ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ; ಸ್ಟಾರ್​ ಆಟಗಾರರೇ ಔಟ್​​

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿ ಬಳಿಕ ಟೀಂ ಇಂಡಿಯಾದ ಸ್ಟಾರ್ ಓಪನರ್ ನಿವೃತ್ತಿ..
Advertisment
  • ನಾಳೆ ಟೀಮ್​ ಇಂಡಿಯಾ, ಇಂಗ್ಲೆಂಡ್ ಮಧ್ಯೆ​ 3ನೇ ಏಕದಿನ ಪಂದ್ಯ
  • ಕೊನೆಯ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ..!
  • ಟೀಮ್​ ಇಂಡಿಯಾದಿಂದ ಹೊರಬಿದ್ದ ಇಬ್ಬರು ಸ್ಟಾರ್​ ಆಟಗಾರರು

ನಾಳೆ ಟೀಮ್​ ಇಂಡಿಯಾ, ಇಂಗ್ಲೆಂಡ್​ ನಡುವಿನ 3ನೇ ಏಕದಿನ ಪಂದ್ಯ ನಡೆಯಲಿದೆ. ಅಹಮದಾಬಾದಿನ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ಆಗಲಿದೆ.

ಟೀಮ್ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಮೇಜರ್​ ಮೂರು ಬದಲಾವಣೆಗಳು ಆಗಲಿವೆ. ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಗೆಲುವು ಸಾಧಿಸಿ ಏಕದಿನ ಸರಣಿಯನ್ನು ಗೆದ್ದಿರೋ ಟೀಮ್​ ಇಂಡಿಯಾಗೆ 3ನೇ ಮ್ಯಾಚ್​​ ಔಪಚಾರಿಕ ಆಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ ಕೆಲ ಪ್ರಯೋಗಗಳನ್ನು ನಡೆಸೋ ಸಾಧ್ಯತೆ ಇದೆ.

ಪಂತ್​ಗೆ ಚಾನ್ಸ್​​

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ವಿಕೆಟ್​ ಕೀಪರ್​​ ಕೆ.ಎಲ್​ ರಾಹುಲ್​​. ಇವರು ಕಳೆದ ಎರಡು ಪಂದ್ಯಗಳಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹಾಗಾಗಿ ಇವರ ಬದಲಿಗೆ ಸ್ಟಾರ್​​ ವಿಕೆಟ್​​ ಕೀಪರ್​ ಬ್ಯಾಟರ್​​ ರಿಷಬ್​ ಪಂತ್​​ ಕಣಕ್ಕಿಳಿಯಲಿದ್ದಾರೆ.

ಅರ್ಷದೀಪ್​​ಗೆ ಅವಕಾಶ

ಇನ್ನೊಂದೆಡೆ ಮೊದಲ ಎರಡು ಪಂದ್ಯಗಳಲ್ಲೂ ಮೊಹಮ್ಮದ್ ಶಮಿ ಪರಿಣಾಕಾರಿ ಬೌಲಿಂಗ್​ ಮಾಡುವಲ್ಲಿ ಎಡವಿದರು. ಹೀಗಾಗಿ ಕೊನೆಯ ಪಂದ್ಯದಲ್ಲಿ ಇವರ ಜಾಗದಲ್ಲಿ ಅರ್ಷದೀಪ್ ಸಿಂಗ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭ್ಮನ್​​ ಗಿಲ್​, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್​ ಪಂತ್​​​ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್ದೀಪ್​ ಯಾದವ್.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​​; ಸ್ಟಾರ್​​ ಪ್ಲೇಯರ್​ ಎಂಟ್ರಿ ಬಗ್ಗೆ ಬಿಗ್​ ಅಪ್ಡೇಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment