ಮುಂಬೈ ಇಂಡಿಯನ್ಸ್​ನಲ್ಲಿ ಮೇಜರ್​ ಸರ್ಜರಿ; ರೋಹಿತ್​​ ಆಪ್ತನಿಗೆ ಮಹತ್ವದ ಜವಾಬ್ದಾರಿ!

author-image
Ganesh Nachikethu
Updated On
ಹಾರ್ದಿಕ್​ಗೆ ಬಿಗ್​ ಶಾಕ್​​.. ರೋಹಿತ್​ ಶರ್ಮಾಗೆ ಬಿಗ್​ ಆಫರ್​ ಕೊಟ್ಟ ಮುಂಬೈ ಇಂಡಿಯನ್ಸ್​!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​
  • ಮುಂಬೈ ಇಂಡಿಯನ್ಸ್​ ತಂಡದಲ್ಲಿ ಮೇಜರ್​ ಸರ್ಜರಿ ಶುರು
  • ರೋಹಿತ್​ ಶರ್ಮಾ ಆಪ್ತ ಪರಾಸ್​​ಗೆ ಮಹತ್ವದ ಜವಾಬ್ದಾರಿ

ಐಪಿಎಲ್​​ ಇತಿಹಾಸದಲ್ಲೇ 5 ಬಾರಿ ಚಾಂಪಿಯನ್​ ಆದ ತಂಡ ಮುಂಬೈ ಇಂಡಿಯನ್ಸ್​​. ಮುಂಬೈ ಇಂಡಿಯನ್ಸ್​​ ತಂಡ ಮಾಡಿದ ಈ ಸಾಧನೆಯ ಕೀರ್ತಿ ರೋಹಿತ್​ ಶರ್ಮಾಗೆ ಸಲ್ಲುತ್ತದೆ. ಇಂಥಾ ಟೀಮ್​ ಈಗ ಕಳೆದ 4 ವರ್ಷಗಳಿಂದ ಕಪ್ ಗೆಲ್ಲಲು ಪರದಾಡುತ್ತಿದೆ. ಇದಕ್ಕೆ ಕಾರಣ ಮುಂಬೈ ಇಂಡಿಯನ್ಸ್​ ತಂಡದ ಸಂಘಟಿತ ಪ್ರದರ್ಶನ ನೀಡದಿರುವುದು. ಹೀಗಾಗಿ ಮುಂಬೈ ಪ್ಲೇ ಆಪ್ ತಲುಪಲು ಸಾಧ್ಯವಾಗಿರಲಿಲ್ಲ.

ಇನ್ನು, ಮುಂದಿನ ಸೀಸನ್​​ಗೆ ಮುಂಬೈ ಇಂಡಿಯನ್ಸ್​ ಬಲಿಷ್ಠ ತಂಡ ಕಟ್ಟಲು ಮುಂದಾಗಿದೆ. ಹಾಗಾಗಿ ತಂಡದಲ್ಲಿ ಮೇಜರ್​ ಸರ್ಜರಿ ಮಾಡಲಾಗುತ್ತಿದೆ. ಮಹತ್ವದ ಬೆಳವಣಿಗೆ ಒಂದರಲ್ಲಿ ರೋಹಿತ್​ ಆಪ್ತರಾದ ಪರಾಸ್​ ಮಾಂಬ್ರೆ ಅವರನ್ನು ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ಹೆಡ್ ಕೋಚ್ ಆಗಿ ಮಹೇಲಾ ಜಯವರ್ಧನೆ ಅವರನ್ನು ಆಯ್ಕೆ ಮಾಡಲಾಗಿತ್ತು. ಇವರ ನೇತೃತ್ವದ ಕೋಚಿಂಗ್ ಸ್ಟಾಫ್ ಭಾಗವಾಗಿ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರೊಂದಿಗೆ ಮಾಂಬ್ರೆ ಕೂಡ ಕೆಲಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ರೋಹಿತ್​ ಶರ್ಮಾ ಆಪ್ತರಿಗೆ ಮುಂಬೈ ಇಂಡಿಯನ್ಸ್​ ಮನ್ನಣೆ ನೀಡುತ್ತಿದ್ದು, ಇದು ಹಾರ್ದಿಕ್​​ ಪಾಂಡ್ಯಗೆ ಬಿಗ್​ ಶಾಕ್​ ಆಗಿದೆ.

ಯಾರು ಈ ಪರಾಸ್ ಮಾಂಬ್ರೆ?

2021ರ ನವೆಂಬರ್ ತಿಂಗಳಿಂದ 2024ರ ಜೂನ್‌ ವರಗೆ ಟಿ20 ವಿಶ್ವಕಪ್ ಗೆಲ್ಲುವವರೆಗೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿದ್ದರು ಈ ಮಾಂಬ್ರೆ. ಇವರು ರೋಹಿತ್​ ಶರ್ಮಾಗೆ ಬಹಳ ಆಪ್ತರು. ಈಗ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅಡಿಯಲ್ಲಿ ಕೋಚಿಂಗ್ ತಂಡದ ಭಾಗವಾಗಿದ್ದಾರೆ. ಪ್ರಸ್ತುತ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರೊಂದಿಗೆ ಇವರು ಕೆಲಸ ಮಾಡಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್​​ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಯಂಗ್ ಪ್ಲೇಯರ್ ಡ್ರಾಮಾ, ಭಾರತ T20 ವಿಶ್ವಕಪ್ ಕಪ್ ಗೆದ್ದಿದ್ದು ಹೇಗೆ.. ರಿಷಭ್‌ ಪಂತ್​ ಹೇಳಿದ ಸತ್ಯವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment