/newsfirstlive-kannada/media/post_attachments/wp-content/uploads/2025/04/Majestic-Metro-Station-Rush-3.jpg)
ನಮ್ಮ ಮೆಟ್ರೋ ಪ್ರಯಾಣಿಕರು ಇವತ್ತು ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ನಲ್ಲಿ ಪರದಾಡಿದ್ದಾರೆ. ಬೆಳ್ಳಂಬೆಳಗ್ಗೆ ಮೆಟ್ರೋ ನಿಲ್ದಾಣ ಜನರಿಂದ ತುಂಬಿ ತುಳುಕಿದೆ. ಗ್ರೌಂಡ್ ಫ್ಲೋರ್‌ನಿಂದ ಫಸ್ಟ್ ಫ್ಲೋರ್‌ವರೆಗೂ ಜನರು ಕ್ಯೂನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿದೆ.
ಇಂದು ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಜನರಿಗೆ ಕಿರಿಕಿರಿ ಉಂಟಾಗಿದೆ. ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ನಲ್ಲಿ ಎಷ್ಟು ರಶ್ ಇತ್ತು ಅಂದ್ರೆ ಈ ಕಡೆ ಆ ಕಡೆಗೆ ಜನ ಓಡಾಡುವುದಕ್ಕೂ ಜಾಗ ಇರಲಿಲ್ಲ. ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ನಲ್ಲಿ ಪ್ರಯಾಣಿಕರು ಹೈರಾಣಾಗಿದ್ದಾರೆ.
ದಿಢೀರ್ ಜನಜಂಗುಳಿಗೆ ಕಾರಣವೇನು?
ಸಾಮಾನ್ಯವಾಗಿ ನಮ್ಮ ಮೆಟ್ರೋದಲ್ಲಿ ಪ್ರತಿ 6 ನಿಮಿಷಕ್ಕೆ ಒಂದು ರೈಲು ಮೆಜೆಸ್ಟಿಕ್ ನಿಲ್ದಾಣದಿಂದ ಹೊರಡುತ್ತೆ. ಆದರೆ ಇವತ್ತು 6 ನಿಮಿಷದ ಬದಲು 10 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅನಿರೀಕ್ಷಿತವಾಗಿ ಮೆಟ್ರೋ ಸ್ಟೇಷನ್ ಒಳಗೆ ಜನರು ಸಿಲುಕುವಂತಾಯಿತು.
ಇವತ್ತು ಸರ್ಕಾರಿ ರಜೆ ಇದ್ದ ಕಾರಣ ಸಹಜವಾಗಿ ಜನ ಸಂಚಾರ ಕಡಿಮೆ ಎನ್ನುವ ಅಂದಾಜು BMRCLಗೆ ಇತ್ತು. ಹೀಗಾಗಿ ಇಂದು ಬೆಳಗ್ಗೆ ಮೆಜೆಸ್ಟಿಕ್‌ನಲ್ಲಿ 6 ನಿಮಿಷದ ಬದಲು 10 ನಿಮಿಷಕ್ಕೆ ರೈಲು ಸಂಚರಿಸಿದೆ. ಇದರಿಂದ ಸ್ಟೇಷನ್‌ನಲ್ಲಿ ಜನಸಂಖ್ಯೆ ಹೆಚ್ಚಾಗಿ ಕಿರಿಕಿರಿ ಉಂಟಾಗಿದೆ.
ಇಂದು ಅಂಬೇಡ್ಕರ್ ಜಯಂತಿ ಹಾಗೂ ಸರ್ಕಾರಿ ರಜೆ ಕಾರಣದಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಬೆಳಗ್ಗೆ ಆದ ಗೊಂದಲ ಮತ್ತೆ ಉಂಟಾಗಬಾರದು ಅನ್ನೋ ಕಾರಣಕ್ಕೆ ತುರ್ತು ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಗುಟ್ಟಾಗಿ ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ ಸುಪ್ರೀತಾ ಸತ್ಯನಾರಾಯಣ್
ಇದೀಗ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ಗೆ ಹೆಚ್ಚುವರಿ ಮೆಟ್ರೋ ರೈಲು ಓಡಿಸುವ ವ್ಯವಸ್ಥೆ ಮಾಡಲಾಗಿದೆ. ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್‌ಗೆ 4 ಹೆಚ್ಚುವರಿ ರೈಲು ಓಡಿಸಿದೆ. ಮೆಜೆಸ್ಟಿಕ್, ಗರುಡಾಚಾರ್‌ಪಾಳ್ಯ ಮತ್ತು ವೈಟ್‌ಫೀಲ್ಡ್‌ನಿಂದ ಒಟ್ಟು 7 ಹೊಸ ಟ್ರಿಪ್‌ಗಳು ಮಾಡಲಾಗಿದೆ. ಇಂದು ಸಂಜೆ ಐಟಿಪಿಎಲ್‌ನಿಂದ ರೈಲುಗಳು ಎಂದಿನಂತೆ 5 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ ಎಂದು BMRCL ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ