/newsfirstlive-kannada/media/post_attachments/wp-content/uploads/2024/10/MAKEUP-1.jpg)
ಹೆಣ್ಮಕ್ಕಳ ಪ್ರೀತಿಯ ಸಂಗಾತಿ ಮೇಕ್ಅಪ್ ಕಿಟ್. ಸೌಂದರ್ಯದ ಗುಟ್ಟನ್ನು ಹುದುಗಿಟ್ಟುಕೊಂಡಿರುವ ಈ ಕಿಟ್ನಲ್ಲಿ ಅಂದದ ಹೆಣ್ಣಿಗೆ ಮತ್ತಷ್ಟು ಚೆಂದ ಕಾಣಲು ಏನೆಲ್ಲಾ ಬೇಕೋ ಅವೆಲ್ಲವೂ ಬಚ್ಟಿಟ್ಟುಕೊಂಡಿರುತ್ತದೆ. ವಿಷಯ ಅದಲ್ಲ, ಒಬ್ಬರು ಬಳಸಿದ ಮೇಕ್ಅಪ್ ಐಟಂಗಳನ್ನು ಇನ್ನೊಬ್ಬರು ಬಳಸಬಹುದಾ ಅನ್ನೋದು!
ಸಾಮಾನ್ಯವಾಗಿ ಮೇಕ್ಅಪ್ ಹಂಚಿಕೊಳ್ಳಲು ಯಾರೂ ಸಲಹೆ ನೀಡಲ್ಲ. ವಿಶೇಷವಾಗಿ ನಿಮ್ಮ ಕಣ್ಣುಗಳು, ತುಟಿಗಳು ಅಥವಾ ಲೋಳೆಯ ಪೊರೆಗಳೊಂದಿಗೆ ಸಂಪರ್ಕಕ್ಕೆ ಬರುವ ಐಟಂಗಳಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಸ್ಟೈ, ಪಿಂಕ್ ಐ ಮತ್ತು ಶೀತ, ಹುಣ್ಣುಗಳಂತಹ ಸೋಂಕುಗಳಿಗೆ ಕಾರಣ ಆಗಬಹುದು. ಮತ್ತೊಬ್ಬರು ಬಳಸಿದ ವಸ್ತುಗಳನ್ನು ಯೂಸ್ ಮಾಡೋದ್ರಿಂದ ನಿಮ್ಮ ಚರ್ಮಕ್ಕೆ ಸೂಕ್ತವಾಗದಿದ್ದರೆ ಮೊಡವೆಗಳಿಗೂ ದಾರಿ ಮಾಡಿ ಕೊಡುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ:50 ವರ್ಷಗಳ ಕಾಲ ತರುಣಿಯಂತೆ ಯಂಗ್ ಆಗಿರಿ.. ಲಕಲಕ ಹೊಳೆಯಲು ನಿಮ್ಮ ಲೈಫ್ಸ್ಟೈಲ್ ಹೇಗಿರಬೇಕು?
ಬ್ಯಾಕ್ಟೀರಿಯಾ: ಮೇಕ್ಅಪ್ ವಸ್ತುಗಳಿಂದ ಬ್ಯಾಕ್ಟೀರಿಯಾಗಳು ಶೇಖರಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಅವುಗಳನ್ನು ಮುಚ್ಚದೆ ಅಥವಾ ತೆರೆದಿದ್ದರೆ.
ಕಣ್ಣುಗಳು: ಕಣ್ಣಿನ ಮೇಕಪ್ ಐಟಂಗಳಾದ ಮಸ್ಕರಾ, ಐಲೈನರ್ ಮತ್ತು ಕಾಜಲ್ ಹಂಚಿಕೊಳ್ಳುವುದು ಕಣ್ಣಿನ ಸೋಂಕುಗಳಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾಗಳು ಕಾಂಟ್ಯಾಕ್ಟ್ ಲೆನ್ಸ್‌ಗಳಿಗೆ ಅಂಟಿಕೊಳ್ಳಬಹುದು.
ತುಟಿಗಳು: ಲಿಪ್ಸ್ಟಿಕ್ ಅಥವಾ ತುಟಿಗೆ ಹಚ್ಚುವ ಬಣ್ಣವನ್ನು ಹಂಚಿಕೊಳ್ಳುವುದು ಕೂಡ ಅಪಾಯಕಾರಿ. ಇದರಿಂದಲೂ ಬ್ಯಾಕ್ಟೀರಿಯಾಗಳು ಹರಡುತ್ತವೆ.
ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು (Brush and Applicator): ಬೇರೆಯವರ ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು ಎಷ್ಟು ಸ್ವಚ್ಛವಾಗಿವೆ ಎಂದು ತಿಳಿಯುವುದು ಕಷ್ಟ. ಮೇಕ್ಅಪ್ ಹಂಚಿಕೊಳ್ಳುವ ಬದಲು ನೀವು ಸ್ವಂತ ಮೇಕ್ಅಪ್ ಹೊಂದಿರೋರು ಒಳ್ಳೆಯದು.
ಇದನ್ನೂ ಓದಿ:ತವರಿನಲ್ಲಿ ಸೆಂಚುರಿ ಸಿಡಿಸಿದ ರಚಿನ್ ರವೀಂದ್ರ.. ರೋಹಿತ್ ಟೀಮ್ ಜೊತೆ ಕನ್ನಡಿಗನ ಬ್ಯಾಟಿಂಗ್ ಅಬ್ಬರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ