ದುಬೈಗೆ ಹಾರಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಸುಶ್ಮಿತಾ, ಜಗಪ್ಪ ದಂಪತಿ.. ಫೋಟೋಸ್ ಇಲ್ಲಿವೆ!

author-image
Veena Gangani
Updated On
ದುಬೈಗೆ ಹಾರಿದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಸುಶ್ಮಿತಾ, ಜಗಪ್ಪ ದಂಪತಿ.. ಫೋಟೋಸ್ ಇಲ್ಲಿವೆ!
Advertisment
  • ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಫೇಮಸ್​ ಆಗಿದ್ದ ಸ್ಟಾರ್ಸ್
  • ಗ್ರ್ಯಾಂಡ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸುಷ್ಮಿತಾ-ಜಗಪ್ಪ
  • ತಮ್ಮ ವೈಯಕ್ತಿಕ ಜೀವನಕ್ಕೆ ಸಮಯ ಕೊಡುತ್ತಿರೋ ಸ್ಟಾರ್​ ಜೋಡಿ

ಕಿರುತೆರೆ ಜನಪ್ರಿಯ ಶೋ ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ನಟಿ ಸುಷ್ಮಿತಾ ಮತ್ತು ಜಗಪ್ಪ ಜೋಡಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ವೀಕೆಂಡ್ ಬಂತು ಅಂದ್ರೆ ಸಾಕು ವೀಕ್ಷಕರನ್ನು ನಕ್ಕು ನಗಿರೋ ಹಾಸ್ಯ ಕಲಾವಿದರಲ್ಲಿ ಸುಷ್ಮಿತಾ ಹಾಗೂ ಜಗಪ್ಪ ಜೋಡಿ ಕೂಡ ಒಂದು.

publive-image

ಮಜಾ ಭಾರತ, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದವರು ಜೋಡಿ ದುಬೈಗೆ ಹಾರಿದೆ. ಹೌದು, ಕಿರುತೆರೆ ನಟಿ ಸುಷ್ಮಿತಾ ಮತ್ತು ಜಗಪ್ಪ ದಂಪತಿ ದುಬೈಗೆ ಹೋಗಿದ್ದಾರೆ. ದುಬೈಗೆ ಹೋಗಿರೋ ಫೋಟೋಗಳನ್ನು ಸುಷ್ಮಿತಾ ಮತ್ತು ಜಗಪ್ಪ ತಮ್ಮ ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

publive-image

ಆ ಫೋಟೋದಲ್ಲಿ ನಟಿ ಸುಷ್ಮಿತಾ ಹಾಗೂ ಜಗಪ್ಪ ಬುರ್ಜ್ ಖಲೀಫಾ ಮುಂದೆ ನಿಂತುಕೊಂಡಿದ್ದಾರೆ. ಸದ್ಯ ಈ ಜೋಡಿ ತಮ್ಮ ವೈಯಕ್ತಿಕ ಜೀವನಕ್ಕೆ ಸಮಯ ಕೊಡುತ್ತಿದ್ದಾರೆ. ಈ ಹಿಂದೆ ಈ ಸ್ಟಾರ್ ಜೋಡಿ ಹೊಸ ಹುಂಡೈ ಕ್ರೇಟಾ ಕಾರಿನ ಪ್ರೈಜ್‌ ರೇಂಜ್‌ ಕಾರನ್ನು ಖರೀದಿ ಮಾಡಿದ್ದರು.

publive-image

ಅದರ ಬೆಲೆಯೂ ಬರೋಬ್ಬರಿ 10ದಿಂದ 20 ಲಕ್ಷ ರೂಪಾಯಿ ಮೌಲ್ಯದ್ದಾಗಿತ್ತು. ಹೊಸ ಕಾರನ್ನು ಖರೀದಿಸಿದ ವಿಡಿಯೋವನ್ನು ದಂಪತಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋ ನೋಡಿದ ನೆಟ್ಟಿಗಳು ಶುಭಾಶಯ ತಿಳಿಸಿದ್ದರು.

publive-image

ನಟಿ ಸುಷ್ಮಿತಾ ಮತ್ತು ಜಗ್ಗಪ್ಪ ಅವರು ನವೆಂಬರ್ 19, 2023ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆಗೆ ಹಿರಿತೆರೆ ಹಾಗೂ ಕಿರುತೆರೆ ಕಲಾವಿದರು ಭಾಗಿಯಾಗಿ ಶುಭ ಹಾರೈಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment