newsfirstkannada.com

ಕಾಂಗ್ರೆಸ್​ ನಾಯಕರಿಂದ ರಾಮ ಮಂದಿರಕ್ಕೆ ಭೇಟಿ, ವಿಶೇಷ ಪೂಜೆ.. ಪಕ್ಷದ ಬಾವುಟ ಹರಿದು ಆಕ್ರೋಶ

Share :

Published January 16, 2024 at 8:37am

  ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಬರುವುದಿಲ್ಲ ಎಂದಿದ್ದ ಕಾಂಗ್ರೆಸ್​

  ಮಕರ ಸಂಕ್ರಾಂತಿಯಂದು ದೇವಾಲಯಕ್ಕೆ ಭೇಟಿ ನೀಡಿದ್ದ ನಾಯಕರು

  ಪುಣ್ಯಸ್ನಾನ ಮಾಡಿ, ರಾಮಲಲ್ಲಾನ, ಹನುಮಾನ್​ಗೆ ವಿಶೇಷ ಪೂಜೆ

ಅಯೋಧ್ಯೆ: ಜನವರಿ 22 ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಬರುವುದಿಲ್ಲವೆಂದು ಕಾಂಗ್ರೆಸ್ ಹೇಳಿತ್ತು. ಇದರ ಬೆನ್ನಲ್ಲೇ ಮಕರ ಸಂಕ್ರಾಂತಿಯಂದು ಕೆಲ ಕಾಂಗ್ರೆಸ್​ ನಾಯಕರು ಅಯೋಧ್ಯೆಗೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿ ಮಂದಿರದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ.

​ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, ದೀಪೇಂದ್ರ ಹೂಡಾ ಹಾಗೂ ಅಖಿಲೇಶ್ ಪ್ರತಾಪ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಬಳಿಕ ಅಯೋಧ್ಯೆಯ ಸರಯೂ ನದಿಗೆ ತೆರಳಿ ಅಲ್ಲಿ ಪುಣ್ಯಸ್ನಾನ ಮಾಡಿ, ರಾಮಲಲ್ಲಾನ ದರ್ಶನ ಪಡೆದು, ಹನುಮಾನ್ ದೇವಸ್ಥಾನ ಸೇರಿದಂತೆ ಹಲವು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೇಂದ್ರದ ಕಾಂಗ್ರೆಸ್​ ನಾಯಕರು ರಾಮಮಂದಿರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ನೀವು ಬಂದಿದ್ದೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ಯುಪಿ ಕಾಂಗ್ರೆಸ್ ನಾಯಕರು, ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಖರ್ಗೆಯವರು ಯಾರಿಗೆ ನಂಬಿಕೆ ಇದೆಯೋ ಅವರು ಹೋಗಬಹುದು ಎಂದಿದ್ದಾರೆ ಅಂತ ಹೇಳಿದರು.

ಕಾಂಗ್ರೆಸ್​ ನಾಯಕರು ಅಯೋಧ್ಯೆಗೆ ಭೇಟಿ ಕೊಡುತ್ತಿದ್ದಂತೆ ಕೆಲವರು ದೇಗುಲದ ಮುಂದಿದ್ದ ಕಾಂಗ್ರೆಸ್‌ ಪಕ್ಷದ ಬಾವುಟಗಳನ್ನು ಹರಿದು ಹಾಕಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, ದೀಪೇಂದ್ರ ಹೂಡಾ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾಗ ಕೆಲವರು ಜೈ ಶ್ರೀ ರಾಮ್ ಎಂದು ಕೂಗುತ್ತಾ ದೇಗುಲದ ಮುಂದಿದ್ದ ಕಾಂಗ್ರೆಸ್ ಪಕ್ಷದ ಬಾವುಟಗಳನ್ನು ಹರಿದು ಹಾಕುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ನಾಯಕರಿಂದ ರಾಮ ಮಂದಿರಕ್ಕೆ ಭೇಟಿ, ವಿಶೇಷ ಪೂಜೆ.. ಪಕ್ಷದ ಬಾವುಟ ಹರಿದು ಆಕ್ರೋಶ

https://newsfirstlive.com/wp-content/uploads/2024/01/UP_CONGRESS.jpg

Load More