newsfirstkannada.com

WATCH: ಗೃಹ ಪ್ರವೇಶಕ್ಕೆ ಬಂದು ಬರ್ತ್ ​ಡೇ ಪಾರ್ಟಿ ಕೊಡಿಸುವುದಾಗಿ ಹೇಳಿದ್ದ ಯೋಧ ಹುತಾತ್ಮ; ಹುಟ್ಟೂರಲ್ಲಿ ಶೋಕ ಸಾಗರ

Share :

Published September 15, 2023 at 3:56pm

    ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಷ್ಠಿತ ಸೇನಾ ಪದಕ ನೀಡಿ ಗೌರವ

    ಎರಡೂವರೆ ವರ್ಷದ ಮುದ್ದಿನ ಮಗಳನ್ನ ಅಗಲಿದ ಮೇಜರ್ ಆಶಿಶ್

    ಅ.13 ರಂದು ಮನೆಗೆ ಬಂದು ಪಾರ್ಟಿ ಕೊಡಿಸುವುದಾಗಿ ಹೇಳಿದ್ದ ವೀರಯೋಧ

ಶ್ರೀನಗರ: ಅನಂತನಾಗ್‌ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿರುವ ಭಾರತೀಯ ಯೋಧರ ಮೃತದೇಹಗಳನ್ನು ಅವರ ಹುಟ್ಟೂರಿಗೆ ತಲುಪಿಸಲಾಗಿದೆ. ಸೈನಿಕರ ಹುಟ್ಟೂರಲ್ಲಿ ಕುಟುಂಬಸ್ಥರು, ಬಂಧು-ಬಳಗದ ಆಕ್ರಂದನ ಮುಗಿಲು ಮುಟ್ಟಿದೆ. ಹರಿಯಾಣದ ಮೇಜರ್ ಆಶಿಶ್ ಧೋಂಚಕ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಅವರ ಹುಟ್ಟೂರಿಗೆ ತರಲಾಗಿದೆ.

ಹರಿಯಾಣದ ಪಾಣಿಪತ್‌ನಲ್ಲಿರುವ ಬಿಂಜೋಲ್​ ಗ್ರಾಮಕ್ಕೆ ಮೇಜರ್ ಆಶಿಶ್ ಧೋಂಚಕ್ ಪಾರ್ಥಿವ ಶರೀರವನ್ನು ಭಾರತ್​ ಮಾತಾ ಕೀ ಜೈ ಎನ್ನುತ್ತ ಮೆರವಣಿಗೆ ಮೂಲಕ ತರಲಾಗಿದೆ. ಮೇಜರ್ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಸಾವಿರಾರು ಜನ ಅಂತಿಮ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಮತ್ತೆ ಹುಟ್ಟಿ ಬನ್ನಿ ಅಪ್ಪ.. ಕರ್ನಲ್ ಮನ್‌ಪ್ರೀತ್ ಸಿಂಗ್ ಮಕ್ಕಳ ಸೆಲ್ಯೂಟ್‌.. ನೋಡೋರ ಕಣ್ಣೀರು ತರಿಸುತ್ತೆ ಈ ವಿಡಿಯೋ!

ಹರಿಯಾಣದ ಮೇಜರ್ ಆಶಿಶ್ ಧೋಂಚಕ್ ಅವರು ಉಗ್ರರ ವಿರುದ್ಧ ಹೋರಾಡುವಾಗ ಗುಂಡೇಟು ತಗುಲಿ ವೀರ ಮರಣ ಹೊಂದಿದ್ದಾರೆ. ಇವರು ಇತ್ತೀಚೆಗಷ್ಟೇ ಮೇಜರ್ ಆಗಿ ನೇಮಕಗೊಂಡಿದ್ದರು. ಸ್ವಾತಂತ್ರ್ಯ ದಿನಾಚರಣೆಯಂದು ಆಶಿಶ್ ಧೋಂಚಕ್​ಗೆ ಪ್ರತಿಷ್ಠಿತ ಸೇನಾ ಪದಕ ನೀಡಿ ಗೌರವಿಸಲಾಗಿತ್ತು. ಜೊತೆಗೆ ತಮ್ಮ 3 ಹಂತಸ್ತಿನ ಮನೆಗೆ ಗೃಹ ಪ್ರವೇಶ ಮಾಡಬೇಕಿತ್ತು. ಇದಕ್ಕಾಗಿ ಅಕ್ಟೋಬರ್ 13 ರಂದು ಮನೆಗೆ ಬರುವುದಾಗಿ ಹೇಳಿದ್ದರು.

ತಮಗೆ ಪದಕ ಸಿಕ್ಕಿದ್ದು ಹಾಗೂ ಹೊಸ ಮನೆಗೆ ಗೃಹಪ್ರವೇಶ ಈ ಎರಡಕ್ಕೂ ತಮ್ಮ ಹುಟ್ಟುಹಬ್ಬದಂದೇ (ಅಕ್ಟೋಬರ್ 23) ಗ್ರ್ಯಾಂಡ್ ಆಗಿ ಪಾರ್ಟಿ ಕೊಡಿಸುವುದಾಗಿ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಹೇಳಿದ್ದರು. ಅಷ್ಟರಲ್ಲೇ ಈ ರೀತಿ ಆಗಿರುವುದು ಕುಟುಂಬಸ್ಥರಿಗೆ ಭಾರೀ ನೋವುಂಟು ಮಾಡಿದೆ. ಎರಡೂವರೆ ವರ್ಷದ ಮಗಳು, ಪತ್ನಿ, ತಂದೆ-ತಾಯಿ ಹಾಗೂ ಮೂವರು ಸಹೋದರಿಯರನ್ನು ಆಶಿಶ್ ಧೋಂಚಕ್ ಅವರು ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಗೃಹ ಪ್ರವೇಶಕ್ಕೆ ಬಂದು ಬರ್ತ್ ​ಡೇ ಪಾರ್ಟಿ ಕೊಡಿಸುವುದಾಗಿ ಹೇಳಿದ್ದ ಯೋಧ ಹುತಾತ್ಮ; ಹುಟ್ಟೂರಲ್ಲಿ ಶೋಕ ಸಾಗರ

https://newsfirstlive.com/wp-content/uploads/2023/09/JAMMU_KASHMIR_Soldier_3.jpg

Load More