಿ ನಡುಕ ಆರಂಭವಾಗಿದೆ. ಫಿನಾಲೆಯಲ್ಲಿ ನಾನು ಗೆಲ್ಲುತ್ತೇನೆ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇದೆ. ಇದರ ಮಧ್ಯೆ ಮನೆಗೆ ಮಜಾ ಟಾಕೀಸ್ ಕಾಮಿಡಿ ಕಲಾವಿದರು ಎಂಟ್ರಿಯಾಗಿದೆ. ಕುರಿ ಪ್ರತಾಪ್, ಪ್ರಿಯಾಂಕ, ಚಂದ್ರಪ್ರಭಾ, ಗೊಬ್ಬರ ಸೇರಿ ಇನ್ನಷ್ಟು ಕಲಾವಿದರು ಮನೆಗೆ ಬಂದು ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕಾಮಿಡಿಯ ಮಸ್ತ್ ಡೈಲಾಗ್ಸ್ ಹೊಡೆದು, ಮ್ಯೂಸಿಕ್​ಗೆ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ.

publive-image

ಇದನ್ನೂ ಓದಿ: ಮಂತ್ರಾಲಯದ ವಿದ್ಯಾಪೀಠದ ವಾಹನ ಭಯಾನಕ ಆಕ್ಸಿಡೆಂಟ್​.. ಜೀವ ಕಳೆದುಕೊಂಡ ವಿದ್ಯಾರ್ಥಿಗಳು

ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳ ಪೈಕಿ ಈಗ ಫಿನಾಲೆ ವಾರಕ್ಕೆ ಕೇವಲ 6 ಸ್ಪರ್ಧಿಗಳು ಮಾತ್ರ ಇದ್ದಾರೆ. ಇದರಲ್ಲಿ ಒಬ್ಬರು ಮಾತ್ರ ವಿನ್ನರ್ ಆಗಲಿದ್ದಾರೆ. ಇವರಲ್ಲಿ ಇರುವ ಒತ್ತಡ, ಟೆನ್ಷನ್, ಯೋಚನೆ ಈ ಎಲ್ಲವನ್ನು ಹೋಗಲಾಡಿಸಿ ಸ್ಪರ್ಧಿಗಳನ್ನು ಹ್ಯಾಪಿ ಮೂಡ್​ಲ್ಲಿ ಇರುವಂತೆ ಮಾಡಲು ಮಜಾ ಟಾಕೀಸ್ ಕಲಾವಿದರು ಮನೆಯಲ್ಲಿ ಮಸ್ತ್ ಮಜಾ ಮಾಡಿದ್ದಾರೆ.

ಇನ್ನು ಅಂದ್ಹಾಗೆ ಫ್ರೆಬ್ರುವರಿ 1 ರಿಂದ ಮಜಾ ಟಾಕೀಸ್ ಆರಂಭವಾಗಲಿದೆ ಎಂದು ಬಿಗ್​ಬಾಸ್​ ಮನೆಯಲ್ಲಿ ಹಿಂಟ್​ ಕೊಟ್ಟಿದ್ದಾರೆ. ಅಂದರೆ ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆ ಮಜಾ ಟಾಕೀಸ್ ಆರಂಭವಾಗುತ್ತದೆ. ಕನ್ನಡಿಗರನ್ನು ನಕ್ಕು ನಗಿಸುವ ಈ ಶೋ ಈ ಬಾರಿ ಮತ್ತಷ್ಟು ಮೆರಗು ತರುವುದಂತೂ ಪಕ್ಕಾ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment