/newsfirstlive-kannada/media/post_attachments/wp-content/uploads/2024/04/Pant_Batting.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್ ಸೀಸನ್​​ಗೆ ದಿನಗಣನೆ ಶುರುವಾಗಿದೆ. ಎಲ್ಲಾ ಐಪಿಎಲ್ ತಂಡಗಳು ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿಗೆ ಭರ್ಜರಿ ತಯಾರಿ ನಡೆಸಿಕೊಂಡಿವೆ. ಅಕ್ಟೋಬರ್ 31ರ ಒಳಗೆ ಐಪಿಎಲ್ ತಂಡಗಳ ಮಾಲೀಕರು ರೀಟೈನ್​ ಲಿಸ್ಟ್​ ಬಿಸಿಸಿಐಗೆ ಸಲ್ಲಿಸಬೇಕಿದೆ. ಇದರ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್​​ ತಂಡದಿಂದ ಬಿಗ್​ ಅಪ್ಡೇಟ್​​ ಒಂದು ಹೊರಬಿದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ 2025ರ ಐಪಿಎಲ್ ಟೂರ್ನಿಗೂ ಮೊದಲು ಹೊಸ ಕೋಚಿಂಗ್ ಸಿಬ್ಬಂದಿಯನ್ನು ನೇಮಕ ಮಾಡಿದೆ. ಇತ್ತೀಚೆಗಷ್ಟೇ ರಿಕ್ಕಿ ಪಾಂಟಿಂಗ್​​​ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪಂಜಾಬ್​​ ಕಿಂಗ್ಸ್​​ ಸೇರಿದ್ದರು. ರಿಕ್ಕಿ ಪಾಂಟಿಂಗ್ ಸ್ಥಾನಕ್ಕೀಗ ಟೀಮ್​​ ಇಂಡಿಯಾದ ಮಾಜಿ ಕ್ರಿಕೆಟರ್​ ಹೇಮಂಗ್​​ ಬದಾನಿ ಬಂದಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಹೆಡ್​ ಕೋಚ್​ ಆಗಿದ್ದು, ಮಾಜಿ ಟೀಮ್ ಇಂಡಿಯಾ ಬ್ಯಾಟರ್ ವೇಣುಗೋಪಾಲ್ ರಾವ್ ಫ್ರಾಂಚೈಸಿಯ ನಿರ್ದೇಶಕರನ್ನಾಗಿ ನೇಮಿಸಿಲಾಗಿದೆ.
ಯಾರು ಈ ಹೇಮಂಗ್ ಬದಾನಿ?
ಭಾರತ ತಂಡದ ಮಾಜಿ ಕ್ರಿಕೆಟರ್​​ ಹೇಮಂಗ್ ಬದಾನಿ. ಇವರು ಟೀಮ್​ ಇಂಡಿಯಾ ಪರ 4 ಟೆಸ್ಟ್​ ಮತ್ತು 40 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2021 ರಿಂದ 2023 ರವರೆಗೆ ಬದಾನಿ ಸನ್‌ರೈಸರ್ಸ್ ಹೈದರಾಬಾದ್ ಫೀಲ್ಡಿಂಗ್​ ಕೋಚ್​ ಆಗಿದ್ದರು. ನಂತರ ಬ್ಯಾಟಿಂಗ್ ಕೋಚ್ ಆಗಿ ಕೂಡ ಕೆಲಸ ಮಾಡಿದ್ರು.
ವೇಣುಗೋಪಾಲ್ ರಾವ್ ಹಿನ್ನಲೆಯೇನು?
ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್ ವೇಣುಗೋಪಾಲ್ ರಾವ್. ಇವರು ​​ಭಾರತದ ಪರ 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2009ರಲ್ಲಿ ಐಪಿಎಲ್ ಚಾಂಪಿಯ್ ಆಗಿದ್ದ ಅಂದಿನ ಡೆಕ್ಕನ್ ಚಾರ್ಜರ್ಸ್ ತಂಡದ ಬ್ಯಾಟಿಂಗ್ ಭಾಗವಾಗಿದ್ದರು. ಡೆಲ್ಲಿ ಡೇರ್‌ಡೆವಿಲ್ಸ್ ಪರ ಮೂರು ಸೀಸನ್​ ಆಡಿದ್ರು.
ಪಂತ್​ಗೆ ಶಾಕ್​ ಕೊಟ್ಟ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಮೇಜರ್​ ಸರ್ಜರಿ ಮಾಡಿರೋ ಮಾಲೀಕರು ಪಂತ್​ಗೆ ಬಿಗ್​ ಶಾಕ್​ ಕೊಟ್ಟಿದ್ದಾರೆ. ಹೇಮಂಗ್​ ಬದಾನಿ ಆಗಲಿ, ವೇಣುಗೋಪಾಲ್​ ರಾವ್​ ಆಗಲಿ ಪಂತ್​​ಗೆ ಅಷ್ಟಾಗಿ ಪರಿಚಯ ಇಲ್ಲ ಎಂದು ತಿಳಿದು ಬಂದಿದೆ. ಕೋಚಿಂಗ್​ ಸಿಬ್ಬಂದಿ ನೇಮಕ ವಿಚಾರದಲ್ಲಿ ಪಂತ್​ ಮಾತಿಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಾಲೀಕರು ಮನ್ನಣೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us