newsfirstkannada.com

ಬಾಲಿವುಡ್​ನ ಮತ್ತೊಂದು ಸ್ಟಾರ್​ ಜೋಡಿ ನಡುವೆ ಬಿರುಕು -ವದಂತಿಗೆ ಟ್ವಿಸ್ಟ್ ಕೊಟ್ಟ ನಟಿಯ ಮ್ಯಾನೇಜರ್

Share :

Published June 1, 2024 at 8:07am

  1998ರಲ್ಲಿ ಅರ್ಬಾಜ್ ಖಾನ್​ರನ್ನು ಪ್ರೀತಿಸಿ ಮದುವೆಯಾಗಿದ್ದ ಮಲೈಕಾ ಆರೋರ

  2019ರಿಂದ ಅರ್ಜುನ್ ಕಪೂರ್​ ಜೊತೆಗಿನ ರಿಲೇಷನ್​ಶಿಪ್ ಬಗ್ಗೆ ನಟಿ ಬಹಿರಂಗ

  ತನಗಿಂತ 12 ವರ್ಷ ಕಿರಿಯ ವಯಸ್ಸಿನ ನಟನ ಜೊತೆ ಮಲೈಕಾ ಆರೋರ ಡೇಟಿಂಗ್

ಬಾಲಿವುಡ್​ ನಟಿ ಮಲೈಕಾ ಆರೋರ ಹಾಗೂ ಅರ್ಜುನ್ ಕಪೂರ್ ನಡುವೆ ಬಿರುಕು ಮೂಡಿದೆಂಬ ಸುದ್ದಿ ಸಾಕಷ್ಟು ಚರ್ಚೆಯಾಗುತ್ತಿದೆ. ಲಿವ್​ಇನ್ ರಿಲೇಶನ್​ಷಿಪ್​ನಲ್ಲಿದ್ದ ಜೋಡಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಅಂತಾ ಗುಲ್ ಎದ್ದಿದೆ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಗೊಂಬೆ.. ಸಂಭ್ರಮದಲ್ಲಿ ನೇಹಾ-ಚಂದನ್​.. ಅಭಿಮಾನಿಗಳಿಂದ ಶುಭ ಹಾರೈಕೆ

1998ರಲ್ಲಿ ಮಲೈಕಾ ಆರೋರ ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್​ರನ್ನು ಪ್ರೀತಿಸಿ ಮದುವೆಯಾಗಿದ್ದರು. 2017ರಲ್ಲಿ ಅರ್ಬಾಜ್ ಖಾನ್ ಹಾಗೂ ಮಲೈಕಾ ವಿಚ್ಛೇದನ ಪಡೆದುಕೊಂಡರು. ಮಲೈಕಾ ಹಾಗೂ ಅರ್ಬಾಜ್ ಖಾನ್ ದಂಪತಿಗೆ 22 ವರ್ಷದ ಮಗನಿದ್ದಾನೆ. ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಟ ಅರ್ಬಾಜ್ ಖಾನ್ ಕುಟುಂಬಸ್ಥರ ಸಮ್ಮುಖದಲ್ಲಿ ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ಮದುವೆಯಾದರು.

ಬಳಿಕ ತನಗಿಂತ 12 ವರ್ಷ ಕಿರಿಯ ವಯಸ್ಸಿನ ಅರ್ಜುನ್ ಕಪೂರ್ ಜೊತೆ ನಟಿ ಮಲೈಕಾ ಅರೋರಾ ಡೇಟಿಂಗ್​ನಲ್ಲಿದ್ದರು. 2019ರಿಂದ ಅರ್ಜುನ್ ಕಪೂರ್​ ಜೊತೆಗಿನ ರಿಲೇಷನ್​ಶಿಪ್​ ಬಗ್ಗೆ ಮಲೈಕಾ ಅವರು ಬಹಿರಂಗಪಡಿಸಿದ್ದರು. ಈ ಒಬ್ಬರು ತಮ್ಮ ರಿಲೇಷನ್​ಶಿಪ್​ ಕೊನೆಗೊಳಿಸಿಕೊಳ್ಳಲು ತೀರ್ಮಾನಿಸಿದ್ದಾರಂತೆ.

ಭವಿಷ್ಯದ ದೃಷ್ಟಿಯಿಂದ ಪರಸ್ಪರ ಮಾತಾಡಿಕೊಂಡು ದೂರ ಆಗುತ್ತಿದ್ದಾರೆ ಎಂಬ ಸುದ್ದಿಗಳು ನೀರಿನಂತೆ ಹರಿದಾಡುತ್ತಿದೆ. ಮಲೈಕಾ ಮತ್ತು ಅರ್ಜುನ್ ಬಹಳ ವಿಶೇಷವಾದ ಸಂಬಂಧ ಹೊಂದಿದ್ದಾರೆ. ಇಬ್ಬರೂ ಹೃದಯದಲ್ಲಿ ವಿಶೇಷ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ. ಅವರ ಸಂಬಂಧದ ಬಗ್ಗೆ ಮಾತನಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಮ್ಯಾನೇಜರ್ ದಿವ್ಯಾ ಖಚಿತ ಪಡಿಸಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುಳ್ಳು ವದಂತಿಗೆ ಬ್ರೇಕ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್​ನ ಮತ್ತೊಂದು ಸ್ಟಾರ್​ ಜೋಡಿ ನಡುವೆ ಬಿರುಕು -ವದಂತಿಗೆ ಟ್ವಿಸ್ಟ್ ಕೊಟ್ಟ ನಟಿಯ ಮ್ಯಾನೇಜರ್

https://newsfirstlive.com/wp-content/uploads/2024/06/malaika-arora.jpg

Load More