/newsfirstlive-kannada/media/post_attachments/wp-content/uploads/2025/07/xl62.jpg)
ಝಗಮಗಿಸುವ ನೆಕ್ಸಾ ಶೋರೂಂ ಮುಂದೆ ಹೋದ್ರೆ ಕಾರ್ಗಳು ಕಣ್ಣಿಗೆ ಬೀಳ್ತಾವೆ. ಅದೊಂದು ಪ್ರೀಮಿಯಂ ಕಾರ್ಗಳಿಗೆ ಅಂತಾನೇ ಹುಟ್ಟಿಕೊಂಡ ಎಕ್ಲ್ಯೂಸಿವ್ ಶೋರೂಂ ಚೈನ್. ಆದ್ರೆ ಇಲ್ಲಿ ನಿಮಗೆ ವಿಧ ವಿಧವಾದ ಮಾರುತಿ ಕಾರ್ಗಳು ಕಾಣಸಿಗ್ತಾವೆ. ಅದರಲ್ಲೇ ಒಂದು ಎಕ್ಲ್ಯೂಸಿವ್ ಕಾರ್ ಅಂದ್ರೆ ಅದು XL6. ಇದೀಗ ಈ ಕಾರ್ಗೆ ಒಂದು ಮೇಜರ್ ಅಪ್ಡೇಟ್ ನೀಡೋಕೆ ಮಾರುತಿ ಕಂಪನಿ ತಯಾರು ಮಾಡಿಕೊಂಡಿದೆ.
ಇದನ್ನೂ ಓದಿ:ಕಾರು ಡ್ರೈವರ್ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!
ಸೇಫ್ಟಿ ವಿಷ್ಯದಲ್ಲಿ ಯಾವುದೇ ವಾಹನ ತಯಾರಿಕ ಕಂಪನಿಯಾದ್ರೂ ಕೂಡ ರಾಜೀ ಆಗೋದಿಲ್ಲ. ಹಾಗೇ ಮಾರುತಿ ಕಂಪನಿ ಕೂಡ ಅದೇ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ ಮತ್ತಷ್ಟು ಸೇಫ್ಟಿ ಅಪ್ಡೇಟ್ ನೀಡ್ತಾ ಇದೆ. ಇದರಲ್ಲಿ ಮುಖ್ಯವಾದ ಅಪ್ಡೇಟ್ ಅಂದ್ರೆ ಅದು ಏರ್ ಬ್ಯಾಗ್ಗಳು. ಹೌದು, ತಮ್ಮ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಮಾರುತಿ ಕಂಪನಿ ತನ್ನ XL6 ಕಾರ್ನ ಏರ್ ಬ್ಯಾಗ್ನ 4 ರಿಂದ 6ಕ್ಕೆ ಏರಿಕೆ ಮಾಡಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಇದನ್ನು ನೋಡಿದ್ರೆ, ಇದು ಒಳ್ಳೇ ನಿರ್ಧಾರನೇ. ಆದ್ರೆ ಕಂಪನಿಗೆ ಇದರಿಂದ ಉಂಟಾಗುವ ಹೆಚ್ಚಿನ ಖರ್ಚನ್ನು ಸರಿದೂಗಿಸೋಕೆ ಮಾರುತಿ ಕಂಪನಿ ಒಂದು ಬ್ಯಾಕ್ಅಪ್ ಪ್ಲ್ಯಾನ್ ಕೂಡ ಮಾಡಿಕೊಂಡಿದೆ.
ಅದೇನೆಂದ್ರೆ ಈ ಹೆಚ್ಚಿನ ಏರ್ಬ್ಯಾಗ್ಳ ಅಳವಡಿಕೆಯಿಂದ ಉಂಟಾಗುವ ಹೆಚ್ಚುವರಿ ಖರ್ಚನ್ನು ಗ್ರಾಹಕರ ಮೇಲೆಯೇ ಹೊರಿಸೋಕೆ ಈಗ ತೀರ್ಮಾನ ಮಾಡಲಾಗಿದೆ. ಅಂದ್ರೆ ಕಂಪ್ಲೀಟ್ ವೆಚ್ಚ ಏನ್ ಬೀಳುತ್ತೋ, ಅದನ್ನ ಸಂಪೂರ್ಣವಾಗಿ ಗ್ರಾಹಕರ ಮೇಲೆ ಹೊರೆಸಲಾಗಿದೆ. ಇದರಿಂದ ಶೇಕಡ 0.8ರಷ್ಟು ವೆಚ್ಚವನ್ನು ಗ್ರಾಹಕರ ಖರೀದಿ ಬೆಲೆಗೆ ಸೇರಿಸಲಾಗಿದೆ. ಸೋ ಇದರಿಂದ ಮಾರುಕಟ್ಟೆಯಲ್ಲಿ ಕಾರ್ನ ಬೆಲೆ ಕೂಡ ಏರಿಕೆಯಾಗಿದೆ.
ಇದನ್ನೂ ಓದಿ:ಶಿಶು ಹುಟ್ಟಿನಿಂದ 6 ತಿಂಗಳವರೆಗೆ.. ಪೋಷಕರು ಈ ಸಲಹೆಗಳನ್ನು ಫಾಲೋ ಮಾಡಿ..
ಹಾಗಾದ್ರೆ, ಈ XL6 ಕಾರ್ನ ಬೆಲೆ ಎಷ್ಟಿದೆ ಅಂದ್ರೆ, ಯಾವಾಗ ಈ ಫೀಚರ್ನ ಌಡ್ ಮಾಡಲಾಯ್ತೋ ಆಗ ಇದರ ಬೆಲೆ ಸುಮಾರು 9500 ರಿಂದ 12500ಕ್ಕೆ ಏರಿದೆ. ಹಾಗೂ ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿ XL6 ಕಾರ್ನ ಬೆಲೆ 11.83 ಲಕ್ಷದಿಂದ ಶುರುವಾಗ್ತಾ ಇತ್ತು. ಮತ್ತು 14.83 ಲಕ್ಷದವರೆಗೂ ಟಾಪ್ ಎಂಡ್ ಮಾಡೆಲ್ ಲಭ್ಯವಿತ್ತು. ಆದ್ರೀಗ 11.83 ಲಕ್ಷ ಇದ್ದದ್ದು ಈಗ 11.96 ಲಕ್ಷವಾಗಿದೆ ಹಾಗೂ 14.83 ಲಕ್ಷ ಇದ್ದ ಬೆಲೆ 14.96-15 ಲಕ್ಷ ಆಗಿದೆ.
ಎರ್ಟಿಗಾ ಕಾರ್ನ ಆರು ಏರ್‌ಬ್ಯಾಗ್‌ಗಳೊಂದಿಗೆ ನವೀಕರಿಸಿದ ಸ್ವಲ್ಪ ಸಮಯದ ನಂತರ, ಮಾರುತಿ ಈಗ XL6 MPV ಯಲ್ಲಿ ಅದೇ ಸುರಕ್ಷತಾ ಫೀಚರ್ನ ಹೊರತಂದಿದೆ. ಇಲ್ಲಿಯವರೆಗೆ, XL6 ಅನ್ನು ಅದರ ಎಲ್ಲಾ ಟ್ರಿಮ್‌ಗಳಲ್ಲಿ ಕೇವಲ 4 ಏರ್‌ಬ್ಯಾಗ್‌ಗಳೊಂದಿಗೆ ನೀಡಲಾಗುತ್ತಿತ್ತು. ಆದ್ರೆ ಇನ್ಮುಂದೆ ಆರು ಏರ್ ಬ್ಯಾಗ್ಗಳೊಂದಿಗೆ ಬರಲಿದ್ದು. ಗ್ರಾಹಕರ ಮೇಲೆ ಈ ಹೊರೆಯನ್ನು ಹಾಕಲಾಗಿದೆ. ಒಟ್ಟಿನಲ್ಲಿ ಮಾರುತಿ ಕಂಪನಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಬೇಡೋ ರೀತಿ ಆಗ್ತಾ ಇದೆ.
ವಿಶೇಷ ವರದಿ: ರಾಹುಲ್ ದಯಾನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ